Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯ ಪ್ರಚಾರ ಸಭೆಯಲ್ಲಿ ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ, ಅವರ ವಿರುದ್ಧ ಚುನಾವಣಾಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಮುಖಂಡರು ಚುನಾವಣಾಧಿಕಾರಿಗಳಿಗೆ ದೂರು ನೀಡಿದರು.

ಮಂಡ್ಯದಲ್ಲಿ ದೂರಿನ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮೇ 24ರಂದು ನಗರದ ಚಂದ್ರದರ್ಶನ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡರ ಪರ ಪ್ರಚಾರ ಸಭೆಯನ್ನು ಏರ್ಪಡಿಸಲಾಗಿತ್ತು. ಅಂದಿನ ಪ್ರಚಾರ ಸಭೆಗೆ ಸಿದ್ದರಾಮಯ್ಯನವರ ಸರ್ಕಾರಿ ವಾಹನ ಕೆಎ-01-ಜಿಎ 7002 ಇನೋವಾ ಕ್ರಿಸ್ಟಾ ವಾಹನದಲ್ಲಿ ಬಂದು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ನಂತರ ಅದೇ ವಾಹನದಲ್ಲಿ ತೆರಳಿದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾಧಿಕಾರಿಯನ್ನು ಒತ್ತಾಯಿಸಿದರು.

 ನೀತಿ ಸಂಹಿತೆ ಉಲ್ಲಂಘಿಸಿಲ್ಲ

ಜಿಲ್ಲಾಧಿಕಾರಿಗಳ ವರದಿಯಂತೆ ಸುತ್ತೋಲೆ 7 ರ ಪ್ರಕಾರ ಸಾರ್ವಜನಿಕ ಮೈದಾನ, ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಚಾರ ನಡೆಸಬಹುದು. ಸಚಿವರು ಸಾರ್ವಜನಿಕ ಪ್ರದೇಶದಲ್ಲಿ ಮತಯಾಚನೆ ಮಾಡಿದರೆ ಉಲ್ಲಂಘನೆ ಸಾಧ್ಯ ಎಂದು ಪ್ರಶ್ನಿಸಿದರು.

ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ವೇಳೆ ಅಲ್ಲಿ ವೈದ್ಯಾಧಿಕಾರಿಗಳ ಸಭೆ ನಡೆಯುತ್ತಿತ್ತು. ಅಲ್ಲಿಗೆ ತೆರಳಿದ ನಾವು ನಿರ್ದೇಶಕರ ಅನುಮತಿ ಪಡೆದು 15 ನಿಮಿಷಗಳ ಕಾಲ ಮತಯಾಚನೆ ಮಾಡಿ ಅಲ್ಲಿಂದ ತೆರಳಿದ್ದೇವೆ.
ಇನ್ನು ಮಾಂಡವ್ಯ ಕಾಲೇಜು, ಪಿಐಎಸ್ ಇಂಜಿನಿಯರಿಂಗ್ ಕಾಲೇಜು, ಮಂಡ್ಯ ವಿವಿ ಮತ್ತು ಇತರೆಡೆ ಮತಯಾಚನೆ ಮಾಡಿದ್ದೇವೆ. ಜೊತೆಗೆ ಸಚಿವರ ಪ್ರವಾಸ ಪಟ್ಟಿಯಲ್ಲಿ ಮತದಾರರ ಭೇಟಿಯನ್ನು ನಮೂದಿಸಿದೆ ಎಂದಾಗ ನೀತಿ ಸಂಹಿತೆ ಉಲ್ಲಂಘನೆ ಹೇಗಾಗುತ್ತದೆ?

ಸುಳ್ಳು ನೀಡಿರುವ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ನೀಡಿರುವುದಾಗಿ ಅವರು ತಿಳಿಸಿದ್ದರು.
ಅಶ್ವಥ್ ನಾರಾಯಣ್ ಅವರು ತಮ್ಮ ಸರ್ಕಾರಿ ಕಾರಿನಲ್ಲಿ ಬಂದದ್ದು ನಿಜ. ನಂತರ ಕಾಲೇಜುಗಳಿಗೆ ತೆರಳುವಾಗ ಖಾಸಗಿ ಕಾರನ್ನ ಬಳಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರು ತಮ್ಮ ಮೂರನೇ ಸ್ಥಾನಕ್ಕೆ ಹೋಗುತ್ತಾರೆಂಬ ಹತಾಶೆಯಿಂದ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಸಿದ್ಧಾಂತದ ಮೇಲೆ ಚುನಾವಣೆ

ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್ ಮಾತನಾಡಿ, ನಾವು ಯಾವ ಚುನಾವಣೆಯನ್ನು ಹಣದಿಂದ ಮಾಡಿಲ್ಲ. ಸಿದ್ಧಾಂತದ ಮೇಲೆ ನಮ್ಮ ಪಕ್ಷ ಚುನಾವಣೆ ನಡೆಸುತ್ತದೆ. ಅಭ್ಯರ್ಥಿಗಳ ಪಕ್ಷ ನಿಷ್ಠೆ, ಕಾರ್ಯ ವೈಖರಿ ನೋಡಿ ಟಿಕೆಟ್ ನೀಡಲಾಗುತ್ತದೆ. ಹಣ ಅಥವಾ ಅಧಿಕಾರವನ್ನು ನೋಡಿ ಟಿಕೆಟ್ ನೀಡುವುದಿಲ್ಲ.

ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ 40 ವರ್ಷಗಳ ಕಾಲ ಸುದೀರ್ಘವಾಗಿ ದುಡಿದಿರುವ ಮೈ.ವಿ. ರವಿಶಂಕರ್ ಅವರಿಗೆ ಟಿಕೆಟ್ ನೀಡಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುವುದು ಖಚಿತವಾಗಿದೆ.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಎಲೆಚಾಕನಹಳ್ಳಿ ಬಸವರಾಜ್, ಪ್ರಧಾನ ಕಾರ್ಯದರ್ಶಿ ಪ.ನಾ. ಮುಖಂಡರಾದ ನಾಗಾನಂದ, ಹರ್ಷ ಸುರೇಶ್.

ಇದನ್ನು ಓದಿ: ಮನುವಾದಿಗಳ ಕುತಂತ್ರಕ್ಕೆ ತಿರುಗೇಟು ನೀಡಬೇಕಾಗಿದೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!