Friday, November 20, 2026

ಪ್ರಾಯೋಗಿಕ ಆವೃತ್ತಿ

ಬೆಳಗಾವಿ | ಅತ್ಯಾಚಾರ ಆರೋಪಿ ಲೋಕೇಶ್ವರ ಸ್ವಾಮಿಯ ಮಠ ನೆಲಸಮ

ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಅತ್ಯಾಚಾರ ಆರೋಪದ ಮೇಲೆ ಸ್ವಯಂ ಘೋಷಿತ ಮಠಾಧೀಶ ಲೋಕೇಶ್ವರ ಸ್ವಾಮಿ ಎಂಬುವರನ್ನು ಬಂಧಿಸಿದ ನಂತರ, ಅವರಿಗೆ ಸೇರಿದ ಮಠವನ್ನು ಬೆಳಗಾವಿ ರಾಯಬಾಗ ತಾಲ್ಲೂಕು ಆಡಳಿತದ ಅಧಿಕಾರಿಗಳು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ನೆಲಸಮಗೊಳಿಸಿದ್ದಾರೆ.

ಮೇಖಳಿ ಗ್ರಾಮದ ಸರ್ವೇ ನಂ. 225 ರಲ್ಲಿ ಸರ್ಕಾರಿ 8 ಎಕರೆ ಗೋಮಾಳವನ್ನು ಅತಿಕ್ರಮಣ ಮಾಡಿಕೊಂಡು 8 ವರ್ಷಗಳ ಹಿಂದೆ ಲೋಕೇಶ್ವರ ಸ್ವಾಮೀಜಿ ಅಕ್ರಮವಾಗಿ ಮಠ ನಿರ್ಮಿಸಿಕೊಂಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.

ಈ ಭೂಮಿಯ ಪರಿಶೀಲನೆ ನಡೆಸಿದ ರಾಯಬಾಗ ತಹಶಿಲ್ದಾರರು ಮಠವನ್ನು ತೆರವುಗೊಳಿಸುವಂತೆ ಕಳೆದ ವಾರ ನೋಟಿಸ್ ನೀಡಿದ್ದರು. ತಡರಾತ್ರಿ ತಹಶಿಲ್ದಾರರ ಸಮ್ಮುಖದಲ್ಲಿ ಮೂರು ಜೆಸಿಬಿ ಬಳಸಿ ಮಠವನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ. ಮೂರು ಬುಲ್ಡೋಜರ್‌ ಗಳನ್ನು ಬಳಸಿ ಮಠವನ್ನು ಕೆಡವಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಠಕ್ಕೆ ಸಂಬಂಧಿಸಿದ ದೇವಾಲಯವನ್ನೂ ಕೆಡವಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ