Thursday, September 19, 2024

ಪ್ರಾಯೋಗಿಕ ಆವೃತ್ತಿ

ಉತ್ತರ ಪ್ರದೇಶ| ಬಿಜೆಪಿಗೆ 8 ಬಾರಿ ಮತ ಹಾಕಿದ ವಿಡಿಯೋ ಹಂಚಿಕೊಂಡ 17ರ ಬಾಲಕನ ಬಂಧನ

ಉತ್ತರ ಪ್ರದೇಶದ ಫರೂಕಾಬಾದ್ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಮೇ 13ರಂದು ಗ್ರಾಮ ಪ್ರಧಾನರ 17 ವರ್ಷದ ಪುತ್ರ ಬಿಜೆಪಿಗೆ 8 ಬಾರಿ ಮತ ಹಾಕಿ ಅದರ ವಿಡಿಯೋವನ್ನು ಹಂಚಿಕೊಂಡಿದ್ದು, ಬಾಲಕನನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಪಕ್ಷ ನಾಯಕರು ತನಿಖೆಗೆ ಆಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು, ಭಾನುವಾರ ತಡ ರಾತ್ರಿ ಪೊಲೀಸರು ಬಾಲಕನನ್ನು ವಶಕ್ಕ ಪಡೆದಿದ್ದಾರೆ.

“>

ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ವಯನಾಡು ಸಂಸದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ನ ಎಕ್ಸ್ ಹ್ಯಾಂಡಲ್ ಈ ಎರಡು ನಿಮಿಷ, 19 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡು ತನಿಖೆಗೆ ಆಗ್ರಹಿಸಿದ್ದಾರೆ.

ಆರೋಪಿ ಬಾಲಕ ವಿವಿಧ ಗುರುತಿನ ಚೀಟಿಗಳನ್ನು ತೋರಿಸಿ ಬಿಜೆಪಿ ಅಭ್ಯರ್ಥಿ ಮುಖೇಶ್ ರಜಪೂತ್ ಅವರ ಫೋಟೋ ಮತ್ತು ಕಮಲದ ಚಿಹ್ನೆ ಇರುವ ಇವಿಎಂ ಬಟನ್ ಅನ್ನು ಒತ್ತಿರುವುದು ಮತ್ತು ಒಟ್ಟಾಗಿ ಎಂಟು ಬಾರಿ ಒತ್ತಿರುವುದು ಈ ವಿಡಿಯೋದಲ್ಲಿ ಕಾಣಬಹುದು.

ಇಟಾಹ್ ಜಿಲ್ಲೆಯ ನಯಾಗಾಂವ್ ಪೊಲೀಸ್ ಠಾಣೆಯಲ್ಲಿ ಬಾಲಕ ರಾಜನ್ ಸಿಂಗ್ ಠಾಕೂರ್ ವಿರುದ್ಧ ವಿವಿಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಫರೂಕಾಬಾದ್‌ನಲ್ಲಿ ಅನಿಲ್ ಸಿಂಗ್ ಠಾಕೂರ್ ಅವರ ಪುತ್ರ ಆಗಿದ್ದು, ಅನಿಲ್ ಬಿಜೆಪಿ ಮುಖಂಡರಾಗಿದ್ದಾರೆ.

ಇನ್ನು ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ಅವರು ಮರು ಮತದಾನಕ್ಕೆ ಶಿಫಾರಸು ಮಾಡಿದ್ದಾರೆ. ಫರೂಕಾಬಾದ್ ಜಿಲ್ಲಾ ಚುನಾವಣಾಧಿಕಾರಿ ನಯಾಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!