Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟಕ್ಕೆ ಸಂಪೂರ್ಣ ಬೆಂಬಲ- ಸಿ.ಎಸ್.ಪುಟ್ಟರಾಜು

ಮಂಡ್ಯದಲ್ಲಿ ಕಾವೇರಿ ಉಳಿವಿಗಾಗಿ 63 ದಿನಗಳಿಂದ ಹೋರಾಟ ನಡೆಯುತ್ತಿದ್ದು, ಈ ಸ್ಥಳಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಷ್ಟ ಭರವಸೆ ನೀಡಿಲ್ಲ ಇದರಿಂದ ರೈತರು ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ತಿಳಿಸಿದ್ದು, ಈ ಹೋರಾಟಕ್ಕೆ ಜೆಡಿಎಸ್ ಪಕ್ಷದ ಸಂಪೂರ್ಣ ಬೆಂಬಲ ಇದೆ ಮಾಜಿ ಸಚಿವ ಸಿ.ಎಸ್ ಪುಟ್ಟರಾಜು ಹೇಳಿದರು.

ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು ನಡೆಯುತ್ತಿರುವ ನಿರಂತರ ಧರಣಿಯಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಪಕ್ಷದ ವತಿಯಿಂದ ದೊಡ್ಡ ಮಟ್ಟದ ಹೋರಾಟ ಮಾಡಲು ಮುಂದಾಗಿದ್ದು, ರೈತರ ಜೊತೆಗೂಡಿ ಸರ್ಕಾರದ ಕಣ್ಣು ತೆರೆಸಲು ಪ್ರತಿಭಟಿಸಲಾಗುವುದೆಂದು ಹೇಳಿದರು.

ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ,  ರೈತ ಸಮೂಹಕ್ಕೆ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿಲ್ಲ, ಅಲ್ಲದೇ ಕೇಂದ್ರ ಸರ್ಕಾರ ಅಥವಾ ಪ್ರಧಾನಿ ಬಳಿಗೆ ನಿಯೋಗ ತೆರಳಿ ಪರಿಹಾರ ದೊರಕಿಸಿ ಕೊಡುವುದಾಗಿ ಖಚಿತ ಸಂದೇಶ ನೀಡಿಲ್ಲ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರದ ಸಚಿವರು, ಶಾಸಕರು ಕಾವೇರಿ ವಿಚಾರದಲ್ಲಿ ದನಿ ಎತ್ತಿಲ್ಲ, ಹಾಗಾಗಿ ಹೋರಾಟಗಾರರು ಅಧಿವೇಶನದಲ್ಲಿ ಚರ್ಚೆ ಆದರೂ ಆಗಲಿ ಎಂದು ಚಳವಳಿ ನಡೆಸುತ್ತಿದ್ದಾರೆ ಆದರೆ ಸರ್ಕಾರ ನಿರ್ಲಕ್ಷತೆ ತೋರುತ್ತಿದೆ ಎಂದು ಹೇಳಿದರು.

ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿದ್ದು, ಜಮೀನಿನಲ್ಲಿ ಬೆಳೆದು ನಿಂತಿರುವ ಬೆಳೆಗೆ ರೈತರು ಟ್ಯಾಂಕರ್ ನಿಂದ ನೀರು ಪೂರೈಸುತ್ತಿದ್ದಾರೆ, ಆದರೆ ಇದರಿಂದ ಏನು ಪ್ರಯೋಜನ ಇಲ್ಲ, ಭೂಮಿಗೆ ಸಮರ್ಪಕವಾಗಿ ನೀರು ದೊರಕುವುದಿಲ್ಲ, ಬೆಳೆಯ ಮೇಲ್ಮೈನಲ್ಲಿ ಹಸಿರು ಕಾಣಲಿದೆ ಹೊರತು ಪಸಲು ಸಿಗುವುದಿಲ್ಲ ಎಂದು ಹೇಳಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!