Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಸವಣ್ಣನವರ ತತ್ವ- ಆದರ್ಶಗಳು ಪ್ರಸ್ತುತ

12 ನೇ ಶತಮಾನದ ಬಸವಣ್ಣನವರ ತತ್ವ -ಆದರ್ಶಗಳು 21 ನೇ ಶತಮಾನದಲ್ಲಿಯೂ ಸಹ ಪ್ರಸ್ತುತವಾಗಿದೆ. ಬಸವಣ್ಣನವರ ವಚನಗಳಿಂದ ಹೊರಗಿನ ಕತ್ತಲೆಯನ್ನು ಕಳೆದು ಜ್ಞಾನವನ್ನು ಪಸರಿಸುವ ಬೆಳಕು ಪಡೆಯಬಹುದು ಎಂದು ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಎಸ್.ನಾಗರಾಜು ಅಭಿಪ್ರಾಯಪಟ್ಟಿದ್ದಾರೆ.

ಮದ್ದೂರು ತಾಲೂಕಿನ ವೈದ್ಯನಾಥಪುರ ಮಠದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘ ನಿ. ಮಂಡ್ಯ ಹಾಗೂ ಶ್ರೀ ಶಾಂತೇಶ್ವರ ಕದಂಬ ಜಂಗಮ ಮಠ ವೈದ್ಯನಾಥಪುರ ಇವರ ಸಂಯುಕ್ತಾಶ್ರಯದಲ್ಲಿ 889ನೇ ಬಸವ ಜಯಂತಿ ಹಾಗೂ ಹುಣ್ಣಿಮೆ ಧಾರ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಸವಣ್ಣನವರು ಹೇಳಿದಂತೆ ಮನುಷ್ಯನಾಗಿ ಮತ್ತು ಪ್ರತಿಯೊಬ್ಬ ಮನುಷ್ಯನು ಬಸವಣ್ಣವರ ಹಾದಿಯಲ್ಲಿ ಬದುಕಬೇಕಾಗಿದೆ. ಹುಟ್ಟು ಮತ್ತು ಸಾವು ಎರಡರ ಮಧ್ಯೆ ಬದುಕು ನಮ್ಮ ಕೈಯಲ್ಲಿದೆ. ಅಧ್ಯಾತ್ಮ ಸಂಸ್ಕಾರ ನಮ್ಮ ಬದುಕಿಗೆ ಬೇಕಾಗಿದೆ ಎಂದರು.

ಕಳೆದ ಹತ್ತು ವರ್ಷಗಳಿಂದ ಸತತವಾಗಿ ಕೂಡ ಧಕ್ಕೆ ಬರದ ಹಾಗೆ ಜ್ಯೋತಿ ಹಚ್ಚುವ ಮುಖಾಂತರ ಮನೆ ಮನೆಯಲ್ಲಿ ಬಸವ ಜ್ಯೋತಿ ಕಾರ್ಯಕ್ರಮ ಆಚರಿಸಿಕೊಂಡು ಬರುತ್ತಿದೆ.

ಮೊದಲನೆಯ ಕಾರ್ಯ ಕ್ರಮದಲ್ಲಿ ಒಂದು ಜ್ಯೋತಿ ಹಚ್ಚಿ ,ಈಗ 120 ನೇ ಕಾರ್ಯಕ್ರಮದ ಜ್ಯೋತಿ ಹಚ್ಚಲಾಗಿದೆ.ಹುಣ್ಣಿಮೆಯ ದಿನ ಧಾರ್ಮಿಕ ಕಾರ್ಯವನ್ನು ಜ್ಯೋತಿಯನ್ನು ಬಸವಾದಿ ಶರಣರಿಗೆ ಬೆಳಗಿದ ಮೇಲೆ ಕಾರ್ಯ ಕ್ರಮ ಪ್ರಾರಂಭವಾಯಿತು.

ಕಾರ್ಯಕ್ರಮದಲ್ಲಿ ವೈದ್ಯನಾಥಪುರ ಸ್ವಾಮಿಗಳು ಶ್ರೀ ಶಾಂತೇಶ್ವರ ಕದಂಬ ಜಂಗಮ ಮಠದ ಪರಮಪೂಜ್ಯ ಶ್ರೀಶ್ರೀ ರೇಣುಕಾಶಿವಾಚಾರ್ಯ , ಪರಮಪೂಜ್ಯ ಶ್ರೀಶ್ರೀ ಷಡಕ್ಷರ ದೇಶಿಕೇಂದ್ರಸ್ವಾಮಿಗಳು, ಶ್ರೀ ಜ.ಬ.ಪ.ಸ.ಸಂಘದ ಮಾಜಿ ಅಧ್ಯಕ್ಷರು ಶರಣ ರುದ್ರಸ್ವಾಮಿರವರು, ಶರಣ ಮಹದೇವಣ್ಣ, ಪಿ.ಹೆಚ್.ಡಿ. ಸಂಶೋಧನಾ ವಿದ್ಯಾರ್ಥಿ ಮಲ್ಲಿಕಾರ್ಜುನ, ಎಸ್.ಆರ್. ಶಿವಕುಮಾರಸ್ವಾಮಿ, ಹೆಚ್.ಸಿ. ಶಿವಕುಮಾರ್,
ಶರಣ ಮಲ್ಲಿಕಾರ್ಜುನ, ಶರಣೆ ಮಹದೇವಮ್ಮ, ಶರಣೆ ಭಾಗ್ಯಮ್ಮ ಮತ್ತು ಶರಣ ದ್ಯಾವಣ್ಣ ಡಿ. ಸುಂಡಹಳ್ಳಿ
ಶರಣ ಗುರುಸಿದ್ದಪ್ಪ , ಶರಣ ಶಿವಲಿಂಗಪ್ಪ ಮತ್ತು ಶರಣ ಶಂಕರಪ್ಪ ಇತರರಿದ್ದರು.

ಇದನ್ನು ಓದಿ : ಸಮಾನತೆ ಸಾರಿದ ಬಸವಣ್ಣ ವಿಶ್ವಕ್ಕೆ ಮಾದರಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!