Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಂಡೂರು ಕುರಿ-ಮೇಕೆ‌ ಸಾಕಾಣಿಕೆಯಿಂದ ಆರ್ಥಿಕವಾಗಿ ಸದೃಢ

ಬಂಡೂರು ಕುರಿ ವಿಶ್ವದಲ್ಲಿಯೇ ಪ್ರಸಿದ್ದಿ ಪಡೆದಿದ್ದು, ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಿದರೆ ಆರ್ಥಿಕವಾಗಿ ಸದೃಢರಾಗಬಹುದೆಂದು ಬಂಡೂರು ಕುರಿ ಮತ್ತು ಮೇಕೆ ರೈತ ಉತ್ಪಾದಕರ ಕಂಪನಿ ನಿರ್ದೇಶಕಿ ಜಯಮ್ಮ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿಯ ಮತ್ತಿತಾಳೇಶ್ವರ ದೇವಸ್ಥಾನದ ಆವರಣದಲ್ಲಿ ಬಂಡೂರು ಕುರಿ ಮತ್ತು ಮೇಕೆ ರೈತ ಉತ್ಪಾದಕ ಕಂಪನಿಯನ್ನು ತೆರೆದಿದ್ದು.ಇದಕ್ಕೆ ಷೇರುದಾರರಾಗುವ ಮೂಲಕ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ನಿರ್ದೇಶಕ ಶಿವಲಿಂಗಯ್ಯ ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರದ ಶಿಫಾರಸ್ಸಿಂದ ಕಂಪನಿಯನ್ನು ತೆರೆಯಲಾಗಿದೆ.ಸರ್ಕಾರದಿಂದ ಸಿಗುವ ಸಾಲ ಸೌಲಭ್ಯದ ಜೊತೆಗೆ ಕಂಪನಿಯಿಂದಲೂ ರೈತರಿಗೆ ಅನುಕೂಲವಾಗುವ ಹಲವು ಸೌಲಭ್ಯಗಳನ್ನು ನೀಡಲಾಗುತ್ತಿದೆ. ರೈತರು ಒಂದು ಸಾವಿರ ಹಣವನ್ನು ಕೊಟ್ಟು ಷೇರುದಾರರು ಆಗುವುದರ ಮೂಲಕ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಂಪನಿ ಸಿಇಓ ನಿಸರ್ಗ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕುಳ್ಳಚನ್ನಂಕ್ಕಯ್ಯ,ನಿರ್ದೇಶಕ ಲಿಂಗರಾಜು, ಹಿರಿಯ ಪಶು ವೈದ್ಯ ಡಾ. ಎನ್ ಮಂಜುನಾಥ್,ಬಸವರಾಜು,ಬೋರಯ್ಯ,ಶೋಭಾವತಿ, ಪಶು ಇಲಾಖೆಯ ಮಂಜು ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!