Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | “ಅನುಭವ ಮಂಟಪ – ಬಸವಾದಿ ಶರಣರ ವೈಭವ” ರಥಯಾತ್ರೆ ಆಗಮನ

ಜಗತ್ತಿನ ಸಂಸ್ಕೃತಿ ನಾಯಕ ಬಸವಣ್ಣನವರ ತತ್ವ ಹಾಗೂ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಬಸವ ಜಯಂತಿ ಅಂಗವಾಗಿ ರಾಜ್ಯಾದ್ಯಂತ 15 ಜಿಲ್ಲೆಗಳಲ್ಲಿ ಏಪ್ರಿಲ್ 17 ರಿಂದ 29 ರವರೆಗೆ “ಅನುಭವ ಮಂಟಪ – ಬಸವಾದಿ ಶರಣರ ವೈಭವ” ರಥಯಾತ್ರೆ ಸಂಚರಿಸಲಿದ್ದು ಇಂದು ಮಂಡ್ಯ ಜಿಲ್ಲೆಗೆ ಆಗಮಿಸಿದ್ದು, ರಥಯಾತ್ರೆ ಸ್ವಾಗತಿಸಿ ಮಾತನಾಡಿದ ಅವರು, ಬಸವಣ್ಣನವರು ಕರ್ನಾಟಕ ರಾಜ್ಯಕ್ಕೆ ಮಾತ್ರವಲ್ಲ ವಿಶ್ವಕ್ಕೆ ಮಾದರಿ. ಅವರು ಇಡೀ ಜಗತ್ತಿಗೆ ವಿಶ್ವ ಗುರು ಆದವರು ಎಂದು ಹೇಳಿದರು.

ಒಬ್ಬ ಚಿಂತಕರಾಗಿ, ವಚನಕಾರರಾಗಿ 12 ನೇ ಶತಮಾನದಿಂದ ಇಲ್ಲಿಯವರೆಗೂ ಅವರು ಸಮಾಜಕ್ಕೆ ನೀಡಿರುವ ಬೋಧನೆಗಳು, ಚಿಂತನೆಗಳು, ಮೌಲ್ಯಗಳು ಹಾಗೂ ಆದರ್ಶಗಳು ನಿಜಕ್ಕೂ ಅಪಾರ ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು ಎಂದರು.

ಸಾಮಾಜಿಕ ಸುಧಾರಣೆ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಮಹತ್ತರ ಬದಲಾವಣೆಯ ಆಶಯವನ್ನು ಕಂಡಂತಹ ಮಹಾನ್ ಮಾನವತವಾದಿ ಬಸವಣ್ಣರವರು. ಇಂದು ಅವರ ಜಯಂತಿ ಅಂಗವಾಗಿ ಸರ್ಕಾರ ಕೈಗೊಂಡಿರುವ ಅನುಭವ ಮಂಟಪ – ಬಸವಾದಿ ಶರಣರ ವೈಭವ ರಥಯಾತ್ರೆಗೆ ಚಾಲನೆ ನೀಡಿದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.

ಇಂತಹ ಮಹಾನ್ ಚಿಂತಕರ ಆದರ್ಶಗಳನ್ನು ನಾಡಿನಾದ್ಯಂತ ಪಸರಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರವು ಏಪ್ರಿಲ್ 29 ಹಾಗೂ 30 ರಂದು ಅನುಭವ ಮಂಟಪ ಬಸವಾದಿ ಶರಣರ ವೈಭವ ಎಂಬ ಪರಿಕಲ್ಪನೆಯಲ್ಲಿ ಎರಡು ದಿನದ ಕಾರ್ಯಕ್ರಮವನ್ನು ಸಹ ಕೂಡಲಸಂಗಮದಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಸರ್ಕಾರದ ಆದೇಶದಂತೆ ಬಸವಣ್ಣವರ ಚಿಂತನೆ ಮತ್ತು ಆದರ್ಶಗಳ ಬಗ್ಗೆ ಮುಂದಿನ ಪೀಳಿಗೆಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರಾದ ಶಿವಕುಮಾರ್ ಬಿರಾದಾರ್, ರೆಡ್ ಕ್ರಾಸ್ ಸಭಾಧ್ಯಕ್ಷರಾದ ಡಾ. ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂದೀಶ್, ಸಮುದಾಯ ಮುಖಂಡರಾದ ಎಲ್.ಸಂದೇಶ್, ರಂಗಸ್ವಾಮಿ, ಎಂ.ವಿ ಧರಣೇಂದ್ರಯ್ಯ, ಮಂಜುನಾಥ ಬೆಟ್ಟಹಳ್ಳಿ, ರುದ್ರಸ್ವಾಮಿ, ಕೆಂಪಯ್ಯ ಸೇರಿದಂತೆ ಇನ್ನಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ