Thursday, October 10, 2024

ಪ್ರಾಯೋಗಿಕ ಆವೃತ್ತಿ

ಪಕ್ಷಾತೀತವಾಗಿ ಮಧು ಜಿ ಮಾದೇಗೌಡರ ಬೆಂಬಲಿಸಿ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಜೂನ್ 13 ರಂದು ನಡೆಯಲಿದ್ದು,ಕಾವೇರಿ ಹೋರಾಟಗಾರ ಜಿ.ಮಾದೇಗೌಡರ ಅವರ ಪುತ್ರ ಮಧು ಅವರನ್ನು ಗೆಲ್ಲಿಸುವ ಮೂಲಕ ಋಣ ತೀರಿಸುವ ಅವಕಾಶ ನಮ್ಮ ಮುಂದಿದ್ದು,ಪಕ್ಷಾತೀತವಾಗಿ ಬೆಂಬಲಿಸಬೇಕೆಂದು ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿ ಗೌಡ ತಿಳಿಸಿದರು.

ಮೈಸೂರಿನಲ್ಲಿ ಅವರಿಂದು ಶ್ರೀ ಶ್ರೀ ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು,ಸುದ್ದಿಗಾರರೊಂದಿಗೆ ಮಾತನಾಡಿದರು. ಮಧು ಜಿ. ಮಾದೇಗೌಡ ಅವರ ಹಿನ್ನೆಲೆಯನ್ನು ಗಮನಿಸುವುದಾದರೆ ಎಲ್ಲರಿಗಿಂತ ತುಸು ಎತ್ತರದಲ್ಲಿಯೇ ಇದ್ದಾರೆ.

ಇವರು ಹೋರಾಟದ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಸ್ವತಃ ಶಿಕ್ಷಣವಂತರು, ಕಳೆದ 25 ವರ್ಷಗಳಿಂದ ಭಾರತಿ ವಿದ್ಯಾಸಂಸ್ಥೆಯನ್ನು ಮುನ್ನಡೆಸುವ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡುವ ಕೆಲಸವನ್ನು ಮಾಡಿದ್ದಲ್ಲದೆ, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ್ದಾರೆ.

ಜಿ.ಮಾದೇಗೌಡರ ಋಣ ತೀರಿಸುವ ಸದಾವಕಾಶ

ಜಿ.ಮಾದೇಗೌಡರವರು ಜನತೆಗಾಗಿಯೇ ಸೇವೆ ಸಲ್ಲಿಸಿದವರು. ಕರ್ನಾಟಕದ ನಾಡು, ನುಡಿ, ಜಲಕ್ಕೆ ಸಂಬಂಧಪಟ್ಟಂತೆ ಹೋರಾಟವನ್ನು ಮಾಡಿಕೊಂಡೇ ಬಂದವರು. ಪಂಚಾಯಿತಿಯಿಂದ ದೆಹಲಿವರೆಗೂ ಇವರ ಹೋರಾಟವನ್ನು ನಾಡಿನ ಸಮಸ್ತ ಜನತೆ ನೋಡಿದ್ದಾರೆ. ಇವರನ್ನು ಚಿಕ್ಕಿಂದಿನಿಂದಲೂ ನೋಡಿಕೊಂಡೇ ಬೆಳೆದ, ಅವರ ಆದರ್ಶ, ಸಿದ್ಧಾಂತವನ್ನು ಹತ್ತಿರದಿಂದ ಕಂಡಂತ ಮಧು ಮಾದೇಗೌಡರನ್ನು ಗೆಲ್ಲಿಸುವ ಮೂಲಕ ಕಾವೇರಿ ಹೋರಾಟಗಾರರಾದ ಜಿ ಮಾದೇಗೌಡರ ಋಣವನ್ನು ತೀರಿಸುವ ಅವಕಾಶ ಪದವೀಧರರಿಗೆ ಲಭ್ಯವಾಗಿದೆ ಎಂದು ತಿಳಿಸಿದರು

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದು, ಅವುಗಳಿಗೆ ಪರಿಹಾರ ದೊರೆಯಬೇಕು, ಸಮಸ್ಯೆಗಳಿಗೆ ಕಿವಿಯಾಗಬೇಕೆಂದರೆ ಅದಕ್ಕೆ ಏಕೈಕ ಪರಿಹಾರವಾಗಿ ನಮಗೆ ಮಧು ಮಾದೇಗೌಡ ಅವರು ಕಾಣುತ್ತಾರೆ. ಇಂತಹ ಒಬ್ಬ ಸರಳ, ಸಜ್ಜನ ವ್ಯಕ್ತಿತ್ವವುಳ್ಳವರ ಅವಶ್ಯಕತೆ ನಾಡಿಗೆ ಇದೆ. ಮಧು ಮಾದೇಗೌಡ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು, ಅವರ ಗೆಲುವಿಗೆ ಎಲ್ಲರೂ ಸಾಕ್ಷಿಯಾಗಬೇಕು ಎಂದು ನಾನು ಈ ಮೂಲಕ ಮಾನ್ಯ ಮತದಾರರನ್ನು ಕೋರುತ್ತೇನೆ ಎಂದು ದಿನೇಶ್ ಗೂಳಿಗೌಡ ಅವರು ಮನವಿ ಮಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!