Wednesday, November 18, 2026

ಪ್ರಾಯೋಗಿಕ ಆವೃತ್ತಿ

ದಕ್ಷಿಣ ಭಾರತದ ಖ್ಯಾತ ನಟಿ ಬಿ.ಸರೋಜದೇವಿ ನಿಧನ

ದಕ್ಷಿಣ ಭಾರತದ ಖ್ಯಾತ ನಟಿ ಹಿರಿಯ ನಟಿ ಬಿ.ಸರೋಜಾದೇವಿ(87) ನಿಧನರಾಗಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ

ಜನವರಿ 7, 1938 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ದಶಾವರ ಗ್ರಾಮದಲ್ಲಿ ಸರೋಜಾದೇವಿ ಜನಿಸಿದ್ದರು.

ಸುಮಾರು 6 ದಶಕಗಳ ಕಾಲ ಚಿತ್ರರಂಗದ ಸೇವೆ ಮಾಡಿರುವ ಇವರು 5 ಭಾಷೆಗಳಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಚಿತ್ರರಂಗದ ಸಾಧನೆಗೆ ಇವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳು, ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಸೇರಿದಂತೆ ಹಲವು ಪುರಸ್ಕಾರಗಳು ಸಂದಿವೆ.

ತಮ್ಮ 17ನೇ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಭೀಷ್ಮ ಹೊನ್ನಪ್ಪ ಭಾಗವತರ್ ಅವರ ಮಹಾಕವಿ ಕಾಳಿದಾಸ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಆರೂವರೆ ದಶಕಗಳ ಕಾಲ ಅವರು ಚಿತ್ರರಂಗದಲ್ಲಿ ಇದ್ದರು 2019ರಲ್ಲಿ ರಿಲೀಸ್ ಆದ ಪುನೀತರಾಜ್‌ ಕುಮಾರ್ ನಟನೆಯ ‘ನಟಸಾರ್ವಭೌಮ ಅವರು ನಟಿಸಿದ ಕೊನೆಯ ಚಿತ್ರ

ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಚಿತ್ರರಂಗದ ಪ್ರವೇಶ

1955ರಲ್ಲಿ ಬಂದ ಮಹಾಕವಿ ಕಾಳಿದಾಸ ಚಿತ್ರದ ಮೂಲಕ ಸರೋಜಾ ದೇವಿ ಅವರು ಮೊದಲ ಬಾರಿಗೆ ಬಣ್ಣ ಹಚ್ಚಿದರು. ಆ ಬಳಿಕ ಅವಕಾಶಗಳು ಅವರನ್ನು ಹುಡುಕಿ ಬಂದವು ಕೇವಲ ಕನ್ನಡ ಮಾತ್ರವಲ್ಲದೆ ತಮಿಳು ತೆಲುಗು, ಹಿಂದಿ ಸಿನಿಮಾಗಳಲ್ಲೋ ಸರೋಜಾ ದೇವಿ ಅವರು ನಟಿಸಿದ್ದಾರೆ. ಅವರ ವೃತ್ತಿ ಬದುಕಿನಲ್ಲಿ ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಮೇರು ನಟರಾದ ರಾಜ್‌ಕುಮಾರ್, ಎಂಜಿಆರ್, ಎನ್‌ಟಿಆರ್, ಜೆಮಿನಿ ಗಣೇಶನ್, ಕಲ್ಯಾಣ್ ಕುಮಾರ್ ಮೊದಲಾದವರ ಜೊತೆ ಸರೋಜಾ ದೇವಿ ತೆರೆ ಹಂಚಿಕೊಂಡರು. ಒಂದು ಕಾಲದಲ್ಲಿ ತಮಿಳಿನ ಸ್ಟಾರ್ ನಟಿಯಾಗಿ ಮಿಂಚಿದ್ದರು.

ಅಮರ ಶಿಲ್ಪಿ ಜಕಣಾಚಾರಿ, ಮಲ್ಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ’ ಕಥಾಸಂಗಮ ಮುಂತಾದ ಕನ್ನಡ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ತಮಿಳಿನಲ್ಲಿ ಪಾಟ್ನಾಲಿ ಮುತ್ತು ಪಡಿಕಥ ಮೇಥೈ ಕಲ್ಯಾಣ ಪರಿಸು, ತೆಲುಗಿನಲ್ಲಿ ಪಂಡರಿ ಭಕ್ತಲು, ದಕ್ಷಯಜ್ಞದ ಹಿಂದಿಯಲ್ಲಿ ‘ಆಶಾ’ ‘ಮೆಹಂದಿ ಲಗಾ ಕ ರಖನಾ ಮೊದಲಾದ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದರು.

ಕನ್ನಡದ ಮೊಟ್ಟಮೊದಲ ವರ್ಣಮಯ ಚಿತ್ರ ‘ಅಮರ ಶಿಲ್ಪಿ ಜಕಣಾಚಾರಿ ಚಿತ್ರದ ನಾಯಕಿಯಾಗಿರುವುದು ಈ ದಾಖಲೆ ಚಿತ್ರಗಳ ಜೊತೆಜೊತೆಗೇ ನೆನಪಿಗೆ ಬರುವುದು ‘ಮಲಮ್ಮನ ಪವಾಡ, ಭಾಗ್ಯವಂತರು, ಬಬ್ರುವಾಹನ, ಶ್ರೀ ಕೃಷ್ಣರುಕ್ಕಿದೆ ಸತ್ಯಭಾಮಾ, ಲಕ್ಷ್ಮೀಸರಸ್ವತಿ ಕಥಾಸಂಗಮ’ ಕನ್ನಡದಲ್ಲಿ ಇಷ್ಟೊಂದು ಸದಭಿರುಚಿಯ ಅತ್ಯುತ್ತಮ ಚಲನಚಿತ್ರಗಳು ಪದ್ಮಭೂಷಣ ಬಿ ಸರೋಜಾದೇವಿ ಅವರ ಮುಡಿಗೇರಿದ್ದರೂ ಅವರನ್ನು ತಮಿಳು ಚಿತ್ರರಂಗದ ನಟಿ ಎಂದೇ ಬಹಳ ಜನ ಕರೆಯುತ್ತಿದ್ದರು.

ಎಂಜಿಆರ್ ಜೊತೆ 26 ಚಿತ್ರಗಳಲ್ಲಿ ನಾಯಕಿ

ಆದರೆ ತಮಿಳು ಚಿತ್ರರಂಗದವರು ಅವರನ್ನು ‘ಕನ್ನಡತ್ತು ಪೈಂಗಿಳಿ’ (ಕನ್ನಡದ ಸುಂದರಗಿಣಿ) ಎಂದೇ ಅಭಿಮಾನದಿಂದ ಕರೆಯುತ್ತಿದ್ದರು. ಕನ್ನಡದಿಂದ ತಮಿಳುನಾಡಿಗೆ ಹೋಗಿ ಸಾಧನೆ ಮಾಡಿ, ಸೂಪರ್‌ಸ್ಪಾರ್‌ಗಳಾದವರ ದೊಡ್ಡ ಪಟ್ಟಿಯೇ ಅಲ್ಲಿದೆ. ಎಂಜಿಆರ್ ಜೋಡಿಯಾಗಿ ಸರೋಜಾದೇವಿ ತಮಿಳು ಚಿತ್ರರಂಗದ ಸಾಮ್ರಾಜ್ಞೆಯಾಗಿ ಮೆರೆದವರು.

ಸುಮಾರು 200 ಚಿತ್ರಗಳಲ್ಲಿ 5 ಭಾಷಾ ಚಿತ್ರರಂಗದಲ್ಲಿ ಸರೋಜಾದೇವಿ ಅಭಿನಯದ ಛಾಪು ಮೂಡಿಸಿದ್ದಾರೆ. ತಮಿಳು ಚಿತ್ರರಂಗದಲ್ಲಿ ಎಂಜಿಆರ್ ಅವರ ಜೋಡಿಯಾಗಿ 26 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅನ್ನೇವಾ, ಎಂಗವೀಟ್ಟು ಪಿಳ್ಳೆ, ತಿರುಡಾದೆ, ಪಡಕೋಟಿ ಮೊದಲಾದ ಚಿತ್ರಗಳಲ್ಲಿ ಎಂಜಿಆರ್-ಸರೋಜಾದೇವಿ ಜೋಡಿಯ ಪ್ರಮುಖ ಚಿತ್ರಗಳು.

ತಮಿಳುನಾಡಿನಲ್ಲಿ ಆ ಕಾಲದಲ್ಲಿ ಎಂಜಿಆರ್, ಶಿವಾಜಿ ಗಣೇಶನ್ ಇಬ್ಬರೂ ಜನಪ್ರಿಯ ನ್ಯಾಯಕನಟರು. ಅವರಿಗೆ ನಾಯಕಿ ಯಾರು ಎಂದರೆ ಸರೋಜಾದೇವಿ ಅವರಿಗೆ ಆದ್ಯತೆ. ಶಿವಾಜಿ ಗಣೇಶನ್ ಅವರೊಂದಿಗೆ ಆಲಯಮಣಿ, ಪಾಲುಂ ಪಳಮುಂ, ಪುದಿಯ ಪರವೈ ಸೇರಿದಂತೆ 22 ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನಲ್ಲೂ ನಾಗೇಶ್ವರರಾವ್, ಎನ್‌ಟಿಆರ್ ಅವರೊಂದಿಗೆ ನಾಯಕಿಯಾಗಿದ್ದಾರೆ. ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರಕುಮಾರ್, ಶಮ್ಮಿ ಕಪೂರ್, ಸುನಿಲ್ ದತ್ ಅವರುಗಳ ಜೊತೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈಗ ರಶ್ಮಿಕಾ ಮಂದಣ್ಯ ದೀಪಿಕಾ ಪಡುಕೋಣೆ ಮೊದಲಾದ ನಟಿಯರು, ಹಿಂದಿ ಚಿತ್ರರಂಗಕ್ಕೂ ಪ್ರವೇಶ ಪಡೆದಿದ್ದಾರೆ ಎಂದರೆ ಅದಕ್ಕೊಂದು ಪರಂಪರೆಯನ್ನು ಸರೋಜಾದೇವಿ ಅರವತ್ತರ ದಶಕದಲ್ಲೇ ನಿರ್ಮಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ