Friday, June 21, 2024

ಪ್ರಾಯೋಗಿಕ ಆವೃತ್ತಿ

ವಿಕಸಿತ ಭಾರತ ದೃಷ್ಟಿಯಲ್ಲಿ ಬಿಜೆಪಿ ಪ್ರಣಾಳಿಕೆ: ಡಾ.ಇಂದ್ರೇಶ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ ಜನಪರ, ರೈತಪರ ಮಹಿಳೆಯರು ಹಾಗೂ ದೀನ ದಲಿತರ ಪರವಾಗಿ ಪ್ರಣಾಳಿಕೆಯನ್ನು ಹೊರತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಕಾರ್ಯಕರ್ತರು, ಜನರ ಅಭಿಪ್ರಾಯ ಹಾಗೂ ಆನ್ಲೈನ್ ಮೂಲಕ ಸಲಹೆ ಪಡೆದು ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ವಿಕಸಿತ ಭಾರತ ದೃಷ್ಟಿ ಹಿನ್ನೆಲೆಯಲ್ಲಿ ಪ್ರಣಾಳಿಕೆಯನ್ನು ತಯಾರಿಸಲಾಗಿದೆ15 ಕೋಟಿ ಕುಟುಂಬಗಳಿಗೆ ಬಡತನದಿಂದ ಮುಕ್ತಿ ,ಐದು ಕೆಜಿ ಅಕ್ಕಿ ವಿಸ್ತರಣೆ, ಅನ್ನದಾತರಿಗೆ ಯೋಜನೆಗಳ ವಿಸ್ತರಣೆ ,ಯುವಶಕ್ತಿ, ನಾರಿ ಶಕ್ತಿ, ಉದ್ಯೋಗ ಸೃಷ್ಟಿ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಈ ಪ್ರಣಾಳಿಕೆಯಲ್ಲಿ ಒಳಗೊಂಡಿದೆ ಎಂದರು .

ಕೃಷಿಯಲ್ಲಿ ಕ್ರಾಂತಿ, ಬುಲೆಟ್ ರೈಲು, ಕಡುಬಡವರಿಗೆ ಗ್ಯಾಸ್ ವಿತರಣೆ ಸೇರಿದಂತೆ ಪ್ರತಿ ರಂಗದಲ್ಲೂ ಅಭಿವೃದ್ಧಿಗೆ ಪ್ರಣಾಳಿಕೆಯಲ್ಲಿ ಒತ್ತು ನೀಡಲಾಗಿದೆ. ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ, ಮುಖಂಡರಾದ ಸಿ.ಟಿ. ಮಂಜುನಾಥ್ ,ನಾಗಾನಂದ, ಆನಂದ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!