ಕರ್ನಾಟಕ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೇ ಎಬಿಪಿ ಸಿ ವೋಟರ್ ಸಮೀಕ್ಷೆಯೂ ಹೊರ ಬಿದ್ದಿದ್ದು, ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂಬ ಮಾಹಿತಿಯನ್ನು ಹೊರ ಹಾಕಿದೆ.
ಎಬಿಪಿ ಸಿವೋಟರ್ ಕರ್ನಾಟಕ ಚುನಾವಣಾ ಸಮೀಕ್ಷಾ ವರದಿ
ಕಾಂಗ್ರೆಸ್: 115 ರಿಂದ 127 ಸ್ಥಾನ
ಬಿಜೆಪಿ: 68 ರಿಂದ 80 ಸ್ಥಾನ
ಜೆಡಿಎಸ್: 23 ರಿಂದ 30 ಸ್ಥಾನ
ಇತರರು: 0 – 2
ಒಟ್ಟು: 224
ಹಳೇ ಮೈಸೂರಿನಲ್ಲೂ ‘ಕೈ’ ಪ್ರಾಬಲ್ಯ
ಇದೀಗ ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಕೂಡ ಪ್ರಾಬಲ್ಯ ಮೆರೆಯಲಿದೆ ಎಂದಿದೆ.
ಹಳೇ ಮೈಸೂರು ಭಾಗದಲ್ಲಿ ಸ್ಥಾನ
ಕಾಂಗ್ರೆಸ್: 24 ರಿಂದ 28
ಬಿಜೆಪಿ: 1 ರಿಂದ 5
ಜೆಡಿಎಸ್: 26 ರಿಂದ 27
ಇತರರು: 0- 1
ಒಟ್ಟು: 55
ಎಬಿಪಿ ಸಿವೋಟರ್ ಸಮೀಕ್ಷಾ ವರದಿಯಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ ಏರ್ಪಡಲಿದೆ ಎಂದಿದೆ. ಆದರೆ ಕಾಂಗ್ರೆಸ್ ಮುನ್ನಡೆ ಪಡೆಯಲಿದೆ ಎಂದು ವರದಿಗಳು ಹೇಳುತ್ತಿದೆ.
ಬೆಂಗಳೂರು ನಗರದಲ್ಲಿನ ಸಮೀಕ್ಷಾ ವರದಿ
ಕಾಂಗ್ರೆಸ್: 15 ರಿಂದ 19 ಸ್ಥಾನ
ಬಿಜೆಪಿ: 11 ರಿಂದ 15 ಸ್ಥಾನ
ಜೆಡಿಎಸ್: 1 ರಿಂದ 3
ಇತರರು: 0-1
ಒಟ್ಟು: 31
ಕರಾವಳಿ ಕರ್ನಾಟಕದಲ್ಲಿನ ಸಮೀಕ್ಷಾ ವರದಿ
ಕಾಂಗ್ರೆಸ್: 8 ರಿಂದ 12 ಸ್ಥಾನ
ಬಿಜೆಪಿ: 9 ರಿಂದ 13 ಸ್ಥಾನ
ಜೆಡಿಎಸ್: 0-1
ಇತರರು: 0 -1
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.




