Friday, November 20, 2026

ಪ್ರಾಯೋಗಿಕ ಆವೃತ್ತಿ

ಜನಸಾಮಾನ್ಯರ ಜೊತೆ ಮೆಸ್ ನಲ್ಲಿ ಊಟ ಮಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ

ಶಾಸಕರಾದವರು ಐಷರಾಮಿ ಹೋಟೆಲ್ ಗಳಲ್ಲಿ ಊಟ ಮಾಡುವುದು ಸರ್ವೆ ಸಾಮಾನ್ಯ. ಆದರೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಮೆಸ್ ಒಂದರಲ್ಲಿ ಸಾಮಾನ್ಯ ಜನರ ಜತೆ ಕುಳಿತು ಊಟ ಮಾಡುವ ಮೂಲಕ ಎಲ್ಲರ ಗಮನಸೆಳೆದರು.

ಪಾಂಡವಪುರ ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿ ರೈತಸಂಘದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಮಧ್ಯಾಹ್ನದ ಊಟವನ್ನು ಪ್ರಕಾಶ್ ಮೆಸ್ ನಲ್ಲಿ ಸಾಮಾನ್ಯ ಜನರಂತೆಯೇ ಮಾಡಿದರು.

ತಾವೊಬ್ಬ ಶಾಸಕನೆಂಬ ಹಮ್ಮುಬಿಮ್ಮು ಬಿಟ್ಟು ಸಾಮಾನ್ಯ ಜನರ ಜತೆಯಲ್ಲಿಯೇ ಕುಳಿತು ಊಟ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಶಾಸಕರನ್ನು ಕಂಡ ಜನರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಊಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸುತ್ತಿದ್ದ ದೃಶ್ಯ ಕಂಡು ಬಂತು.

ಈ ಹಿಂದೆ ತಮ್ಮ ತಂದೆ ದಿ‌.ಕೆ.ಎಸ್.ಪುಟ್ಟಣ್ಣಯ್ಯ ಅವರು ಕೂಡ ಮೆಸ್ ಹಾಗೂ ಶೆಡ್ ಹೋಟೆಲ್ ಗಳಲ್ಲಿ ಊಟ ಮಾಡುತ್ತಿದ್ದುದ್ದನ್ನು ಇಲ್ಲಿ ಸ್ಮರಿಸಬಹುದು.

ಅಂತೆಯೇ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಕೂಡ ತಮ್ಮ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರ ರೀತಿಯಲ್ಲಿಯೇ ಮೆಸ್ ಹಾಗೂ ಶೆಡ್ ಹೋಟೆಲ್ ಗಳಲ್ಲಿ ಊಟ ಮಾಡುವ ಮೂಲಕ ತಂದೆ‌ಯವರು ನಡೆದ ಮಾದರಿಯಲ್ಲಿ ನಡೆಯ ತೊಡಗಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಜತೆ ರೈತಸಂಘದ ಮುಖಂಡ ಕನಗನಮರಡಿ ಬಲರಾಮು ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ