ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕ ಬಬಿನ್ ಬೋಪಣ್ಣ ಸರ್ಕಾರದ ಆದೇಶ, ನೀತಿ ನಿಯಮ ಉಲ್ಲಂಘಿಸಿ ಅರ್ಹತೆ ಇಲ್ಲದವರಿಗೆ ಟೆಂಡರ್ಗಳನ್ನು ನೀಡುತ್ತಿದ್ದಾರೆಂದು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮೇಲಾಧಿಕಾರಿ ತಿಪ್ಪೇಸ್ವಾಮಿ ಅವರು ಮೀನುಗಾರಿಕೆ ಇಲಾಖೆ ಕಚೇರಿಗೆ ಇಂದು ಭೇಟಿ ನೀಡಿ ತನಿಖೆ ನಡೆಸಿದರು.
ಮಂಡ್ಯ ತಾಲ್ಲೂಕು ಕಾಮಧೇನು ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ಮೀನುಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಉಪ ನಿರ್ದೇಶಕ ಬಪಿನ್ ಬೋಪಣ್ಣ ಲಂಚ ನೀಡುವವರಿಗೆ ಬೇಗ ಕೆಲಸವನ್ನು ಮಾಡಿಕೊಡುತ್ತಾರೆ. ಜೊತೆಗೆ ಸರ್ಕಾರದ ಬೈಲಾಗಳನ್ನು ತಿದ್ದುಪಡಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹೇಶ್ ಮಾತನಾಡಿ, ವಂಶಪಾರಂಪರ್ಯವಾಗಿ ಮೀನುಗಾರಿಕೆ ಮಾಡುತ್ತಿದ್ದು, ಕಾನೂನು ಕಟ್ಟಳೆಗಳನ್ನು ಲೆಕ್ಕಕ್ಕೆ ಇಡದೇ, ದುಡ್ಡು ಕೊಟ್ಟವರ ಪರ ಕೆರೆಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇವರ ವಿರುದ್ಧ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಈ ದೂರಿನ ಅನ್ವಯ ಮೇಲಾಧಿಕಾರಿಗಳು ಬಂದು ತನಿಖೆ ಕಾರ್ಯವನ್ನು ಕೈಗೊಂಡಿದ್ದಾರೆ ಎಂದರು.
ಟೆಂಡರ್ದಾರರಾದ ಕೃಷ್ಣಗೌಡ ಮಾತನಾಡಿ, ಮೀನು ಸಾಕಾಣಿಕೆಗೆ ಅವಕಾಶವನ್ನು ನೀಡುತ್ತಿಲ್ಲ. ಈ ಅಧಿಕಾರಿ ಯಾವುದೇ ಸಹಕಾರವನ್ನು ನೀಡುತ್ತಿಲ್ಲ. ಸಂಬಂಧಿಸಿದ ದಾಖಲಾತಿಗಳನ್ನು ನೀಡಿದರೂ ಕೂಡ ಅಧಿಕಾರಿಗಳನ್ನು, ನಮ್ಮನ್ನು ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.




