Friday, September 20, 2024

ಪ್ರಾಯೋಗಿಕ ಆವೃತ್ತಿ

ಪರಿಶ್ರಮದಿಂದ ವಿಜ್ಞಾನ ವಿಷಯ ಅಧ್ಯಯನ ನಡೆಸಿ: ಅಪೂರ್ವಚಂದ್ರ

ವಿಜ್ಞಾನದ ವಿಷಯ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ನಿರಂತರವಾಗಿ ಪರಿಶ್ರಮ ವಹಿಸಿ ಅಧ್ಯಯನ ನಡೆಸಿದರೆ ವಿಜ್ಞಾನ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆಯಲು ಸಾಕಷ್ಟು ಅವಕಾಶಗಳಿವೆ ಎಂದು ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಹೇಳಿದರು.

ಮದ್ದೂರು ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಮಂಡ್ಯ ಲಯನ್ಸ್ ಸಂಸ್ಧೆಯ ಸಹಯೋಗದಲ್ಲಿ ಎಕ್ಸೆಲ್‌ ಅಕಾಡೆಮಿ ಸಂಸ್ಧೆ ಹೊರ ತಂದಿರುವ ವಿಜ್ಞಾನ ವಿಷಯಗಳ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಜನಸಾಮಾನ್ಯರ ಜೀವನದಲ್ಲಿ ವಿಜ್ಞಾನವು ಬಹುಮುಖ್ಯವಾಗಿದ್ದು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹಿಂಜರಿಕೆಯನ್ನ ಬಿಟ್ಟು ವಿಜ್ಞಾನ ವಿಷಯವನ್ನು ವ್ಯಾಸಂಗ ಮಾಡಿದರೆ ಉತ್ತಮ ಸ್ಧಾನಮಾನ ಗಳಿಸುವುದರ ಜೊತೆಗೆ ಸಮಾಜ ಪೂರಕವಾದ ಅನ್ವೇಷಣೆಗಳನ್ನು ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇಡೀ ವಿಶ್ವದಲ್ಲೇ ಅತೀ ಹೆಚ್ಚು ಪ್ರತಿಭಾನ್ವಿತ ವಿಜ್ಞಾನಿಗಳನ್ನು ಹೊಂದಿರುವ ದೇಶ ಭಾರತವಾಗಿದ್ದು ಇಲ್ಲಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ವೈಯಕ್ತಿಕ ಜೀವನದ ಆಸೆಗಳಿಂದ ವಿದೇಶಗಳಿಗೆ ಫಲಾಯನವಾಗುತ್ತಿರುವುದು ವಿಷಾದನೀಯ ಎಂದ ಅವರು ವಿದ್ಯಾರ್ಥಿಗಳು ನಮ್ಮ ದೇಶದಲ್ಲೇ ನೆಲೆ ನಿಂತು ದೇಶವಾಸಿಗಳ ಅಭಿವೃದ್ದಿಗೆ ತಮ್ಮ ಸೇವೆಗೆ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ಪದವಿಪೂರ್ವ ಹಂತ ಬಹುಮುಖ್ಯವಾಗಿದ್ದು ಪರೀಕ್ಷಾ ಸಮಯ ಸಮೀಸುತ್ತಿರುವುದರಿಂದ ಉತ್ತಮ ಆರೋಗ್ಯಕರವಾದ ಪೋಷ್ಟಿಕ ಆಹಾರಗಳನ್ನು ಸೇವಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನ ಕಾಪಾಡುವುದರ ಮೂಲಕ ಶಿಕ್ಷಕರ ಮಾರ್ಗದರ್ಶನದಲ್ಲಿ ಪರೀಕ್ಷೆಯನ್ನ ಎದುರಿಸಿ ಉತ್ತಮ ಫಲಿತಾಂಶವನ್ನು ಪಡೆದುಕೊಳ್ಳುವುದರ ಮೂಲಕ ತಂದೆ-ತಾಯಿಗಳಿಗೆ ಹಾಗೂ ಸಂಸ್ಧೆಗೆ ಕೀರ್ತಿ ತರಬೇಕೆಂದು ಅವರು ಹೇಳಿದರು.

ಈ ವೇಳೆ ಪ್ರಾಂಶುಪಾಲ ಯು.ಎಸ್. ಶಿವಕುಮಾರ್, ಉಪ ಪ್ರಾಂಶುಪಾಲರಾದ ಜಿ.ಎಸ್.ನಂದಿನಿ ಹಾಗೂ ಲಯನ್ಸ್ ಸಂಸ್ಧೆಯ ಸದಸ್ಯ ಸುರೇಶ್‌ಬಾಬು, ಉಪನ್ಯಾಸಕರಾದ ಹೆಚ್.ಎಸ್.ಪಂಚಲಿಂಗೇಗೌಡ, ಎನ್.ರೇವಣ್ಣ, ಪ್ರೇಮಕುಮಾರಿ, ಸಿ. ಜಯವರ್ಧನ್, ನವೀನ್‌ಕುಮಾರ್, ಮೋಹನ್‌ಕುಮಾರ್ ಎಂ.ಟಿ, ಸಂಜನ, ರಶ್ಮಿ ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!