ಮಂಡ್ಯ ನಗರದ ಗಾಂಧಿ ಭವನದಲ್ಲಿ ಮಂಡ್ಯ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ (ರಿ) ವತಿಯಿಂದ ಮನೆ ಮನೆಗೆ ಸೌಹಾರ್ದ ಬಸವ ಜಯಂತಿ ಬಸವ ಜ್ಯೋತಿ ಕಾರ್ಯಕ್ರಮದ 134 ನೇ ಆಧ್ಯಾತ್ಮಿಕ ಕಾರ್ಯಕ್ರಮವು ಜರುಗಿತು.
ಕಾರ್ಯಕ್ರಮವನ್ನು ಚನ್ನಪಟ್ಟಣದ ವಿರತ್ತಮಠದ ಶ್ರೀಚರಮೂರ್ತಿ ಶಿವರುದ್ರಸ್ವಾಮಿ ಉದ್ಘಾಟಿಸಿ ನಂತರ ಮಾತನಾಡಿ, ಶಿವಶರಣರ ವಚನಗಳು ನಮ್ಮ ಪ್ರಾಣ ಇದ್ದಂತೆ ಅದನ್ನು ಸಂರಕ್ಷಿಸುವದಾಗಿದೆ, ನಮ್ಮ ಸಂಸ್ಕೃತಿ ನಮ್ಮ ಧರ್ಮ ವಚನಗಳನ್ನು ರಚಿಸಿಕೊಳ್ಳುವ ಹೊಣೆಯು ನಮ್ಮದಾಗಿದೆ ಎಂದರು.
12ನೇ ಶತಮಾನವು ಅನೇಕ ಅನಿಷ್ಟ ಪದ್ದತಿಗಳಿಂದ ತುಂಬಿದ ಕಾಲ ಅಂತ ಸಂದಿಗ್ಧ ಪರಿಸ್ಥಿತಿಯಲ್ಲಿ ಬಸವಣ್ಣನವರು ಈ ಜಗತ್ತಿಗೆ ಸಮಾನತೆಯನ್ನು ಸಾರಿದ ಮಹಾಪುರುಷ. ಬಸವಣ್ಣನವರು ಚಿಕ್ಕ ವಯಸ್ಸಿನಲ್ಲಿಯೇ ಉಪನಯನ ಕಾರ್ಯಕ್ರಮ ನಡೆಸುತ್ತಿದ್ದರು, ಅದರ ಪರಿಣಾಮವಾಗಿ ಮುಂದೆ ಅವರು ದೊಡ್ಡಮಟ್ಟದಲ್ಲಿ ಬೆಳೆದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಹುಣಸೂರು ತಾಲೂಕಿನ ಡಿ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಪಕರಾದ ಡಾ. ಶ್ರೀವೇಣಿ ಅವರು ಬಸವಣ್ಣನ ಜೀವನ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮವು ಅಧ್ಯಕ್ಷತೆಯನ್ನು ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಎಸ್ ನಾಗರಾಜು ವಹಿಸಿದ್ದರು, ಉಪಾಧ್ಯಕ್ಷ ದ್ಯಾವಣ್ಣ, ನಿರ್ದೇಶಕರಗಳಾದ ಬಿ.ಎಂ ಮಹದೇವಸ್ವಾಮಿ, ಹೆಚ್ ಸಿ ಶಿವಕುಮಾರ್, ಹೊನ್ನಮ್ಮ, ಲಿಂಗದೇವರು, ಎಸ್.ಆರ್ ಶಿವಕುಮಾರಸ್ವಾಮಿ, ಮುಖ್ಯ ಅತಿಥಿಗಳಾಗಿ ರಾಜಶೇಖರ್, ಎಸ್. ಪಿ ಉಮೇಶ್, ನಾಗರಾಜು, ಸವಿತ ಎಚ್ ಸಿ, ಕುಮಾರಸ್ವಾಮಿ ಪಾಲ್ಗೊಂಡಿದ್ದರು.




