ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ಕಾಲು ಮುರಿತಕ್ಕೊಳಗಾದ ಮಹಿಳೆಗೆ ಯುವನಾಯಕ ಸಚ್ಚಿದಾನಂದ ಆರ್ಥಿಕ ನೆರವು ನೀಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಗುರುವಾರ ರಾತ್ರಿ ಸುರಿದಿದ್ದ ಬಿರುಗಾಳಿ ಸಹಿತ ಭಾರೀ ಮಳೆಗೆ, ಮಾದಪ್ಪ ಎಂಬುವರ ಮನೆ ಮೇಲ್ಚಾವಣಿ ಕುಸಿದು ಅವರ ಪತ್ನಿ ಭಾರತಿ ಕಾಲು ಮುರಿತಕ್ಕೊಳಗಾಗಿದ್ದರು.
ಈ ಬಗ್ಗೆ ಮಾಹಿತಿ ತಿಳಿದು ಇಂದು ಅವರ ನಿವಾಸಕ್ಕೆ ಭೇಟಿ ನೀಡಿದ ಸಚ್ಚಿದಾನಂದ ಗಾಯಾಳು ಮಹಿಳೆಯ ಆರೋಗ್ಯ ವಿಚಾರಿಸಿ ವೈಯಕ್ತಿಕವಾಗಿ 20 ಸಾವಿರ ರೂ ಧನ ಸಹಾಯ ವಿತರಿಸಿದರು.
ನಂತರ ಅದೇ ಗ್ರಾಮದ ರೈತ ನಾಗರಾಜು ಎಂಬುವವರಿಗೆ ಸೇರಿದ್ದ 9 ಮೇಕೆಗಳು ಮೃತಪಟ್ಟಿದ್ದ ಹಿನ್ನೆಲೆ ನೊಂದ ರೈತ ನಾಗರಾಜು ಮನೆಗೂ ಭೇಟಿ ನೀಡಿ ಧೈರ್ಯ ತುಂಬಿ, ಆರ್ಥಿಕ ನೆರವು ನೀಡಿದರು.
ಸ್ಥಳದಲ್ಲೇ ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಅವರಿಗೆ ದೂರವಾಣಿ ಕರೆ ಮಾಡಿ ಸಂತ್ರಸ್ತರಿಗೆ ಸರ್ಕಾರದ ವತಿಯಿಂದ ಸಿಗುವ ಪರಿಹಾರವನ್ನು ತಕ್ಷಣ ಒದಗಿಸುವಂತೆ ಮನವಿ ಮಾಡಿದರು.
ಗ್ರಾ.ಪಂ.ಸದಸ್ಯರಾದ ಸುನೀಲ್, ಲೋಕೇಶ್, ಪೈಲ್ವಾನ್ ಗಿರೀಶ್, ಪೈಲ್ವಾನ್ ಉಮೇಶ್, ಭಾಸ್ಕರ್, ಕಾರ್ತಿಕ್, ಮುಖಂಡರಾದ ಶಂಕರ್, ಶಿವಣ್ಣ, ತಿಮ್ಮಣ್ಣ,ಅಭಿ, ಬೇಕ್ರಿ ಮೋಹನ್, ಪಿ. ಹೊಸಳ್ಳಿ ಚೇತನ್ ಇತರರಿದ್ದರು.