Wednesday, September 11, 2024

ಪ್ರಾಯೋಗಿಕ ಆವೃತ್ತಿ

ಪುಸ್ತಕ ಮನೆ ಅಂಕೇಗೌಡರಿಗೆ ಸಿಕ್ಕಿತು ಮತ್ತೊಂದು ಪ್ರಶಸ್ತಿ

ಪಾಂಡವಪುರ ತಾಲ್ಲೂಕಿನ ಹರಳಹಳ್ಳಿಯ ಪುಸ್ತಕ ಮನೆ ಅಂಕೇಗೌಡ ಅವರಿಗೆ ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ಸಂಸ್ಥೆಯು 'ಪ್ರತಿಷ್ಠಾ ವರ್ಲ್ಡ್ ರೆಕಾರ್ಡ್'ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅಂಕೇಗೌಡ ಅವರು, ತಾವು ಸಂಗ್ರಹಿಸಿರುವ 50 ವರ್ಷಗಳ ಅವಧಿಯಲ್ಲಿ 15 ಭಾಷೆಯ 15 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.

2500 ಮಹಾತ್ಮಗಾಂಧಿ ಕೃತಿಗಳು, 2500 ಭಗವದ್ಗೀತೆಗಳು,1800 ಶೇಕ್ಸ್‌ಪಿಯರ್‌ ನಾಟಕಗಳು, 6 ಲಕ್ಷ ಕನ್ನಡ, 5 ಲಕ್ಷ ಆಂಗ್ಲ ಭಾಷಾ ಪುಸ್ತಕಗಳಿವೆ. ಹಿಂದಿ, ಮರಾಠಿ, ತಮಿಳು, ತೆಲುಗು, ಬಂಗಾಳಿ ಮತ್ತಿತರ ಪುಸ್ತಕಗಳ ಸೇರಿದ್ದು, 15 ಸಾವಿರ ಅಂತಾರಾಷ್ಟ್ರೀಯ ನಿಯತಕಾಲಿಕೆಗಳು, 15 ಸಾವಿರ ಕನ್ನಡ ನಿಯತಕಾಲಿಕೆಗಳು ಸೇರಿದ್ದು, ನಾನು ಸಂಗ್ರಹಿಸಿರುವ 15 ಲಕ್ಷಕ್ಕೂ ಹೆಚ್ಚು ಪುಸ್ತಕಗಳು ಇಡೀ ಜಗತ್ತಿನಲ್ಲೇ ಸರ್ವಶ್ರೇಷ್ಠವಾದ ದಾಖಲೆಯಾಗಿದೆ.

2016ರಲ್ಲಿ 10 ಲಕ್ಷ ಪುಸ್ತಕಗಳ ಸಂಗ್ರಹಕ್ಕಾಗಿಲಿಮ್ಕಾ’ ದಾಖಲೆಗೆ ಸೇರ್ಪಡೆಯಾಗಿತ್ತು. ಯಾವುದೇ ಶುಲ್ಕವಿಲ್ಲದೆ ಓದುಗರು ಮತ್ತು ವಿದ್ಯಾರ್ಥಿಗಳಿಗೆ ಇಷ್ಟು ದೊಡ್ಡ ಗ್ರಂಥಾಲಯ ತೆರೆದಿರುವುದು ಇತಿಹಾಸದಲ್ಲಿ ಎಲ್ಲೂ ಇಲ್ಲ ಎಂದು ತಿಳಿಸಿದರು.

ಹದಿನೈದು ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಲು ನಾನು ಪಾಂಡವಪುರ ಸಕ್ಕರ ಕಾರ್ಖಾನೆಯಲ್ಲಿ ಪಡೆದ ಸಂಬಳದ ಹಣ,ನಿವೃತ್ತಿಯ ನಂತರ ಬಂದ 30 ಲಕ್ಷ ರೂ.ಹಾಗೂ ಮೈಸೂರಿನಲ್ಲಿ ಕೊಂಡಿದ್ದ ಕೋಟ್ಯಾಂತರ ರೂ.ಮೌಲ್ಯದ ನಿವೇಶನ ಮಾರಿ ಮುಂದಿನ ಪೀಳಿಗೆಗೆ ಪುಸ್ತಕಗಳನ್ನು ಸಂಗ್ರಹಿಸಿಟ್ಟಿದ್ದೇನೆ.ಇದರ ರಕ್ಷಣೆಗಾಗಿ ಸರ್ಕಾರ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!