Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಆದರ್ಶ ಶಿಕ್ಷಕರಿಗೆ ಗುರುಕುಲ ತಿಲಕ ಪ್ರಶಸ್ತಿ ಪ್ರದಾನ

ಕನ್ನಿಕಾ ಶಿಲ್ಪ ನವೋದಯ ತರಬೇತಿ ಕೇಂದ್ರ ಮಂಡ್ಯ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಮಂಡ್ಯ ಇವರ ಸಂಯುಕ್ತ ಆಶ್ರಯದಲ್ಲಿ ಇಂದು ಇಂಡಿಯನ್ ಪಬ್ಲಿಕ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಆದರ್ಶ ಶಿಕ್ಷಕರಿಗೆ ಕೊಡಲಾಗುವ ಗುರುಕುಲ ತಿಲಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಬಿಜೆಪಿ ಯುವ ಮುಖಂಡ ಹೆಚ್.ಆರ್. ಅರವಿಂದ್ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರುನಾಡು ಸೇವಕರು ಸಂಘಟನೆಯ ಮೈಸೂರು ವಿಭಾಗದ ಅಧ್ಯಕ್ಷ  ಎಂ.ಬಿ. ನಾಗಣ್ಣಗೌಡ ವಹಿಸಿದ್ದರು. ಉತ್ತಮ ಸಾಧನೆ ಮಾಡಿದ ಶಿಕ್ಷಕರಾದ ಶಿವಣ್ಣಮಂಗಲ, ಡಾ. ಕೆ.ಹೆಚ್. ಗೋಪಾಲಕೃಷ್ಣ, ಕಾಲಿಂಪು, ನಿಂಗರಾಜು, ಡಾ. ಲಕ್ಷ್ಮಿನರಸಮ್ಮ, ಕೆ.ಆರ್.ರಾಜು, ಶಿವರಾಮ್,  ಕೊ.ನಾ.ಪುರುಷೋತ್ತಮ, ರೂಪ, ಯೋಗಮಣಿ, ಮಂಜುಳ, ಯಶಸ್ವಿನಿ, ಸರೋಜಮ್ಮ ಅವರಿಗೆ
ಗುರುಕುಲ ತಿಲಕ ಪ್ರಶಸ್ತಿಯನ್ನು ಶೈಕ್ಷಣಿಕ ಹೋರಾಟಗಾರ ಜಾಲಮಂಗಲ ನಾಗರಾಜ್ ಹಾಗೂ ಡಾ.ಆನಂದ್ ಪ್ರದಾನ ಮಾಡಿದರು.

ಪ್ರಶಸ್ತಿ ಪುರಸ್ಕೃತರ ಪರವಾಗಿ ಶಿಕ್ಷಕ ಶಿವಣ್ಣ ಮಂಗಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಡಾ.ಹೆಚ್.ಆರ್. ಕನ್ನಿಕಾ ಬರೆದ ಮನಗೆದ್ದ ಮಾತ ಝೇಂಕಾರ ಮತ್ತು ಯೋಧನ ನೆತ್ತರ ಗಾಧೆ ಮತ್ತಿತರ ಲೇಖನಗಳು ಎನ್ನುವ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಕಾಯಕಯೋಗಿ ಸಂಸ್ಥೆಯ ಅಧ್ಯಕ್ಷ ಎಂ.ಶಿವಕುಮಾರ್, ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತ ಕೃಷ್ಣ, ಡಾ.ಹೆಚ್ ಆರ್.ಕನ್ನಿಕಾ, ಪ್ರಾಧ್ಯಾಪಕ ಜಯಕುಮಾರ್, ಪೊತೇರ ಮಹದೇವ್, ಮಂಜುಳ ರಮೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು .

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!