Friday, September 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ₹2.15 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕರ ಭೂಮಿಪೂಜೆ

ಮಂಡ್ಯ ವಿಧಾಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಒಟ್ಟು ₹ 2.15 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಪಿ.ರವಿಕುಮಾರ್‌ಗೌಡ ಗಣಿಗ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಆಯೋಜಿಸಿದ್ದ ಜಲಜೀನವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್, ನೀರಿನ ಟ್ಯಾಂಕ್ ಮತ್ತು ಗ್ರಾಮದ 707 ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಾಮಗಾರಿಯು 1 ಕೋಟಿ 70 ಲಕ್ಷ ರೂ ವೆಚ್ಚದಲ್ಲಿ ನಡೆಯಲಿದೆ ಎಂದರು.

ಮಂಡ್ಯ ತಾಲೂಕಿನ ತಂಡಸನಹಳ್ಳಿ ಗ್ರಾಮಕ್ಕೆ 45 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ, ಒಟ್ಟು 900 ಮನೆಗಳಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಒದಗಿಸಲು ಸನ್ನದ್ದಾರಾಗಿದ್ದೇವೆ, ನೀರಿನ ಟ್ಯಾಂಕ್‌ ನಿರ್ಮಾಣವು ನಡೆಯಲಿದೆ, ಒಟ್ಟು 17 ಕೀಲೋಮೀಟರ್ ಪೈಪ್ ಲೈನ್ ಅಳವಡಿಸಲಾಗುತ್ತದೆ ಎಂದರು.

ಅಂಬೇಡ್ಕರ್‌ ಭವನ ಅಭಿವೃದ್ದಿ

ಪಣಕನಹಳ್ಳಿಯಲ್ಲಿ ಶಾಲೆ ಅಭಿವೃದ್ದಿಗೆ 1 ಲಕ್ಷದ 20 ಸಾವಿರ ರೂ. ಮತ್ತು ಅಂಬೇಡ್ಕರ್‌ಭವನ ಅಭಿವೃದ್ದಿಗೆ 4 ಲಕ್ಷ ರೂ.ಗಳಲ್ಲಿನ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಗಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪ್ಪರಕನಹಳ್ಳಿಯಲ್ಲೂ 5 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆಲಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ದಿ ಕಾರ್ಯಗಳು ಸಾಗಲಿವೆ, ನುಡಿದಂತೆ ಸರ್ಕಾರವು ಅಭಿವೃದ್ದಿಗಳನ್ನು ಕೈಗೊಂಡಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರವು ನುಡಿದಂತೆ ನಡೆಯುತ್ತಿದೆ, ಮಹಿಳೆಯರಿಗೆ ಉಚಿತ ಪ್ರಯಾಣದ ವ್ಯವಸ್ಥೆಯಾಗಿದೆ, ಮಹಿಳೆ ಯರ ಖಾತೆಗೆ 2000 ರೂ.ಹಣ ಬರುತ್ತಿದೆ, ಬರದಿದ್ದವರು ಕೂಡಲೇ ನ್ಯೂನತ್ಯೆಗಳನ್ನು ಸರಿಸಿಪಡಿಸಿಕೊಂಡು ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ಗ್ರಾಮ ಮತ್ತು ಜಮೀನುಗಳ ಸಂಪರ್ಕ ರಸ್ತೆಗಳ ಅಭಿವೃದ್ದಿಗೆ ಮನವಿ ಸಲ್ಲಿಸಿದರು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ದಿಗಳು ಸಾಗಲಿವೆ ಎಂದು ಭರವಸೆ ನೀಡಿದರು. ಗ್ರಾಮಸ್ಥರು ಶಾಸಕರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸಾಗರ್, ಅಭಿಯಂತರೆ ಬಿಂದು, ತಾ.ಪಂ. ಮಾಜಿ ಸದಸ್ಯ ಪ್ರಶಾಂತ್‌ಬಾಬು, ಕೆರಗೋಡು ಗ್ರಾ.ಪಂ.ಅಧ್ಯಕ್ಷ ನವೀನ್, ಸದಸ್ಯರಾದ ನಾಗರತ್ನ, ರಮೇಶ್, ಶ್ರೀಕಾಂತ್, ಸಾವಿತ್ರಿ, ರಾದಾ, ಶಿವು, ಕಿಟ್ಟಿ,ವಾಟರ್‌ಮನ್‌ಗಳಾದ ದರ್ಶನ್, ರವಿ, ಪಣನಹಳ್ಳಿಯ ಅರುಣ್, ದೊರೆ, ಮಂಡ್ಯ ಗ್ರಾಮಾಂತರ ಪಂಚಾಯತಿ ಆನಂದ್, ಶಶಿಧರ್, ಬೋರಲಿಂಗು, ಉಮೇಶ್, ಮಧು, ತಂಡಸನಹಳ್ಳಿಯ ಶಂಕರ್, ಯಜಮಾನರು ಇದ್ದರು. ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!