ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತ ಪಂಚರತ್ನ ಯೋಜನೆ ಕಾರ್ಯಕ್ರಮಗಳ ಅರಿವು ಮೂಡಿಸುತ್ತಿದ್ದೇನೆ, ಜೆಡಿಎಸ್ ಗೆಲುವೇ ನನ್ನ ಧ್ಯೇಯ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ, ಮನ್ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರು ಹೇಳಿದರು.
ಮಂಡ್ಯ ತಾಲೂಕಿನ ದೊಡ್ಡ ಗರುಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷದ ಮಹತ್ವಕಾಂಕ್ಷಿ ಯೋಜನೆಗಳಾದ ಪಂಚರತ್ನ ಯೋಜನೆಗಳ ಕರಪತ್ರ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಡಿಎಸ್ನ ರಾಜ್ಯ ವರಿಷ್ಠರಾದ ಎಚ್.ಡಿ.ಕುಮಾರಸ್ವಾಮಿ ಅವರ 2023ರ ಮಹತ್ವಾಕಾಂಕ್ಷಿ ಯೋಜನೆಗಳಾದ ಪಂಚರತ್ನ ಯೋಜನೆಗಳ ಜಾರಿಗೆ ಜೆಡಿಎಸ್ ಗೆಲುವು ಅವಶ್ಯಕವಾಗಿದೆ. ರಾಜ್ಯದ ಅಭಿವೃದ್ದಿ ಮತ್ತು ರೈತರ ಹಿತ ಕಾಯಲು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಜೆಡಿಎಸ್ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದು ನುಡಿದರು.

ಮನೆ ಮನೆಗೆ ಪಂಚರತ್ನ ಯೋಜನೆಗಳ ಕರಮತ್ರ ನೀಡಿ ಮಾಹಿತಿ ತಿಳಿಸಿ, ಜೆಡಿಎಸ್ ಗೆಲುವಿಗೆ ಸಹಕರಿಸಿ ಎಂದು ಮನವಿ ಮಾಡುತ್ತಿದೇವೆ, ಮತ್ತೊಮ್ಮೆ ಕುಮಾರಣ್ಣ ಮುಖ್ಯಮಂತ್ರಿ ಆಗಬೇಕು, ಶ್ರೀಸಾಮಾನ್ಯರು, ರೈತ ಸಮುದಾಯಕ್ಕೆ ಅನುಕೂಲವಾಗಬೇಕು, ಐದು ಪಂಚರತ್ನ ಯೋಜನೆಗಳ ಜಾರಿಗೆ ಅನು ಮಾಡಿಕೊಡಿ ಎಂಬುದಾಗಿ ಕೋರುತ್ತಿದ್ದೇವೆ ಎಂದು ತಿಳಿಸಿದರು.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗಿ ಬಂದರೆ ಮಂಡ್ಯ ಜಿಲ್ಲೆ ಅಭಿವೃದ್ದಿಯಾಗುತ್ತದೆ. ಮನೆ ಮನೆಗೆ ಯೋಜನೆಗಳು ತಲುತ್ತವೆ. ವರಿಷ್ಠರು ಬಂದರೆ ಸದಾ ಸ್ವಾಗತ, ಹಗಲು ರಾತ್ರಿ ದುಡಿದು, ಹೆಚ್ಚು ಮತಗಳಿಂದ ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.




