Friday, September 20, 2024

ಪ್ರಾಯೋಗಿಕ ಆವೃತ್ತಿ

ಬ್ಯಾಂಕ್ ಸೇವೆ ಬಗ್ಗೆ ಅರಿವಿರಲಿ- ಶಾಂತ ಎಲ್.ಹುಲ್ಮನಿ

ಶ್ರೀಮಂತರಿಗೆ  ಮಾತ್ರ ಬ್ಯಾಂಕ್‌ಗಳ ಸೇವೆ ಎನ್ನುವ ಮನೋಭಾವದಿಂದ ಹೊರ ಬಂದು, ಬಡವರು ಸಹ ಬ್ಯಾಂಕ್ ಸೇವೆಗಳನ್ನು ಬಳಸಿಕೊಳ್ಳುವ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಹೇಳಿದರು.

ಮಂಡ್ಯನಗರದ ಹೌಸಿಂಗ್ ಬೋರ್ಡ್ ಕಾಲೋನಿಯ ಬ್ಯಾಂಕ್ ಆಫ್ ಬರೋಡದ ಆರ್‌ಸಿಟಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬ್ಯಾಂಕ್‌ಗಳು ಎಲ್ಲರಿಗೂ ಸಹಕಾರಿ ಆಗಿವೆ ಎಂಬುದನ್ನು ಎಲ್ಲರೂ ಗಮನದಲ್ಲಿಟ್ಟುಕೊಂಡು ಅಲ್ಲಿನ ಸೇವೆಗಳನ್ನು ಬಳಸಿಕೊಳ್ಳಬೇಕು, ಉದ್ಯೋಗ ಮಾಹಿತಿ ಹಾಗೂ ಇದಕ್ಕೆ ಸಿಗುವ ಸೌಲಭ್ಯವನ್ನು ಬಳಸಿಕೊಂಡು ಭವಿಷ್ಯ ರೂಪಿಸಿಕೊಳ್ಳುವ ಕಡೆ ವಿದ್ಯಾರ್ಥಿಗಳು ಸಾಗಬೇಕು ಎಂದು ಸಲಹೆ ನೀಡಿದರು.

ಬ್ಯಾಂಕ್‌ಗಳಲ್ಲಿ ಸಿಗುವ ಸಾಲಸೌಲಭ್ಯ ಹಾಗೂ ಅನುದಾನ ಎಷ್ಟು ಎಂಬುದರ ಅರಿವಿರಬೇಕು. ಜೊತೆಗೆ ಅದನ್ನುಬಳಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಜನರು ಬ್ಯಾಂಕ್ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದರು.

ವಿದ್ಯಾರ್ಥಿಗಳು ಹಾಗೂ ಖಾತೆದಾರರು ತಮ್ಮ ಅವಶ್ಯಕತೆಗಳು ಹಾಗೂ ಉದ್ಯಮಕ್ಕೆ ಬ್ಯಾಂಕ್ ಸೌಲಭ್ಯ ಬಳಸಿಕೊಳ್ಳುವ ಮೂಲಕ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕರಾದ ಜಿ.ರೂಪ, ಬೆಂಗಳೂರು ಆರ್‌ಬಿಐ ವ್ಯವಸ್ಥಾಪಕರಾದ ಜೀವಿಕಾ, ನಬಾರ್ಡ್ ಎಂ.ಡಿ. ಎಂ.ಹರ್ಷಿತಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ದೀಪಕ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!