Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಯಾತ್ರೆ : ರಾಹುಲ್ ಗೆ ಸಾಥ್ ನೀಡಿದ ಸೋನಿಯಾ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ಎಐಸಿಸಿ ಅದಿನಾಯಕಿ ಸೋನಿಯಾಗಾಂಧಿ ಅವರು ಗುರುವಾರ ಪಾಂಡವಪುರದ ಬೆಳ್ಳಾಳೆ ಗ್ರಾಮದ ಬಳಿ ಜೊತೆ ಜೊತೆಯಾಗಿ ಹೆಜ್ಜೆ ಹಾಕುವ ಮೂಲಕ ತಮ್ಮ ಮಗನಿಗೆ ಸಾಥ್ ನೀಡಿದರು.

ತಮಿಳುನಾಡಿದ ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯಲ್ಲಿ ಇದುವರೆಗೆ ಸೋನಿಯಾ ಅವರು ಭಾಗವಹಿಸಿರಲಿಲ್ಲ ಆದರೆ ಯಾತ್ರೆ ಕರ್ನಾಟಕದ ಮಂಡ್ಯ ಜಿಲ್ಲೆಗೆ ಆಗಮಿಸಿದಾಗ ಅವರು ಜೊತೆ ಸೇರಿಕೊಂಡು ಐತಿಹಾಸಿಕ ಯಾತ್ರೆಗೆ ಬೆಂಬಲ ನೀಡಿದರು.

ಈ ಕ್ಷಣವನ್ನು ರಾಹುಲ್ ಗಾಂಧಿ ಅವರು ಪಕ್ಷದ ಟ್ವಿಟರ್ ನಲ್ಲಿ  “ಮಾ (ತಾಯಿ)” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.  ಈ ಕ್ಷಣದಲ್ಲಿ ಸೋನಿಯಾ ಗಾಂಧಿ ಅವರನ್ನು ಜನರು ಸುತ್ತುವರೆದರು. ಆಗ ರಾಹುಲ್ ಅವರ ಪಾದಗಳ ಬಳಿ ಮಂಡಿಯೂರಿ ಕುಳಿತು ನೋಡಿ ನಗುತ್ತಿರುವಾಗ ಆಕೆಯ ಶೂಗಳ ಲೇಸ್‌ಗಳನ್ನು ಕಟ್ಟಿದ್ದ ದೃಶ್ಯ ತಾಯಿ ಮಗನ ಭಾಂಧವ್ಯವನ್ನು ಬಿಂಬಿಸುವಂತೆ ಇತ್ತು.

ಈ ವರ್ಷದ ಆರಂಭದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದ ಸೋನಿಯಾ ಗಾಂಧಿ ಅವರು, ಆ ನಂತರ ಇದೆ ಮೊದಲ ಭಾರಿಗೆ ಸಾರ್ವಜನಿಕ ಪ್ರವಾಸ ಕೈಗೊಂಡಿದ್ದಾರೆ.  ಅವರು ಈ ಹಿಂದೆ  ಕೊನೆಯದಾಗಿ 2016 ರಲ್ಲಿ ವಾರಣಾಸಿಯ ರೋಡ್ ಶೋನಲ್ಲಿ ಭಾಗವಹಿಸಿದ್ದರು.

ತಾಯಿ ಮಗನ ಬಾಂಧವ್ಯದ ಭಾವಚಿತ್ರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಹಿಂದಿಯಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ಅದರಲ್ಲಿ ” ತಾಯಿಯ ಪ್ರತಿ ಉಸಿರಲ್ಲೂ ಆಶೀರ್ವಾದವಿದೆ, ತಾಯಿಯ ಪ್ರೀತಿ, ಮಮತೆಯೂ ಎಂದಿಗೂ ಬದಲಾಗುವುದಿಲ್ಲ ಎಂದು ಬರೆದು ಕೊಂಡಿದ್ದಾರೆ.

ಸೋನಿಯಾ ಗಾಂಧಿ ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವುದು ಪಕ್ಷಕ್ಕೆ ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಹೇಳಿದರು. ಕಳೆದ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಆರಂಭವಾದ ಕಾಂಗ್ರೆಸ್‌ನ ರಾಷ್ಟ್ರವ್ಯಾಪಿ ಭಾರತ ಜೋಡೋ ಪ್ರಚಾರಾಂದೋಲನ ಸೆ.30ರಂದು ಕರ್ನಾಟಕ ಪ್ರವೇಶಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!