Wednesday, July 24, 2024

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಪ್ರಸನ್ನ ಕುಮಾರ್ ಪ್ರಚಾರ

ದಕ್ಷಿಣ ಪದವೀಧರ ಕ್ಷೇತ್ರದ ಅಭ್ಯರ್ಥಿ ಕೆ.ಪಿ.ಪ್ರಸನ್ನ ಕುಮಾರ್ ಇಂದು ಮದ್ದೂರು ಪಟ್ಟಣದ ಮದ್ದೂರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ತಮ್ಮ ಸಾಧನೆಯ ಕೆಲಸಗಳ ಕರಪತ್ರವನ್ನು ಮತದಾರರಿಗೆ ನೀಡಿ ಮತಯಾಚಿಸಿದರು.

ಅಭಿಮಾನಿಗಳು ಹಾಗೂ ಸ್ನೇಹಿತರು ಒತ್ತಾಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. ಕಳೆದ 3-4 ವರ್ಷಗಳಿಂದ ಮಂಡ್ಯ, ಮೈಸೂರು,ಚಾಮರಾಜನಗರ,ಹಾಸನ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ 60 ಸಾವಿರಕ್ಕೂ ಹೆಚ್ಚು ಪದವೀಧರರ ನೋಂದಣಿ ಮಾಡಿಸಿದ್ದೇನೆ. ಕೊರೋನಾ ಸಂಕಷ್ಟದಲ್ಲಿ ಸಹಾಯ ಹಸ್ತ ನೀಡಿ. ನಿರುದ್ಯೋಗಿ ಪದವೀಧರರಿಗೆ ನಾಲ್ಕು ಸಾವಿರಕ್ಕೂ ಹೆಚ್ಚು ಉದ್ಯೋಗ ಕೊಡಿಸಿದ್ದೇನೆ. ಎಂದರು.

ನಾನು ಡಿ.ಕೆ ಶಿವಕುಮಾರ್ ಅವರ ಅಭಿಮಾನಿ, ಅವರೇ ನನ್ನ ರಾಜಕೀಯ ಗುರುಗಳು. ಅವರ ಆಶೀರ್ವಾದದಿಂದ ಒಂದು ಮಟ್ಟಕ್ಕೆ ಬೆಳೆದಿದ್ದೇನೆ. ಕಾರಣಾಂತರದಿಂದ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಲಿಲ್ಲ. ಆದರೂ ನಾನು ಸ್ಪರ್ಧೆ ಮಾಡಿದ್ದೇನೆ ಯಾವ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ . ನಮ್ಮ ಗುರುಗಳ ಆಶೀರ್ವಾದದಿಂದ ನಾನು ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಒಂದು ಚುನಾವಣೆಗೆ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ. ಹೀಗಾಗಿ ನಾನು ಯಾವುದೇ ಪಕ್ಷದ ಬಂಡಾಯಗಾರನಲ್ಲ. ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದೇನೆ . ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೋರಿದರು.

ಪುರಸಭಾ ಸದಸ್ಯ ಮನೋಜ್. ಕುಮಾರ್. ಯಶವಂತ್. ಪ್ರಶಾಂತ್. ಕಾರ್ತಿಕ್ . ಅರ್ಕೇಶ ಪುಟ್ಟಸ್ವಾಮಿ. ದರ್ಶನ್. ರಘು. ಹರೀಶ. ಇತರರು ಹಾಜರಿದ್ದರು.

ಇದನ್ನೂ ಓದಿ:ಮಹಾನಾಯಕ ಅಂಬೇಡ್ಕರ್ ಪಾತ್ರಧಾರಿ ಆಯುಧ್ ಬನ್ಸಾಲಿ ಮದ್ದೂರಿಗೆ ಭೇಟಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!