Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಪುರಸಭೆ ವತಿಯಿಂದ ಮತದಾನ ಜಾಗೃತಿ ಮೆರವಣಿಗೆ

ಇದೇ ಏಪ್ರಿಲ್ 26ರಂದು ಪ್ರಜಾತಂತ್ರದ ಹಬ್ಬವಾದ ಲೋಕಸಭಾ ಚುನಾವಣೆಯ ಅಂಗವಾಗಿ ಮತದಾನ ಪ್ರಕ್ರಿಯೆ ಇರುವುದರಿಂದ ಯುವಕ ಯುವತಿಯರು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ರೈತ ಭಾಂಧವರು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಯೋಗ್ಯ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿ ಸಧೃಡ ಸರ್ಕಾರ ಆಸ್ತಿತ್ವಕ್ಕೆ ಬರಲು ಸಹಕರಿಸಬೇಕು ಎಂದು ಕೆ.ಆರ್.ಪೇಟೆ ಪುರಸಭೆಯ ಮುಖ್ಯ್ಯಾಧಿಕಾರಿ ಸತೀಶ್ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮತದಾನದ ಅಂಗವಾಗಿ ಜಾಗೃತಿ ಮೆರವಣಿಗೆ ನಡೆಸಿದ ಪುರಸಭೆಯ ಸಿಬ್ಬಂದಿಗಳು ಹಾಗೂ ಚುನಾವಣಾ ಶಾಖೆಯ ಸಿಬ್ಬಂದಿಗಳು ಕೈಯ್ಯಲ್ಲಿ ಪೋಸ್ಟರ್ ಗಳು ಹಾಗೂ ಬಿತ್ತಿ ಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಜಾಗೃತಿ ಮೂಡಿಸಿದರು. ಮುಖ್ಯ್ಯಾಧಿಕಾರಿ ಸತೀಶ್ ಕಡ್ಡಾಯ ಮುಕ್ತ ನ್ಯಾಯ ಸಮ್ಮತ ಮತದಾನ ಕುರಿತು ಪ್ರಮಾಣ ವಚನ ಭೋಧಿಸಿದರು

ಕೆ.ಆರ್.ಪೇಟೆ ಬಸ್ ನಿಲ್ದಾಣ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮತ್ತು ಎಪಿಎಂಸಿ ಆವರಣದಲ್ಲಿ ಮತದಾನd ಜಾಗೃತಿಯ ಅರಿವು ಮೂಡಿಸಲಾಯಿತು.

ಪುರಸಭೆಯ ಕಂದಾಯಾಧಿಕಾರಿ ರವಿಕುಮಾರ್, ಆರೋಗ್ಯ ಪರಿವೀಕ್ಷಕ ಅಶೋಕ್, ಪರಿಸರ ಎಂಜಿನಿಯರ್ ಅರ್ಚನಾ, ಸಹಾಯಕ ಎಂಜಿನಿಯರ್ ರಂಜನಿ, ಹೆಚ್.ಪಿ.ನಾಗರಾಜು, ಕುಪ್ಪಳ್ಳಿ ಸತೀಶ್, ಚುನಾವಣೆ ಶಾಖೆಯ ಶಿರಸ್ತೇದಾರ್ ಹರೀಶ್, ಗ್ರಾಮ ಆಡಳಿತ ಅಧಿಕಾರಿ ಜಗಧೀಶ್ ಸೇರಿದಂತೆ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!