Thursday, September 19, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಣದಿಂದ ಮಾತ್ರ ಬದುಕು ಹಸನು ಮಾಡಲು ಸಾಧ್ಯ : ಬಿ.ಎಸ್. ಶಿವಣ್ಣ

ಶಿಕ್ಷಣದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರೀ ಗದ್ದೆಯಮ್ಮ ಸೇವಾ ಹಾಗೂ ಗ್ರಾಮೀಣಾಭಿವೃದ್ದಿ ಟ್ರಸ್ಟ್ ಮುಂದಾಗಬೇಕೆಂದು ರಾಮ ಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್‌.ಶಿವಣ್ಣ ಸಲಹೆ ನೀಡಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಬೊಪ್ಪಸಮುದ್ರ ಗ್ರಾಮದ ಗದ್ದೆಯಮ್ಮ ದೇವಸ್ಥಾನದ ಆವರಣದಲ್ಲಿ ನಡೆದ ಶ್ರೀಗದ್ದೆಯಮ್ಮ ಸೇವಾ ಹಾಗೂ ಗ್ರಾಮೀಣಾಭಿವೃದ್ದಿ ಟ್ರಸ್ಟ್ ಉದ್ಘಾಟನಾ ಸಮಾರಂಭ ಹಾಗೂ ದಾಸಶ್ರೇಷ್ಠ ಶ್ರೀ ಭಕ್ತ ಕನಕದಾಸರ 535ನೇ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು
ಮಾತನಾಡಿದರು.

ಶ್ರೀ ಗದ್ದೆಯಮ್ಮ ಸೇವಾ ಟ್ರಸ್ಟ್ ಮೂಲಕ ಶಾಲೆಯನ್ನು ತೆರೆದು ಗ್ರಾಮೀಣ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದರ ಜೊತೆಗೆ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುವುದರ ಮೂಲಕ ಸೇವೆಗೆ ನಿರಂತರವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.

ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಣೆ ಮಾಡಬೇಕು, ಪೌರಕಾರ್ಮಿಕರು ಮತ್ತು ಕೂಲಿಕಾರ್ಮಿಕರ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಂತೆ ಸರ್ಕಾರದಿಂದಲೇ ಎಲ್‌ಐಸಿ ಬಾಂಡ್‌ಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಬಡವರಿಗೆ ಅನ್ನ ನೀಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಲು ದೊಡ್ಡ ಪಿತೂರಿಯೇ ನಡೆಯುತ್ತಿದ್ದು, ಭಾಗ್ಯಗಳ ಸರದಾರ ಎಂದೆನಿಸಿಕೊಂಡಿರುವ ಸಿದ್ದರಾಮಯ್ಯ ಅವರನ್ನು ಕೈಬಲಪಡಿಸುವ ನಿಟ್ಟಿನಲ್ಲಿ ಎಲ್ಲಾರು ಒಗ್ಗಟ್ಟಾಗಿ ಅವರ ಬೆಂಬಲಕ್ಕೆ ನಿಲ್ಲಬೇಕೆಂದು ಮನವಿ ಮಾಡಿದರು.

ಮಾಜಿ ಶಾಸಕಿ ಕುಮಾರಿ ಮಲ್ಲಾಜಮ್ಮ ಮಾತನಾಡಿ, ಯುವಕರು ಒಗ್ಗಟ್ಟಿನಿಂದ ಶ್ರೀಗದ್ದೆಯಮ್ಮ ಸೇವಾ ಹಾಗೂ ಗ್ರಾಮೀಣಾಭಿವೃದ್ದಿ ಟ್ರಸ್ಟ್ ಸ್ಥಾಪನೆ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ. ಟ್ರಸ್ಟ್ ಉತ್ತಮವಾಗಿ ಸೇವಾ ಕಾರ್ಯ ಮುಂದುವರೆಸಿಕೊಂಡು ಹೋಗಬೇಕು, ನಿಮ್ಮ ಸಹಾಯಕ್ಕೆ ನಮ್ಮೂರಿನ ಎಲ್ಲಾ ಮುಖಂಡರು ಜೊತೆಯಲ್ಲಿರುತ್ತೇವೆ ಎಂದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಕ್ಕಳ ವೈದ್ಯ ಡಾ. ಶಿವಸ್ವಾಮಿ, ಹುಚ್ಚಮ್ಮ ದೇವಸ್ಥಾನ ಅಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಡಾ. ಮಹೇಶ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಶಿವಮಲವಯ್ಯ, ವೃತ್ತ ನೀರಿಕ್ಷಕ ಎಂ.ಜೆ ಲೋಕೇಶ್, ಆನಂದ್, ಯೋಜನಾ ನಿರ್ಧೇಶಕ ರಮೇಶ್, ಮಹದೇವಸ್ವಾಮಿ, ಡಾ. ಲಿಂಗರಾಜು, ಮಾಜಿ ಯೋಧ ಬೀರೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಮುನ್ನ ಮಡೇನಹಳ್ಳಿ ಗೇಟ್ ನಿಂದ ಬೀರೇಶ್ವರ ಬಸಪ್ಪ ಹಾಗೂ ಶ್ರೀ ಭಕ್ತ ಕನಕದಾಸರ ಭಾವ ಚಿತ್ರ ಮೆರವಣಿಗೆ ನಡೆಸಲಾಯಿತು.

ವೇದಿಕೆಯಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ರಾಜ್ಯ ಉಪಾಧ್ಯಕ್ಷ ಪುಟ್ಟ ಬಸವಯ್ಯ, ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ ನಂಜೇಗೌಡ, ಮುಖಂಡ ನಾಗರಾಜು, ಗದ್ದೆಯಮ್ಮ ಪೂಜಾರಿ ಸಂಜಯ್ ಹೆಗಡೆ, ಡ್ರಸ್ಟ್ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಲೋಕೇಶ್, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರಪುಲ್ಲಚಂದ್ರ, ಸಹ ಕಾರ್ಯದರ್ಶಿ ದೊಡ್ಡಯ್ಯ, ಖಜಾಂಚಿ ಶಿವಕುಮಾರ್, ಸಹ ಖಜಾಂಚಿ ಚಿಕ್ಕಯ್ಯ, ಸಂಘಟನಾ ಕಾರ್ಯದರ್ಶಿ ಬಿ.ಎನ್ ಮಂಜು, ಶಂಭು, ಬಿ ಆರ್ ದೊಡ್ಡಯ್ಯ, ನಾಗರಾಜು, ಬಿ ಕೆ ಮಹದೇವ, ನಿಂಗಮಹದೇವ, ಗೌರವ ಅಧ್ಯಕ್ಷ ಯಜಮಾನ್ ನಿಂಗಯ್ಯ, ಗೆಂಡಗಯ್ಯ, ಸುಬ್ಬಿ ನಿಂಗಯ್ಯ, ಚಿಕ್ಕಲಿಂಗ, ಬಿ.ಕೆ. ಭಾಸ್ಕರ್, ಬೀರಯ್ಯ, ಶಿವಲಿಂಗಯ್ಯ ಮಹದೇವು, ಎಚ್‌.ಡಿ.ಲಿಂಗರಾಜು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!