Thursday, May 16, 2024

ಪ್ರಾಯೋಗಿಕ ಆವೃತ್ತಿ

ರಾಜ್ಯೋತ್ಸವ ಪ್ರಶಸ್ತಿ| ಎಲ್ಲ ಜಾತಿ, ಧರ್ಮಗಳ ಪ್ರತಿಭೆಗಳಿಗೆ ಪ್ರಾತಿನಿಧ್ಯ: ಸಿಎಂ ಸಿದ್ದರಾಮಯ್ಯ

ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಸಂದರ್ಭದಲ್ಲಿ ಅರ್ಹರಿಗೆ ಪ್ರಶಸ್ತಿ ನೀಡಬೇಕು. ಪ್ರಾದೇಶಿಕ ನ್ಯಾಯ ಕಡ್ಡಾಯವಾಗಿ ಪಾಲಿಸಬೇಕು. ಎಲ್ಲ ಜಾತಿ, ಧರ್ಮ, ಲಿಂಗಗಳಿಗೂ ಪ್ರಾತಿನಿಧ್ಯ ದೊರಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಗುರುವಾರ ಮಾತನಾಡಿದರು.

“ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಕನ್ನಡದ ಪರವಾಗಿ ಕಾರ್ಯನಿರ್ವಹಿಸಿರುವ ಸಂಘ ಸಂಸ್ಥೆಗಳಿಗೆ ಒಟ್ಟಾರೆ 10 ಪ್ರಶಸ್ತಿಗಳನ್ನು ನೀಡಬೇಕು” ಎಂದು ಆಯ್ಕೆ ಸಮಿತಿ ಸದಸ್ಯರು ಅಭಿಪ್ರಾಯ ಪಟ್ಟರು.

ಈ ಬಾರಿ 68 ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಬೇಕಿದ್ದು, ಕರ್ನಾಟಕ ಸಂಭ್ರಮದ ಪ್ರಯುಕ್ತ ಸಂಘ ಸಂಸ್ಥೆಗಳಿಗೆ 10 ಪ್ರಶಸ್ತಿಗಳನ್ನು ನೀಡಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

“ಅರ್ಜಿ ಕೊಡುವವವರು ಹೆಚ್ಚಿದ್ದ ಕಾರಣ, ಅದಕ್ಕೆ ಕಡಿವಾಣ ಹಾಕಲು ಏಕೀಕರಣ ಆಗಿ ಎಷ್ಟು ವರ್ಷಗಳಾಯಿತೋ, ಅಷ್ಟು ಪ್ರಶಸ್ತಿಗಳನ್ನು ನೀಡಲು ಹಿಂದೆ ನಮ್ಮ ಸರ್ಕಾರವೇ ತೀರ್ಮಾನ ಕೈಗೊಂಡಿತ್ತು” ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಉನ್ನತ ಮಟ್ಟದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಸಚಿವರಾದ ಡಾ. ಜಿ.ಪರಮೇಶ್ವರ್, ಡಾ. ಹೆಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ನಸೀರ್ ಅಹ್ಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಎನ್.ಮಂಜುಳಾ, ನಿರ್ದೇಶಕಿ ಧರಣಿದೇವಿ ಮಾಲಗತ್ತಿ, ಆಯ್ಕೆ ಸಮಿತಿ ಸದಸ್ಯರಾದ ಪ್ರೊ.ಜಾಣಗೆರೆ ವೆಂಕಟರಾಮಯ್ಯ, ಡಾ. ಎಚ್‌.ಎಲ್‌.ಪುಷ್ಪ, ಡಾ.ವೀರಣ್ಣ ದಂಡೆ, ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ಅಲ್ಲಮಪ್ರಭು ಬೆಟ್ಟದೂರ, ಪಿಂಡಿಪಾಪನಹಳ್ಳಿ ವೆಂಕಟಪ್ಪ, ಟಾಕಪ್ಪ ಕಣ್ಣೂರು, ಪಿಚ್ಚಳ್ಳಿ ಶ್ರೀನಿವಾಸ್‌, ಡಾ. ವಿಠಲ್‌ ಐ.ಬೆಣಗಿ- ಕೃಷಿ, ಡಾ. ಸಣ್ಣರಾಮು, ವೆಂಕಟರಾಮಯ್ಯ, ಡಾ. ಎಂ.ಎಸ್‌.ಮೂರ್ತಿ, ಡಾ. ಗೀತಾ ಶಿವಮೊಗ್ಗ, ಡಾ.ಜಯದೇವಿ ಜಂಗಮ ಶೆಟ್ಟಿ, ಐರೋಡಿ ಗೋವಿಂದಪ್ಪ, ಸಾಧುಕೋಕಿಲ, ಸುಕನ್ಯಾ ಪ್ರಭಾಕರ್‌, ಫ‌ಯಾಜ್‌ ಖಾನ್‌, ಹೃಷಿಕೇಶ್‌ ಬಹದ್ದೂರ್‌ ದೇಸಾಯಿ, ನರಸಿಂಹಲು ವಡವಾಟಿ, ಡಿ.ಎನ್‌.ನರಸಿಂಹರಾಜು, ಡಾ. ಪುರುಷೋತ್ತಮ ಬಿಳಿಮಲೆ, ಚನ್ನಬಸವಣ್ಣ, ಶೈಲೇಶ್‌ ಚಂದ್ರಗುಪ್ತ, ಜೆ.ಲೋಕೇಶ್‌ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!