Thursday, September 19, 2024

ಪ್ರಾಯೋಗಿಕ ಆವೃತ್ತಿ

ಬ್ಯಾಂಕಿಗೆ ಹೊಸ ಠೇವಣಿ ಸಂಗ್ರಹದ ಗುರಿ

ಬ್ಯಾಂಕಿನ ಷೇರು ಬಂಡವಾಳವನ್ನು ವೃದ್ಧಿಸುವುದು, ಹೊಸದಾಗಿ ಬ್ಯಾಂಕಿನ ಠೇವಣಿಯನ್ನು ಪ್ರತಿ ವಾರ್ಷಿಕ 2.50 ಕೋಟಿಗಳಷ್ಟು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು  ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸಿ.ಬೋರೆಗೌಡ ಹೇಳಿದರು.

ಮಂಡ್ಯ ರೈತ ಸಭಾಂಗಣದಲ್ಲಿ ಮಂಡ್ಯ ಸಿಟಿ ಕೋ ಆಪರೇಟಿವ್ ಬ್ಯಾಂಕಿನ 22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ  ಅವರು ಮಾತನಾಡಿದರು.

ರಿಸರ್ವ್ ಬ್ಯಾಂಕಿನ ನ ನಿಯಮಗಳನ್ನು ಅನುಸರಿಸಿ ಸದಸ್ಯರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ, ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಪ್ರತಿದಿನ ಚಿನ್ನಾಭರಣಗಳ ಮೇಲೆ ಸಾಲವನ್ನು ನೀಡಲಾಗುತ್ತಿದೆ, ಬ್ಯಾಂಕಿನ ವ್ಯವಹಾರದಲ್ಲಿ ದಕ್ಷತೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಹಿರಿಯ ನಾಗರಿಕರು ಠೇವಣಿ ಇಡುವ ಹಣಕ್ಕೆ ಶೇ.0.50 ಬಡ್ಡಿ ನೀಡಲಾಗುವುದು, ಬ್ಯಾಂಕಿನ ಸದಸ್ಯರ ಠೇವಣಿಗೆ ಶೇ.0.25 ಮತ್ತು ಸಂಘ ಸಂಸ್ಥೆಗಳು.90 ದಿನಗಳ ಮೇಲ್ಪಟ್ಟು ತೊಡಗಿಸುವ ಠೇವಣಿಗಳಿಗೆ.ಶೇ.0.50 ಹೆಚ್ಚಿಗೆ ಬಡ್ಡಿದರ ನೀಡಲಾಗುತ್ತಿದೆ ಎಂದು ವಿವರಿಸಿದರು.

ಎಸ್.ಎಸ್.ಎಲ್.ಸಿ,  ದ್ವಿತೀಯ ಪಿಯುಸಿ ಮತ್ತು ಅಂತಿಮ ಪದವಿ ಪರೀಕ್ಷೆಯಲ್ಲಿ ಶೇ.80 ಹಾಗೂ ಅದಕ್ಕಿಂತ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದ ಹಾಗೂ ಕ್ರೀಡೆಯಲ್ಲಿ ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಧನ ನೀಡಲಾಯಿತು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಆನಂದ್, ಸದಸ್ಯರಾದ ಎಚ್.ಅಶೋಕ್ ತಿರುಮಲಾಚಾರಿ, ಎಸ್. ಕೃಷ್ಣ ಶೆಟ್ಟಿ, ಹೆಚ್.ಎಸ್.ಚೆನ್ನಪ್ಪ, ಬಿ.ಲಿಂಗರಾಜು, ಸಿ.ಸುಂದರ್, ಬಿ.ಚೌಡಯ್ಯ, ಹೆಚ್.ಆರ್.ರಮ್ಯ ಸತ್ಯ ಸಾವಿತ್ರಿ, ಸೋಮಶೇಖರ್,  ಆರ್.ನಾಗಯ್ಯ, ಕೆ.ರಾಮಲಿಂಗೇಗೌಡ ಗೌಡ ಹಾಗೂ ಬ್ಯಾಂಕಿನ ವ್ಯವಸ್ಥಾಪಕ ಜೆ. ಅಶೋಕ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!