Thursday, September 19, 2024

ಪ್ರಾಯೋಗಿಕ ಆವೃತ್ತಿ

ಜಾಮೀನು ಸಿಕ್ಕಿದೆ:ನ್ಯಾಯ ಸಿಕ್ಕಿಲ್ಲ

✍️ ಮಾಚಯ್ಯ

ಜಾಮೀನು ಸಿಕ್ಕಿದೆ
ನ್ಯಾಯ ಸಿಕ್ಕಿಲ್ಲ

ನ್ಯಾಯವೆಂಬುದು
ಮುಗಿಲನೇರಿ
ಕೂತಾಗ;
ನಿಮ್ಮೊಟ್ಟಿಗೆ
ನಾನಿಲ್ಲವೆಂದು
ಅಲ್ಲಿಂದಲೆ
ಕೂಗಿಕೂಗಿ
ಹೇಳುತಿರುವಾಗ;
ಯಕಶ್ಚಿತ್
ಜಾಮೀನೆ
ದೊಡ್ಡ
ನಿಟ್ಟುಸಿರೆನಿಸುತ್ತದೆ!
ಸಂಭ್ರಮಿಸಬಹುದಾದ
ಗೆಲುವೆನಿಸುತ್ತದೆ!!
ಸತ್ತು ಹೋಗುವಷ್ಟು
ಸಾರ್ಥಕತೆಯನೀಯುತ್ತದೆ!!!
ಅಯ್ಯೋ ನನ್ನ ಭಾರತವೆ
ಯಾಕೆ
ನೀ ಹೀಗಾದೆ?
ತಾಯಿ
ನ್ಯಾಯದೇವತೆಯೇ
ಅದ್ಯಾವ ಬೆದರಿಕೆಗೆ
ನೀ ಈ ಧರೆಯ
ತೊರೆದೆ?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!