Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ! – ಕಾಂಗ್ರೆಸ್ ಲೇವಡಿ

ವಿಧಾನಸಭಾ ಸೋಲಿನ ನಂತರ ಬಿಜೆಪಿಯಲ್ಲಿ ಬೊಮ್ಮಾಯಿ vs ಯತ್ನಾಳ್, ಯತ್ನಾಳ್ vs ನಿರಾಣಿ, ಈಶ್ವರಪ್ಪ vs ವಲಸಿಗರು, ಪ್ರತಾಪ್ ಸಿಂಹ vs ಬೊಮ್ಮಾಯಿ, ಸೋಮಣ್ಣ vs ಸಂತೋಷ್, ಸಿ ಟಿ ರವಿ vs BS ಯಡಿಯೂರಪ್ಪ ಎಂಬಂತಾಗಿದೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

“>

ಬಿಜೆಪಿಯಲ್ಲಿ ಮಾತಿನ ಮಲ್ಲಯುದ್ಧ ನಡೆಯುತ್ತಿದೆ, ಮುಂದೆ RSS ನವರ ಲಾಠಿ ಕಸಿದುಕೊಂಡು ಬಡಿದಾಡಿಕೊಂಡರೂ ಆಶ್ಚರ್ಯವಿಲ್ಲ! ಚುನಾವಣೆಯ ಸೋಲಿನ ನಂತರ ಮರೆಗೆ ಸರಿದ ಜೋಶಿ ಸಂತೋಷ್ ಜೋಡಿ ತೆರೆಯ ಹಿಂದೆ ಕುಳಿತು ಆಡಿಸುತ್ತಿರುವ ಗೊಂಬೆಯಾಟ ಇದು ಎಂದು ಕಾಂಗ್ರೆಸ್ ಟ್ವಿಟ್ ಮಾಡಿದೆ.

ಆತ್ಮಾವಲೋಕನ ಸಭೆಗಳು ನಡೆಯುತ್ತಿರುವುದು ನೋಡಿದರೆ ಬಿಜೆಪಿ ಪಕ್ಷವೇ ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ! ಪಕ್ಷದೊಳಗಿನ ಆಂತರಿಕ ಕಲಹವನ್ನು ನಿಭಾಯಿಸಲಾಗದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದು ಅಸಾಮರ್ಥ್ಯ ಎಂಬುದನ್ನು ಒಪ್ಪಿಕೊಳ್ಳುವ ಧೈರ್ಯವಿದೆಯೇ ? ಬಿಜೆಪಿಯಲ್ಲಿ ಎಲ್ಲರೂ ಸದಾ ಚೂರಿ ಹಿಡಿದುಕೊಂಡೇ ಓಡಾಡುತ್ತಿರುವಂತಿದೆ, ಪರಸ್ಪರ ಬೆನ್ನಿಗೆ ಚೂರಿ ಹಾಕಿಕೊಳ್ಳಲು! ಎಂದು ಕಾಂಗ್ರೆಸ್ ಕಾಲೆಳೆದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ