Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಇಓ ಶಾಸಕರ ಕೈಗೊಂಬೆ ಆಗುವುದು ಬೇಡ : ಡಾ.ಹೆಚ್.ಎನ್.ರವೀಂದ್ರ ಕಿಡಿ

”ಸರ್ಕಾರಿ ಅಧಿಕಾರಿಗಳು 5 ವರ್ಷದ ಅವದಧಿಗೆ ಬಂದು ಹೋಗುವ ಶಾಸಕರ ಕೈಗೊಂಬೆ ಆಗುವುದು ಬೇಡ, ಮೊದಲು ಶಾಲೆಗೆ ಎಲೆಕ್ಟ್ರಿಸಿಟಿ, ಪ್ಲೆಗ್ ಪಾಯಿಂಟ್ ಹಾಗೂ ಶೌಚಾಲಯ  ಒದಗಿಸುತ್ತಾ ಗಮನ ನೀಡಲಿ” ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹೆಚ್.ಎನ್.ರವೀಂದ್ರ ಕಿಡಿಕಾರಿದರು.

ಪಾಂಡವಪುರ ತಾಲ್ಲೂಕಿನ ಚಿನಕುರುಳಿಯಲ್ಲಿ ನಡೆದ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಬಿಇಓ ಲೋಕೇಶ್ ವಿರುದ್ದ ವಾಗ್ದಾಳಿ ನಡೆಸಿದ ಅವರು, ಮಾಜಿ ಶಾಸಕ ಕೆಂಪೇಗೌಡ ಅವಧಿಯಲ್ಲಿ ಚಿನಕುರಳಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭವಾಯಿತು. ಹೀಗಾಗಿ ಶಾಲೆ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಆದರೆ ಬಿಇಓ ಲೋಕೇಶ್ ಅನುಮತಿ ನೀಡಲು ಆಟವಾಡಿಸಿದ್ದಾರೆ. ಭಾನುವಾರದ ರಜಾದಿನದಲ್ಲಿ ಶಾಲೆ ಆವರಣದಲ್ಲಿ ಆರೋಗ್ಯ ಶಿಬಿರ ನಡೆಸಲು ಅವಕಾಶ ಇದೆ. ಇಷ್ಟಾದರೂ ಬಿಇಓ ಸ್ಥಳಕ್ಕೆ ಅನುಮತಿ ನೀಡಲು ಮೀನಾಮೇಷ ಎಣಿಸುವ ಮೂಲಕ ರಾಜಕೀಯ ಮಾಡಿದ್ದಾರೆ.

ಬಿಇಓ ಅವರನ್ನು ಶಾಸಕಸಿ.ಎಸ್.ಪುಟ್ಟರಾಜು ಹೆದರಿಸಬಹುದು, ಇಲ್ಲ ಬಿಇಓ ಶಾಸಕರಿಗೆ ಹೆದರಿರಬಹುದು. ಸ್ಥಳ ನೀಡಲು ಮೀನಾಮೇಷ ಎಣಿಸಿದ ಬಿಇಓ ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಸ್ವಿಚ್ ಬೋರ್ಡ್ ಇಲ್ಲ. ಶೌಚಗೃಹ ಸರಿಯಿಲ್ಲ. ಮೊದಲು ಅದನ್ನು ಸರಿಪಡಿಸಲು ಮುಂದಾಗಲಿ, ಅದನ್ನು ಬಿಟ್ಟು ಶಾಲೆ ಸ್ಥಳಕ್ಕೆ ಅನುಮತಿ ನೀಡಲು ರಾಜಕೀಯ ಮಾಡುವನ್ನು ಬಿಡಲಿ ಎಂದು ಸಲಹೆ ನೀಡಿದರು.

500 ಮಂದಿಗೆ ಆರೋಗ್ಯ ತಪಾಸಣೆ 

ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಭಾನುವಾರ ಬೆಳಗ್ಗೆ 9ರಿಂದ ಸಂಜೆ 4 ರವರೆಗೆ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶ ಕ್ಯಾನ್ಸರ್‌ಗಳ ಹಾಗೂ ಸಾಮಾನ್ಯ ರೋಗಗಳ ಉಚಿತ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರದಲ್ಲಿ 500 ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನಡೆಸಲಾಯಿತು.

ಬಿಜಿಎಸ್ ಗ್ಲೋಬಲ್ ವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಡ್ಯ, ಎಚ್.ಎನ್.ಆರ್.ಫೌಂಡೇಷನ್ ಇವರ ಸಹಯೋಗದಲ್ಲಿ ಸರಳ, ಸಜ್ಜನಿಕೆಯ ವ್ಯಕ್ತಿತ್ವದ ಮಾಜಿ ಶಾಸಕ ದಿ.ಕೆ.ಕೆಂಪೇಗೌಡರ ಸ್ಮರಣಾರ್ಥವಾಗಿ ಆಯೋಜಿಸಿದ್ದ ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಮಂದಿ ತಪಾಸಣೆಗೊಳಗಾದರು. 25ಕ್ಕೂ ಹೆಚ್ಚು ಮಂದಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದರು.

ಶಿಬಿರಕ್ಕೆ ಚಾಲನೆ ನೀಡಿದ ಎಚ್‌ಎನ್‌ಆರ್ ಫೌಂಡೇಷನ್‌ನ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಕ್ಷೇತ್ರದಲ್ಲಿ ಮೂರು ಬಾರಿ ಶಾಸಕರಾಗಿದ್ದ ಮಾಜಿ ಶಾಸಕ ದಿ.ಕೆಂಪೇಗೌಡರ ಸ್ಮರಣಾರ್ಥವಾಗಿ ಎಚ್‌ಎನ್‌ಆರ್ ಫೌಂಡೇಷನ್ ವತಿಯಿಂದ ನಡೆದ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ಜನರು ತಪಾಸಣೆಗೆ ಒಳಗಾಗಿದ್ದಾರೆ. ತಾಲೂಕಿನಲ್ಲಿ ಸಾಕಷ್ಟು ಮಹಿಳೆಯರು ಗರ್ಭಕೋಶ ಹಾಗೂ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಹೀಗಾಗಿ ಈ ಶಿಬಿರ ಆಯೋಜಿಸಲು ನಿರ್ಧರಿಸಲಾಯಿತು. ಶಿಬಿರದಲ್ಲಿ25ಕ್ಕೂ ಹೆಚ್ಚು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದು, ಸದ್ಯದಲ್ಲೇ ಅವರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಕೃಷ್ಣೇಗೌಡ, ಸಂಪಹಳ್ಳಿ ಉಮೇಶ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕರಾದ ಶ್ಯಾದನಹಳ್ಳಿ ಬಾಬು, ಎಚ್.ಎನ್.ದಯಾನಂದ, ಕಾಂಗ್ರೆಸ್ ಮುಖAಡರಾದ ಸರ್ವೇಶ್, ಸಿ.ಕೆ.ಮಂಜುನಾಥ್, ಚಿನಕುರಳಿ ಚಂದ್ರಶೇಖರ್, ಹಿರೇಮರಳಿ ಶಿವಕುಮಾರ್, ಕೆ.ಬಿ.ರಾಮು,
ಹಾರೋಹಳ್ಳಿ ಕೊನಾರಿ ಮಂಜು ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!