ಸಹಕಾರ ಸಂಘದ ಮಧ್ಯಮ ವರ್ಗದವರನ್ನೆ ಗುರಿಯಾಟ್ಟುಕೊಂಡು ಹಂತ ಹಂತವಾಗಿ ಹಣ ಕಟ್ಟಿಸಿಕೊಂಡು ಕಡಿಮೆ ದರದಲ್ಲಿ ನಿವೇಶನ ಒದಗಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಆರ್.ಎನ್.ಪರಶಿವಮೂರ್ತಿ ಹೇಳಿದರು.
ಮಂಡ್ಯ ನಗರದ ರೈತಸಭಾಂಗಣದಲ್ಲಿ ನಡೆದ ಮೈತ್ರಿ ಗೃಹ ನಿರ್ಮಾಣ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹ ನಿರ್ಮಾಣ ಸಹಕಾರ ಸಂಘ 2019 ರಿಂದ ಷೇರುದಾರರನ್ನು ಮಾಡಿ, ಮಂಡ್ಯ ಸೇರಿದಂತೆ ಏಳು ಜಿಲ್ಲೆಗಳಲ್ಲಿ ಸದಸ್ಯರನ್ನು ಮಾಡುವ ಅನುಮತಿ ಪಡೆದಿದೆ, ಕಡಿಮೆ ದರದಲ್ಲಿ ನಿವೇಶನ ಕೊಡುವ ನಿಟ್ಟಿನಲ್ಲಿ ಕಾರ‍್ಯಕ್ರಮ ಹಮ್ಮಿಕೊಂಡಿದ್ದೇವೆ, ಸದಸ್ಯರಲ್ಲದ ಆಸಕ್ತರಿಗೂ ಸಹ ನಿವೇಶನ ನೀಡುವ ನಿಟ್ಟಿನಲ್ಲಿ ಕಾರ‍್ಯ ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು. 300 ಕ್ಕೂ ಹೆಚ್ಚು ಮಂದಿ ಸದಸ್ಯರು ಭಾಗವಹಿಸಿ ಯಶಸ್ವಿದ್ದರು.
ಕಾರ‍್ಯಪಾಲಕ ಅಭಿಯಂತರ ಚಂದ್ರಹಾಸ ಸಮಾರಂಭ ಉದ್ಘಾಟಿಸಿದರು. ಉಪಾಧ್ಯಕ್ಷ ಎಂ.ಮಹೇಶ್, ನಿರ್ದೇಶಕರಾದ ವಿಜಯಲಕ್ಷ್ಮಿ ರಘುನಂದನ್, ವೀಣಾಶ್ರೀ, ಸುನೀತಾ, ಎಂ.ಆರ್.ಶರ್ಮಿಳಾ, ಎಸ್.ಜ್ಯೋತಿ, ಶಿವರುದ್ರಯ್ಯ, ಮುತ್ತುರಾಜು, ಬಸವರಾಜು, ಮೋಹನ್, ಅನಂತರಾಮು, ಆನಂದ್, ರೋಹಿತ್, ಶಶಿಕಾಂತ್ ಹಾಗೂ ನಾಗಾರ್ಜುನ್ ಭಾಗವಹಿಸಿದ್ದರು.




