Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನತೆ ರೋಸಿ ಹೋಗಿದ್ದಾರೆ : ಪುಟ್ಟಸ್ವಾಮಿ

ರಾಜ್ಯದ ಜನತೆ ಎಷ್ಟು ಹೊತ್ತಿಗೆ ಚುನಾವಣೆ ಬರುತ್ತದೆ ಎಂದು ಕಾಯುತ್ತಿದ್ದಾರೆ, ಭವಿಷ್ಯ ಜನತೆ ರೋಷಿಹೋಗಿದ್ದಾರೆ, ಕಳೆದ 4 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರಲ್ಲಿ ಮುಳುಗಿಹೋಗಿದೆ ಎಂದು ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷ ಪುಟ್ಟಸ್ವಾಮಿ ಕಿಡಿಕಾರಿದರು.

ಮಂಡ್ಯ ನಗರದ ಮೈಷುಗರ್ ವೃತ್ತದ ಬಳಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ‘ಕಾರ್ಮಿಕರ ಧ್ವನಿ ಕಾಂಗ್ರೆಸ್ ಕಡೆಗೆ’ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನ ಕರಪತ್ರ ವಿತರಣೆ, ಪಾದಯಾತ್ರೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ.40ರಷ್ಟು ಕಮಿಷನ್ ಪಡೆಯುವ ಬಗ್ಗೆ ದೊಡ್ಡ ಚರ್ಚೆ ನಡೆಯಿತು, ಕಳೆದ 2 ದಿನಗಳ ಹಿಂದೆ ಬಿಜೆಪಿ ಶಾಸಕ, ಶಾಸಕರ ಮಗ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿರುವ ಬಗ್ಗೆ ಲೋಕಾಯುಕ್ತ ದಾಳಿಯ ವರದಿಯನ್ನು ಮಾಧ್ಯಮಗಳು ಬಿತ್ತರಿಸಿದ್ದವು, ಇದಕ್ಕಿಂತ ಭ್ರಷ್ಟಾಚಾರಕ್ಕೆ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಾಕತ್ತಿದ್ರೆ, ದಮ್ಮಿದ್ರೆ ಆಗ ಮಾಡ್ತಿನಿ., ಈಗ ಮಾಡ್ತಿನಿ ಅಂತ ಹೇಳುತ್ತಾರೆ, ಇವರ ಭ್ರಷ್ಟಾಚಾರಕ್ಕೆ ದಾಖಲೆ ಕೊಡಬೇಕಿಲ್ಲ, ಲೋಕಾಯುಕ್ತರೇ ಕೊಟ್ಟಿದ್ದಾರೆ. ಕೂಡಲೇ ನ್ಯಾಯಾಂಗ ತನಿಖೆ ಮಾಡಿ, ಶಾಸಕರನ್ನು ವಜಾ ಮಾಡಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ರಾಮಕೃಷ್ಣ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ವಿಜಯ ಪತಾಕೆ ಹಾರಿಸಲು ಕಾರ್ಮಿಕ ವಿಭಾಗದಿಂದ ಹಗಲು ಇರುಳು ಶ್ರಮಿಸುತ್ತೇವೆ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಖಚಿತ ಪಡಿಸುತ್ತೇವೆ ಎಂದು ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲೂ ಅಧಿಕ ಸಂಖ್ಯೆಯಲ್ಲಿ ಕಾರ್ಮಿಕರಿದ್ದು, ಈಗಾಗಲೇ ಕಾರ್ಮಿಕರಿಗಾಗಿ ಸೇವಾ ಯೋಜನೆಗಳ ಜಾಗೃತಿ, ಫಲಾನುಭವಿಯಾಗಲು ನೆರವು ನೀಡಿದ್ದೇವೆ, ಚುನಾವಣೆಯಲ್ಲಿ ಆಶೀವಾದವು ಮತಗಳಾಗಿ ಪರಿವರ್ತನೆಯಾಗಲಿವೆ. ದೇಶ ಮತ್ತು ರಾಜ್ಯದ ಉದ್ಧಾರ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ, ಬಿಜೆಪಿ ಭ್ರಷ್ಠ ಆಡಳಿತ, ಜನವಿರೋಧಿ ನೀತಿಗಳು ಸೋಲಿಗೆ ಕಾರಣವಾಗಲಿವೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರಾಧಾಕೃಷ್ಣ ಕೀಲಾರ, ಕಾರ್ಮಿಕ ವಿಭಾಗದ ಆಟೋಕೃಷ್ಣ, ನಗರ ವಿಭಾಗ ಅಧ್ಯಕ್ಷ ಶಿವರುದ್ರ, ಕಮಲರಾಜ್ ಮತ್ತಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ