Saturday, November 21, 2026

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್ ಹಾಗೂ ಗ್ರಾಹಕನ ಸುಸ್ಥಿರತೆಗೆ ದಿನದರ್ಶಿಕೆ ಸಹಕಾರಿಯಾಗಲಿದೆ – ಗುರುಲಿಂಗಯ್ಯ

ಗ್ರಾಹಕರು ಬ್ಯಾಂಕಿಂಗ್ ವ್ಯವಹರಣೆಯನ್ನು ಚಾಲ್ತಿಸ್ಥಿತಿಯಲ್ಲಿಟ್ಟುಕ್ಕೊಂಡು ತನ್ನ ಹಾಗೂ ಬ್ಯಾಂಕಿನ ಸುಸ್ಥಿರತೆ ಕಾಯ್ದುಕೊಳ್ಳುವ ಮೂಲಕ ಬ್ಯಾಂಕ್ ಹಾಗೂ ಗ್ರಾಹಕನ ಸುಸ್ಥಿರತೆಗೆ ಶ್ರಮಿಸಬೇಕು, ಇದಕ್ಕೆ ದಿನದರ್ಶಿಕೆ ಸಹಕಾರಿಯಾಗಲಿದೆ ಎಂದು ಪಿಕಾರ್ಡ್ ಬ್ಯಾಂಕ್ ನ ಮಾಜಿ ಅಧ್ಯಕ್ಷ ದೇಶಹಳ್ಳಿ ಗುರಲಿಂಗಯ್ಯ ತಿಳಿಸಿದರು.

ಬ್ಯಾಂಕ್ ಕಛೇರಿಯಲ್ಲಿ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದ ಅವರು ಭೂ ಬ್ಯಾಂಕ್ ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಾ ಬಂದಿದ್ದು ರೈತರ ನೆರವಿಗೆ ಶ್ರಮಿಸುತ್ತಾ ಬಂದಿದೆ ಎಂದರು.

ರೈತರು ಮತ್ತು ಗ್ರಾಹಕರು ಬ್ಯಾಂಕ್ ನಿಂದ ಸಾಲಪಡೆದ ದಿನವೇ ಕಂತಿನ ಮರುಪಾವತಿ ಕ್ಯಾಲೆಂಡರ್ ನಲ್ಲಿ ಗುರುತು ಮಾಡಿಕ್ಕೊಂಡು ಯೋಜಿತವಾಗಿ ಸಾಲದ ಕಂತಿನ ಸಕಾಲಿಕ ಪಾವತಿಗೆ ಮುಂದಾಗಬೇಕು ಎಂದರು.

ಬ್ಯಾಂಕ್ ನ ಮಾಜಿ ಅಧ್ಯಕ್ಷ ಮಾರಸಿಂಗನಹಳ್ಳಿ ಕೃಷ್ಣೇಗೌಡ, ಅಧ್ಯಕ್ಷ ಚಾಕನಹಳ್ಳಿ ಕೆಂಪೇಗೌಡ , ಮಾಜಿ ಅಧ್ಯಕ್ಷ ನ.ಲಿ.ಕೃಷ್ಣ ,ಮುತ್ತುರಾಜ್,  ಮಾಜಿ ಉಪಾಧ್ಯಕ್ಷ ಮುಟ್ಟನಹಳ್ಳಿ ಈರೇಗೌಡ ದಾಸನಾಯಕ್, ತರಿಕೆರೆ ರಾಜು, ವ್ಯವಸ್ಥಾಪಕಿ ಭಾಗ್ಯ ಸಿಬಂದಿಗಳಾದ ಮೋಹನ್ ಆಶಾ ಸುನಿಲ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ