Wednesday, October 23, 2024

ಪ್ರಾಯೋಗಿಕ ಆವೃತ್ತಿ

ಅಮ್ವೇ ಇಂಡಿಯಾದ ಆಸ್ತಿ ಜಪ್ತಿ

ಅಮ್ವೇ ಇಂಡಿಯಾದ 757.77 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯದಿಂದ ಜಪ್ತಿ ಮಾಡಲಾಗಿದೆ.

ಈ ಕಂಪನಿಯು ಮಲ್ಟಿ ಲೆವಲ್ ಮಾರ್ಕೇಂಟಿಂಗ್ ನಲ್ಲಿ ವ್ಯವಹಾರ ನಡೆಸುತ್ತಿದ್ದ ಕಂಪನಿ.

ಜಪ್ತಿಯಾದ ಆಸ್ತಿಯಲ್ಲಿ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿನ ಭೂಮಿ ಮತ್ತು ಕಾರ್ಖಾನೆ ಕಟ್ಟಡ, ಯಂತ್ರೋಪಕರಣಗಳು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳು ಸೇರಿದೆ.

ಈ ಜಪ್ತಿಯಲ್ಲಿ 36 ವಿವಿಧ ಖಾತೆಗಳಿಂದ 411.83 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿಗಳು ಸೇರಿದೆ.

ಬ್ಯಾಂಕಿನ ಖಾತೆಯಲ್ಲಿರುವ 345.94 ಕೋಟಿ ರೂಪಾಯಿಗಳ ಉಳಿಕೆ ಹಣವನ್ನು ಲಗತ್ತಿಸಲಾಗಿದೆ. ಇದೆಲ್ಲಾವನ್ನು ಮನಿ ಲಾಂಡರಿಂಗ್ ಕಾನೂನಿನ ಕಾಯ್ದೆ ಅಡಿಯಲ್ಲಿ ವಶ.

ಕಂಪನಿಯು 2003 ರಿಂದ 2022ರ ನಡುವೆ 27,562 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ ಎಂದು ಕಂಪನಿಯು ಹೇಳಿಕೊಂಡಿದೆ.

ಇದರಲ್ಲಿ ಕಂಪನಿಯು ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದಲ್ಲಿನ ತಮ್ಮ ಅಂಗ ಸಂಸ್ಥೆಯ ಸದಸ್ಯರು ಮತ್ತು ವಿತರಕರಿಗೆ 7,588 ಕೋಟಿ ರೂಪಾಯಿಗಳನ್ನು ಕಮಿಷನ್ ರೀತಿಯಲ್ಲಿ ಪಾವತಿಸಿದೆ.

ಜಾರಿ ನಿರ್ದೇಶನಾಲಯದ ಈ ಜಪ್ತಿಯ ಪರಿಣಾಮದಿಂದ ಭಾರತದಲ್ಲಿ ಸಂಸ್ಥೆಯ ಸದಸ್ಯರು ಮತ್ತು ವಿತರಕರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಮತ್ತು ಅಮ್ವೇ ಕಂಪನಿಯ ಪದಾರ್ಥಗಳ ಮಾರಾಟದಲ್ಲಿ ಏರುಪೇರಾಗಬಹುದಾ ನೋಡಬೇಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!