Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| 50ನೇ ಬಾರಿ ರಕ್ತದಾನ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡ ಛಾಯಾಗ್ರಾಹಕ!

ಮಂಡ್ಯ ತಾಲೂಕು ಹೊಳಲು ಗ್ರಾಮದ ಪತ್ರಿಕಾ ಛಾಯಾಗ್ರಾಹಕರಾದ ಕೆ.ಪಿ. ಕುಮಾರ್ ರವರ 54ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಈ ದಿನ ಮಂಡ್ಯ ನಗರದ ಮೀಮ್ಸ್ ಆಸ್ಪತ್ರೆಯಲ್ಲಿ ಸ್ವಯಂ ಪ್ರೇರಿತವಾಗಿ 50ನೇ ಬಾರಿ ರಕ್ತದಾನ ಮಾಡುವ ಮುಖಾಂತರ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.

ಇತ್ತೀಚಿನ ದಿನಗಳಲ್ಲಿ ಜನಸಾಮಾನ್ಯರು ತಮ್ಮ ಮನೆಯಲ್ಲಿ ಶುಭಕಾರ್ಯಗಳನ್ನು ಆಚರಿಸುವಾಗ ಇಂತಹ ರಕ್ತದಾನದ ಪುಣ್ಯದ ಕಾರ್ಯಕ್ರಮಗಳನ್ನ ಕೈಗೊಂಡು ಸಮಾಜಕ್ಕೆ ಆದರ್ಶರಾಗಬೇಕೆಂದು ಮನವಿ ಮಾಡುತ್ತಾ ,ಯುವಕರು ದುಶ್ಚಟಗಳನ್ನು ಬಿಟ್ಟು ರಕ್ತದಾನ ಹಾಗೂ ನೇತ್ರದಾನ ಅಂತಹ ಶಿಬಿರಗಳನ್ನ ತಮ್ಮ ತಮ್ಮ ಗ್ರಾಮಗಳಲ್ಲಿ ಹಮ್ಮಿಕೊಳ್ಳುವುದರ ಮುಖಾಂತರ ರಕ್ತದಾನ ಮಾಡಿ ಒಂದು ಜೀವವನ್ನು ಉಳಿಸಬೇಕೆಂದು ಮನವಿ ಮಾಡಿದರು .

ಈ ಸಂದರ್ಭದಲ್ಲಿ ಗೆಳೆಯರಾದ ಪರಮೇಶ್ವರ್, ಅಜಯ್, ಶ್ರೀಧರ್, ತೇಜು ,ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ