Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಗ್ರಾ.ಪಂ. ಕಾರ್ಯದರ್ಶಿ ಜನನ- ಮರಣ ನೋಂದಣಿ ಉಪನೋಂದಣಾಧಿಕಾರಿ: ಡಾ.ಕುಮಾರ

ಗ್ರಾಮೀಣ ಪ್ರದೇಶದಲ್ಲಿ ಜನನ- ಮರಣ ನೋಂದಣಿಗೆ ಗ್ರಾಮ ಪಂಚಾಯತಿ ಕಾರ್ಯದರ್ಶಿಗಳನ್ನು ಉಪನೋಂದಣಾಧಿಕಾರಿ ನೇಮಕ ಮಾಡಲಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನನ ಮರಣ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜನನ ಪ್ರಮಾಣ ಪತ್ರವನ್ನು ಪಡೆದುಕೊಳ್ಳುವ ರೀತಿ ಮರಣ ಹೊಂದಿದ ಸಂದರ್ಭದಲ್ಲಿ‌ ಕುಟುಂಬ ದವರು ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂದರು.

ಜನನ, ಮರಣ ಪ್ರಮಾಣ ಪತ್ರ ವಿಳಂಬ ಮಾಡದೇ ಪಡೆದುಕೊಳ್ಳುವುದು ಉತ್ತಮ‌. 30 ದಿನದ ನಂತರ ಹಾಗೂ ಒಂದು ವರ್ಷದಲ್ಲಿ ಘಟಿಸಿದ ಘಟನೆಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ತಹಶೀಲ್ದಾರ್, ನಗರ ಪ್ರದೇಶದಲ್ಲಿ ಆಯುಕ್ತರು ಅಥವಾ ಮುಖ್ಯಾಧಿಕಾರಿಗಳ ಆದೇಶ ಪಡೆದು ನೊಂದಣಿ ಪ್ರಮಾಣ ಪತ್ರವನ್ನು ಪಡೆಯಬಹುದು. ಒಂದು ವರ್ಷ ಮೇಲ್ಪಟ್ಟರೆ ನ್ಯಾಯಾಲಯದ ಮುಖಾಂತರ ಆದೇಶ ಪಡೆದು ನೊಂದಣಿ ಮಾಡಿಕೊಳ್ಳಬೇಕಾಗುತ್ತದೆ. ಆದರಿಂದ ಸಾರ್ವಜನಿಕರು ತಪ್ಪದೇ ನಿಗದಿತ ಅವಧಿಯಲ್ಲಿ ಜನನ ಹಾಗೂ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಿ ಎಂದರು.

ಒಂದು ಗ್ರಾಮದಲ್ಲಿ ಯಾವುದೇ ವ್ಯಕ್ತಿಬಮರಣ ಹೊಂದಿದ ಸಂದರ್ಭದಲ್ಲಿ ಸ್ಥಳೀಯವಾಗಿ, ಆಶಾ, ಅಂಗನವಾಡಿ ಅಥವಾ ಪಂಚಾಯಿತಿ ಸಿಬ್ಬಂದಿಗಳಿಗೆ ತಿಳಿದಿರುತ್ತದೆ. ಅವರಿಗೆ ಮರಣ ಪ್ರಮಾಣ ಪತ್ರಕ್ಕೆ‌ ಅರ್ಜಿ ಸಲ್ಲಿಸುವಂತೆ ತಿಳಿಸಿ. ಇದರಿಂದ ಬಹಳಷ್ಟು ಜನ ನ್ಯಾಯಾಲಯಕ್ಕೆ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬಹುದು ಎಂದರು.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಶೇ 100 ರಷ್ಟು ಹೆರಿಗೆಗಳು ಆಸ್ಪತ್ರೆಯಲ್ಲಿ ನಡಯುತ್ತಿರುವುದರಿಂದ ಜನನ ಪ್ರಮಾಣ ಪತ್ರದ ಬಗ್ಗೆ ತೊಂದರೆ ಇಲ್ಲ ಆದರೆ ಕೆಲವು ಆಸ್ಪತ್ರೆಯಲ್ಲಿ ತಡವಾಗಿ ವರದಿಯನ್ನು ಕಳುಹಿಸುತ್ತಿರುವುದು ಹಾಗೂ ಜನ್ಮ ದಿನಾಂಕ, ಗಂಡು/ ಹೆಣ್ಣನ್ನು ತಪ್ಪು ನಮೂದು ಮಾಡುತ್ತಿರುವುದು ಕಂಡುಬಂದಿರುತ್ತದೆ. ಇದು ಮುಂದುವರೆದಲ್ಲಿ ನೋಟೀಸ್ ಜಾರಿ ಮಾಡುವುದಾಗಿ ಎಚ್ಚರಿಕೆ‌ ನೀಡಿದರು.

ಸಭೆಯಲ್ಲಿ‌ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಬಿ.ಸಿ.ಕೇಶವಮೂರ್ತಿ, ಸಹಾಯಕ ಸಂಖ್ಯಾ ಸಂಗ್ರಹಣಾಧಿಕಾರಿ ಚೈತ್ರಾ, ಕುಟುಂಬ ಕಲ್ಯಾಣಾಧಿಕಾರಿ ಡಾ: ಬೆಟ್ಟ ಸ್ವಾಮಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ