Saturday, September 14, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮೇ 23ರಂದು ಬುದ್ದ ಪೂರ್ಣಿಮೆ; ಸಾಮೂಹಿಕ ಅನ್ನ ಸಂತರ್ಪಣೆ

ಬುದ್ಧ ಭಾರತ ಫೌಂಡೇಷನ್ ವತಿಯಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ನೇರಲಕೆರೆ ಗ್ರಾಮದಲ್ಲಿ ಮೇ 23ರಂದು 2568ನೇ ಭಗವಾನ್ ಗೌತಮ ಬುದ್ಧರ ಬುದ್ದ ಪೂರ್ಣಿಮೆ ಅಂಗವಾಗಿ ಸಾಮೂಹಿಕ ಅನ್ನ ಸಂತರ್ಪಣೆಯನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಸಂಸ ಮುಖಂಡ ವೆಂಕಟಗಿರಿಯಯ್ಯ ಮನವಿ ಮಾಡಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬುದ್ದ ಅನುಯಾಯಿಗಳು, ಕುವೆಂಪು ಅಭಿಮಾನಿಗಳು, ಅಂಬೇಡ್ಕರ್ ಅನುಯಾಯಿಗಳು, ಕನಕದಾಸರ ಅನುಯಾಯಿಗಳು ಮತ್ತು ಇತರ ದಾರ್ಶನಿಕರೆಲ್ಲರ ಅಭಿಮಾನಿಗಳು ನಮ್ಮ ಉಚಿತ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಮಧ್ಯಾಹ್ನ 1.00 ಗಂಟೆಗೆ ಆಗಮಿಸಿ ಅನ್ನಸಂತರ್ಪಣೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಪ್ರಸ್ತುತ ದಿನ ಮಾನವ ಸಮಾಜ ಅಶಾಂತಿ, ಅಸಹನೆ, ವಿಚಿತ್ರ ನಡೆ-ನುಡಿಗೆ ಒಳಗಾಗಿ ತನ್ನ ಸ್ವಂತಿಕೆ ಕಳೆದುಕೊಂಡು ಅಮಾನವೀಯವಾಗಿ ವರ್ತಿಸುತ್ತಿದೆ. ಭಾರತದಲ್ಲಿ 2568ನೇ ವರ್ಷದಲ್ಲಿ ಹುಟ್ಟಿ ಬೆಳೆದ ಭಗವಾನ್ ಗೌತಮ ಬುದ್ಧರು ಪ್ರತಿ ಮಾನವನು ನೆಮ್ಮದಿಯಿಂದ ಜೀವನ ನಡೆಸಲು ಮತ್ತು ಬೇರೆಯವರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಬಾಳಲು ಹಾಗೇಯೇ ತನ್ನ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಲು ಹಾಗೇಯೇ ಜೀವನದಲ್ಲಿ ಪಂಚಶೀಲಗಳು, ಅಷ್ಟಾಂಗ ಮಾರ್ಗ, ಧ್ಯಾನ ಮತ್ತು ಪ್ರೀತಿ, ಮಮತೆ, ಕರುಣೆ, ಬೆಳೆಸಿಕೊಂಡು ಬಾಳಿದರೆ ಸತ್ಪಜೆಗಳು ಬಾಳಬಹುದು ಎಂದು ತಿಳಿ ಹೇಳಿದರು, ಅವರ ದಾರಿಯಲ್ಲಿ ನಡೆಯುವ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಭಾರತದಲ್ಲಿ ಬುದ್ಧ ಧಮ್ಮವನ್ನು ಪುನರ್ ಪ್ರತಿಸ್ಥಾಪನೆ ಮಾಡುತ್ತೇವೆ ಎಂಬ ಅಚಲವಾದ ನಂಬಿಕೆ ಮತ್ತು ವಿಶ್ವಾಸದೊಂದಿಗೆ, ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಉದಾರವಾಗಿ ಹಣ ಸಹಾಯ, ದವಸ-ಧಾನ್ಯಗಳ ಸಹಾಯ ಮಾಡುವವರು ಮೊ. 9481776715 ಸಂಪರ್ಕಿಸಹುದು ಎಂದರು.

ಗೋ‍ಷ್ಠಿಯಲ್ಲಿ ಪೌಂಡೇಷನ್ ಕಾರ್ಯಾಧ್ಯಕ್ಷ ಜೆ.ರಾಮಯ್ಯ, ವೆಂಕಟೇಶ್, ಲೋಕೇಶ್, ಅಮ್ಜದ್ ಪಾಷಾ ಹಾಗೂ ಬೆಂಜಮಿನ್ ಥಾಮಸ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!