Wednesday, November 18, 2026

ಪ್ರಾಯೋಗಿಕ ಆವೃತ್ತಿ

ಬಿ.ವೈ.ನೀಲೇಗೌಡರ ರಾಜಕಾರಣ ಅನುಕರಣೀಯ- ನರಸಿಂಹೇಗೌಡ

ಪಿಎಸ್ ಎಸ್ ಕೆ ಸಂಸ್ಥಾಪಕ, ಮಾಜಿ ಶಾಸಕ ಬಿ.ವೈ.ನೀಲೇಗೌಡರ ಅವಧಿಯ ರಾಜಕಾರಣವು ಅಭಿವೃದ್ಧಿ ಪರವಾಗಿತ್ತು, ಅವರ ರಾಜಕಾರಣ ಅನುಕರಣೀಯವಾದದ್ದು ಎಂದು ಮನ್ ಮುಲ್ ಮಾಜಿ ಅಧ್ಯಕ್ಷ ಕೆ.ಬಿ.ನರಸಿಂಹೇಗೌಡ ಹೇಳಿದರು.

ಬಿ.ವೈ.ನೀಲೇಗೌಡರ 50ನೇ ವರ್ಷದ ಸಂಸ್ಮರಣೆ ಅಂಗವಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆಯ ಮುಂಭಾಗ ಇರುವ ಬಿ.ವೈ.ನೀಲೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿ ಬಳಿಕ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಿ.ವೈ.ನೀಲೇಗೌಡರು ವ್ಯಕ್ತಿಯಲ್ಲ, ಅವರು ದೊಡ್ಡ ಶಕ್ತಿಯಾಗಿದ್ದರು. ವ್ಯಕ್ತಿಗತ ಅಭಿವೃದ್ಧಿಗಿಂತಲೂ ಸಮುದಾಯದ ಅಭಿವೃದ್ಧಿಯೇ ಮುಖ್ಯ ಧೈಯವಾಗಿರಿಸಿಕೊಂಡಿದ್ದರು. ಈ ಭಾಗದ ಜನರು ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ನೀಲೇಗೌಡರು ಕಾರಣಕರ್ತರಾಗಿದ್ದಾರೆ. ತಾಲೂಕನ್ನು ನೀರಾವರಿ ಹಾಗೂ ಬೆಂಗಾಡು ಎಂದು ವಿಂಗಡಿಸಿ ನೀರಾವರಿ ಪ್ರದೇಶದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಇಲ್ಲಿನ ಜನರ ಅಭಿವೃದ್ಧಿಗೆ ಶ್ರಮಿಸಿದವ ಮಹಾನ್ ವ್ಯಕ್ತಿ ಎಂದರು.

ಸಮಾಧಿ ಬಳಿ ಕ್ಷಮೆಯಾಚಿಸಿದ ಕೆಬಿಎನ್

ನೀಲೇಗೌಡರು ಕಾರ್ಖಾನೆಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾನು ಅವರಿಗೆ ಬೆಂಬಲ ನೀಡಿದಕ್ಕಿಂತ ಹೆಚ್ಚಾಗಿ ವಿರೋಧಿಸುತ್ತಿದ್ದೆ. ಶಾಸಕರಾದಾಗಲೂ ತದ್ವಿರುದ್ಧವಾಗಿ ಕೆಲಸ ಮಾಡಿದೆ. ನಿಮ್ಮ ವಿರುದ್ಧ ಕೇಸಿದೆ, ಅಧ್ಯಕ್ಷತೆ ವಹಿಸಬಾರದೆಂದು ಹೇಳಿ ತಪ್ಪೆಸಗಿದೆ. ಎಷ್ಟೇ ವಿರೋಧಿಸಿದರೂ ಅವರು ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಅವರ ವ್ಯಕ್ತಿತ್ವ ಬಹಳ ದೊಡ್ಡದಾಗಿತ್ತು. ನಾನು ಅವರಿಗೆ ವಿರುದ್ಧವಾಗಿದ್ದಕ್ಕೆ ಇಂದು ಅವರ ಸಮಾಧಿಯ ಮುಂದೆ ಕ್ಷಮೆ ಯಾಚಿಸುತ್ತೇನೆ. ಅವರ ಆತ್ಮ ನನ್ನನ್ನು ಕ್ಷಮಿಸಲಿ ಎಂದು ಕೆ.ಬಿ.ನರಸಿಂಹೇಗೌಡ ಹೇಳಿದರು‌.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ರಾಜ್ಯಾಧ್ಯಕ್ಷೆ ಎಚ್.ಎಲ್.ಯಮುನಾ ಮಾತನಾಡಿ, ಬಿ.ವೈ.ನೀಲೇಗೌಡರ ಪರಿಶ್ರಮದಿಂದಾಗಿ ಪಿಎಸ್‌ಎಸ್‌ ಸಕ್ಕರೆ ಕಾರ್ಖಾನೆ ನಿರ್ಮಾಣವಾಗಿದೆ. ನೀಲೇಗೌಡರು ಕಾರ್ಖಾನೆ ನಿರ್ಮಿಸಲು ಗ್ರಾಮಗಳಿಗೆ ಸುತ್ತಾಡಿ ರೈತರಿಂದ 100 ರೂ. ಷೇರು ಸಂಗ್ರಹಿಸಿ ಕಾರ್ಖಾನೆ ನಿರ್ಮಿಸಿ,
ಪಾಂಡವಪುರ, ಶ್ರೀರಂಗಪಟ್ಟಣ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಂದು ಸ್ಮರಿಸಿದರು.

ಪಿಎಸ್ ಎಸ್ ಕೆ ಮಾಜಿ ಅಧ್ಯಕ್ಷ ಭಗವಂತೇಗೌಡ, ಪ್ರಗತಿಪರ ಕೃಷಿಕ ನೆಲಮನೆ ಕೆ.ಮರಿಸ್ವಾಮಿಗೌಡ ಮಾತನಾಡಿದರು. ಬಿ.ವೈ.ನೀಲೇಗೌಡರ ಕುಟುಂಬಸ್ಥರು, ನೀಲೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿ ಸ್ಮರಿಸಿದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರು ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಜಿ.ಪಂ ಮಾಜಿ ಅಧ್ಯಕ್ಷ ಎಸ್.ಲಿಂಗಣ್ಣ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ತಾಲೂಕು ರೈತಸಂಘದ ಅಧ್ಯಕ್ಷ ಪಿ.ನಾಗರಾಜು, ಪಿಎಸ್ ಎಸ್ ಕೆ ಮಾಜಿ ಅಧ್ಯಕ್ಷರಾದ ಡಾ.ಎಂ.ಮಾಯಿಗೌಡ, ಕುಮಾರಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್, ಒಕ್ಕಲಿಗರ ವಿಕಾಸ ವೇದಿಕೆ ತಾಲೂಕು ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡ, ಗೌರವಾಧ್ಯಕ್ಷ ವೀರಭದ್ರಸ್ವಾಮಿ, ಕಾರ್ಯದರ್ಶಿ ಸಿ.ನರಸಿಂಹೇಗೌಡ, ಉಪಾಧ್ಯಕ್ಷ ಎನ್.ಮಹೇಶ್, ಸಹ ಕಾರ್ಯದರ್ಶಿ ಎ.ನಾಗರಾಜು, ಸಂಚಾಲಕ ಶಂಕಹಳ್ಳಿ ಕುಮಾರ್, ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಕೆ.ಜೆ.ಲೋಕೇಶ್, ನಿರಾಣಿ ಶುಗರ್‌ನ ಸಿಜೆಎಂ ಸಂಜಿತ್‌ಕುಮಾರ್‌, ರವಿ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ