Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ಗೆ ಕಪ್ಪುಬಣ್ಣ ಬಳಿಯುವ ಕೆಲಸ ಮಾಡಬಾರದು : ಸು‍ನಂದ ಜಯರಾಂ

ಇಂದು ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯ ಸ್ವಚ್ಚತೆ ಕಾರ್ಯಕ್ರಮದಲ್ಲಿ ರೈತಸಂಘದ ಸುನಂದ ಜಯರಾಂ ಮಾತನಾಡುತ್ತ, ಮೈಷುಗರ್ ಕಾರ್ಖಾನೆಗೆ ಕಪ್ಪು ಬಳಿಯುವ ಕೆಲಸ ಯಾರೂ ಮಾಡಬಾರದು ಎಂದು ತಿಳಿಸಿದರು.

ಮೈಷುಗರ್ ಹೋರಾಟ ಒಂದು ಇತಿಹಾಸ. ಆ ಇತಿಹಾಸಕ್ಕೆ  ಯಾರು ಏನು ಕ್ರಮ ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ಬಿಡೋಣ. ಆ ನಿಟ್ಟಿನಲ್ಲೂ ನಾವು ಒಂದು ಕಣ್ಣು ಇಟ್ಟೇ ಇರುತ್ತೇವೆ.

ಈ ಮೈಷುಗರ್ ಹೋರಾಟದ ಹಾದಿಯಲ್ಲಿ ಹಾಲಿನಂತ ಪರಿಶುದ್ದತೆಯ ಕೆಲಸ ಇಲ್ಲಿ ನಡೆಯಬೇಕು. ಜನತೆ ಇದನ್ನು ಗಮನಿಸುತ್ತಾ ಇದ್ದಾರೆ ಎಂದರು.

ಕಾರ್ಖಾನೆ ಆರಂಭವಾಗಲು ಸ್ವಲ್ಪ ವಿಳಂಬವಾಗಿರುವ ಸಮಯವನ್ನು ಮತ್ತೆ ಮುಖ್ಯಮಂತ್ರಿಗಳ ಹತ್ತಿರ ಮಾತನಾಡಿ, ಹೆಚ್ಚುವರಿ ಸಮಯದ ಜೊತೆಗೆ ಕೆಲಸ ಮಾಡಬೇಕಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಿ ಎಂದರು.

ಇನ್ನೂ ಒಂದುವರೆ ವರ್ಷದಲ್ಲಿ ಈಗಿನ ಸರ್ಕಾರ ಕಾರ್ಖಾನೆಯ ಕೆಲಸ ಮಾಡೇ ಮಾಡುತ್ತದೆ ಎನ್ನುವ ಭರವಸೆ ಇದೆ ಎಂದು ಹೇಳಿದರು.

ಈ ಸ್ವಚ್ಚತೆಯ ಕಾರ್ಯಕ್ರಮದ ಉದ್ದೇಶ ಕಾರ್ಖಾನೆ ನೋಡಿದವರಿಗೂ ಚೆನ್ನಾಗಿ ಕಾಣಬೇಕು ಎನ್ನುವುದು.  ಆಶಾಭಾವನೆ ಹುಟ್ಟಿ ನಮ್ಮ ಕಾರ್ಖಾನೆ ಎನ್ನುವ ಮನೋಭಾವ ಬರಬೇಕು ಎಂದರು.

ಕಾರ್ಖಾನೆಯ ಕೆಲಸಕ್ಕೆ ಯಾರೋ ಒಬ್ಬರು ಇಬ್ಬರು ಬಂದು ಮಾತನಾಡಿ ಹೋಗಬಾರದು. ಬದಲಿಗೆ ಇಲ್ಲಿನ ಅಧಿಕಾರಿಗಳೊಂದಿಗೆ ಮಾತನಾಡಲು ಒಂದು ನಿಯೋಗವಾಗಿ ನಾವೆಲ್ಲರೂ ಬಂದು ಮಾತನಾಡಬೇಕು. ಎಲ್ಲರೂ ಒಟ್ಟಿಗೆ ಸೇರಿ ಮೈಷುಗರ್ ಉಳಿಸಬೇಕು ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!