Friday, September 20, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿಯಲ್ಲಿ ಬ್ರಾಹ್ಮಣರಿಗೂ ಲಿಂಗಾಯತರಿಗೂ ಇರುವ ವ್ಯತ್ಯಾಸವೇನು ?

ಬಿಜೆಪಿಯಲ್ಲಿ ಬ್ರಾಹ್ಮಣರನ್ನು ವಿಶೇಷವಾಗಿ ನೋಡಲಾಗುತ್ತದೆ, ಅವರು ಟಿಕೆಟ್ ಕೆಳದಿದ್ದರೂ ಟಿಕೆಟ್ ನೀಡಲಾಗುತ್ತದೆ, ಆದರೆ ಲಿಂಗಾಯತರನ್ನು ಕಡೆಗಣಿಸಲಾಗುತ್ತದೆ, ಅವರು ಎಷ್ಟೇ ಬಾರಿ ಗೆದ್ದಿದ್ದರೂ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂ.ಪಾಟೀಲ್ ಕಿಡಿಕಾರಿದ್ದಾರೆ.

“>

ಸುರೇಶ್ ಕುಮಾರ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ, ಅವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಜಗದೀಶ ಶೆಟ್ಟರ್ ಲಿಂಗಾಯತ ಸಮುದಾಯಕ್ಕೆ ಸೇರಿದ್ದು, 6 ಭಾರಿ ಗೆದ್ದಿದ್ದರೂ 7ನೇ ಬಾರಿಗೆ ಟಿಕೆಟ್ ನಿರಕರಿಸಲಾಗಿದೆ. ಇದೇ ರೀತಿ ಲಿಂಗಾಯತ ಸಮುದಾಯದ ಅಗ್ರಗಣ್ಯ ನಾಯಕ ಯಡಿಯೂರಪ್ಪ ಅವರಿಗೂ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಅಲ್ಲದೇ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ ಅವರನ್ನು ಮೂಲೆಗೆ ಸರಿಲಾಗಿದೆ. ಈ ಮೂಲಕ ಬ್ರಾಹ್ಮಣದಾರ ಪ್ರಹ್ಲಾದ್ ಜೋಷಿ ಹಾಗೂ ಬಿ.ಎಲ್.ಸಂತೋಷ್ ಅವರನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಬಿಜೆಪಿಯಿಂದ ಲಿಂಗಾಯತರಿಗೆ ಸ್ಪಷ್ಟ ಸಂದೇಶ: ಲಿಂಗಾಯತರು ಎಂದೂ ಗರ್ಭಗುಡಿಯ ಅರ್ಚಕರಲ್ಲ, ಗರ್ಭಗುಡಿಯ ಆಚೆ ಕೂತು ಭಜನೆ ಮಾಡುವುದಕ್ಕಷ್ಟೇ ಸೀಮಿತ… ಬಿಜೆಪಿಯಲ್ಲಿ ಲಿಂಗಾಯತರು ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕೆ ಸೀಮಿತ, ನಿರ್ಧಾರ ತೆಗೆದುಕೊಳ್ಳುವ ಹಕ್ಕಿಲ್ಲ. ಲಿಂಗಾಯತರು ತವರಿಗೆ ಮರಳುವ ಸ್ಪಷ್ಟ ಸನ್ನಿವೇಶ ಬಂದಿದೆ ಎಂದು ಎಂ.ಬಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!