Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಂವಿಧಾನಿಕ ಸಂಸ್ಥೆಗಳ ಮೇಲೆ ಹೆಚ್ಚಿದ ಕೇಂದ್ರದ ಒತ್ತಡ : ಬಿ.ಟಿ.ವಿಶ್ವನಾಥ್ ಕಳವಳ

ದೇಶದ ಸಾಂವಿಧಾನಿಕ ಶಕ್ತಿಕೇಂದ್ರಗಳಾದ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಚುನಾವಣಾ ಆಯೋಗ, ಲೋಕಸಭೆ ಹಾಗೂ ನ್ಯಾಯಾಂಗಗಳು ಪ್ರಸ್ತುತ ಸಂದರ್ಭದಲ್ಲಿ ಸ್ವತಂತ್ರವಾಗಿ ಕೆಲಸ ನಿರ್ವಹಿಸಲು ಆಗದಂತಹ ವಾತಾವರಣ ಸೃಷ್ಠಿಯಾಗಿದೆ, ಈ ಸಂಸ್ಥೆಗಳ ಮೇಲೆ ಕೇಂದ್ರ ಸರ್ಕಾರದ ಒತ್ತಡ ಹೆಚ್ಚಾಗುತ್ತಿದೆ ಎಂದು ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಕಳವಳ ವ್ಯಕ್ತಪಡಿಸಿದರು.

ಮಂಡ್ಯ ನಗರದ ಗಾಂಧಿ ಉದ್ಯಾನವನದಲ್ಲಿ ಹಲವು ಪ್ರಗತಿಪರ ಸಂಘಟನೆಗಳ ವತಿಯಿಂದ ಗುರುವಾರ ಸಂಜೆ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾತ್ಯತೀತ ದೇಶವಾದ ಭಾರತದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ಥ ಸೇರಿದಂತೆ ಇನ್ನಿತರ ಧರ್ಮದ ಜನರು ಶಾಂತಿಯುತಗಾಗಿ ಜೀವಿಸುತ್ತಿದ್ದರು, ಆದರೆ ಇತ್ತೀಚಿಕೆ ಧರ್ಮ ಧರ್ಮಗಳ ನಡುವೆ ದ್ವೇಷವನ್ನು ಹುಟ್ಟು ಹಾಕಿ ಸಾರ್ವಜನಾಂಗದ ಶಾಂತಿಯ ತೋಟವಾದ ಭಾರತವನ್ನು ಕದಡಲಾಗುತ್ತಿದೆ, ಆದರೆ ಇದಕ್ಕೆ ಪ್ರಜ್ಞಾವಂತರಾದ ನಾವು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರರು. ಎಲ್ಲರೂ ಸಾಧ್ಯವಷ್ಟು ತಮ್ಮ ತಮ್ಮ ಮಿತಿಯಲ್ಲಿ ಧರ್ಮ ಧರ್ಮಗಳನ್ನು ಬೆಸೆಯುವಂತಹ ಮನುಷ್ಯ ಮನುಷ್ಯರನ್ನು ಪ್ರೀತಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವ ಜನರನ್ನು ಒಗ್ಗೂಡಿಸುವ ಅಗತ್ಯವಿದೆ ಎಂದು ನುಡಿದರು.

nudikarnataka.com
ಜಾಹೀರಾತು

ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಸಂವಿಧಾನದ ಪ್ರಸ್ತಾವನೆಯೇ ಭಾರತ ಆತ್ಮವಾಗಬೇಕು. ಸರ್ವರನ್ನು ಸಮಾನವಾಗಿ ಕಾಣುವ, ಸರ್ವರನ್ನು ಗೌರವಿಸುವ ಸಾರ್ವಭೌಮ, ಜಾತ್ಯತೀತ, ಸಮಾಜವಾದಿ ದೇಶವನ್ನು ಕಟ್ಟಲು ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಮಾತನಾಡಿ, ಕೋಮು ದ್ವೇಷ ಹಚ್ಚುವವರ ಬಗ್ಗೆ ಎಚ್ಚರಿಕೆಯಿಂದಿರಬೇಕು. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ, ಈ ತೋಟದಲ್ಲಿ ನಾನಾ ಬಣ್ಣ ಬಣ್ಣದ ಹೂವುಗಳು ಇರುತ್ತವೆ, ಅವುಗಳನ್ನು ಇರುವಂತೆಯೇ ಗೌರವಿಸುವ ಕೆಲಸವಾಗಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮತದಾರರ ಪರವಾಗಿ ಸಾಂಕೇತಿಕವಾಗಿ ಪ್ರಗತಿಪರ ಸಂಘಟನೆಗಳ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ‘ತಮ್ಮ ಮತ ಮಾರಾಟಕ್ಕಿಲ್ಲ’ ಎಂದು ಪ್ರತಿಜ್ಞೆ ಸ್ವೀಕರಿಸಿದರು

ಕಾರ್ಯಕ್ರಮ ಅಖಿಲ ಭಾರತ ವಕೀಲರ ಸಂಘ (AILU) ಸಂಘಟನೆಯ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ಕರ್ನಾಟಕ ಜನಶಕ್ತಿಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಶಿಲ್ಪ, ಬೆಂಜಮಿನ್ ಥಾಮಸ್ ಸೇರಿದಂತೆ ಹಲವು ಸೌಹಾರ್ದ ಪ್ರೇಮಿಗಳು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!