Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಪುಟ ಸಭೆ | ಸಾವರ್ಕರ್, ಹೆಡ್ಗೆವಾರ್, ಸೂಲಿಬೆಲೆ ಪಾಠ ಕೈ ಬಿಟ್ಟ ಸರ್ಕಾರ

ಇದು ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರದ ಮಾಡಿದ ಪಠ್ಯ ಪರಿಷ್ಕರಣೆಯ ಬದಲಾವಣೆಗಳನ್ನು ತೆಗೆದು ಹಾಕಿ, “ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಾಠ ಕೈ ಬಿಟ್ಟಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಅಲ್ಲದೇ ಮಕ್ಕಳು ಕಲಿಯಲೇಬೇಕಿದ್ದ, ಆದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಬಿಟ್ಟಿದ್ದ, ಸಾವಿತ್ರಿ ಬಾಯಿ ಫುಲೆ ಪಾಠ, ನೀ ಹೋದ ಮರುದಿನ.. ಎಂಬ ಅಂಬೇಡ್ಕರ್ ಬಗೆಗಿನ ಪದ್ಯ ಮತ್ತು ಮಗಳಿಗೆ ಬರೆದ ಪತ್ರಗಳಂತಹ ಪಠ್ಯಗಳನ್ನು ಸೇರಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಜಾಹೀರಾತು

ಹಳೆಯ ಪಠ್ಯಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದರೆ ಬಿಜೆಪಿ ತಂದಿದ್ದ ಬದಲಾವಣೆಗಳನ್ನು ತೆಗೆಯಲಾಗಿದೆ. ಈಗಾಗಲೇ ಪಠ್ಯಪುಸ್ತಕಗಳು ಮುದ್ರಣಗೊಂಡಿರುವುದರಿಂದ ಕೆಲ ಪಾಠಗಳನ್ನು ಮಾಡದಂತೆ ಆದೇಶ ನೀಡಲಾಗುವುದು. ಇನ್ನು ಸೇರಿಸಬೇಕಾದ ಪಠ್ಯಗಳ ಸಪ್ಲಿಮೆಂಟರಿ ಬುಕ್ ಕೊಡುತ್ತೇವೆ. ಸರ್ಕಾರಕ್ಕೆ ಹೊರೆಯಾಗದಂತೆ ಸರಳವಾಗಿ ಪಠ್ಯ ಪರಿಷ್ಕರಣೆ ಮಾಡಿದ್ದೇವೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆದೇಶವೇ ಇಲ್ಲದೆ, ಕಾನೂನು ಬಾಹಿರವಾಗಿ ಪಠ್ಯ ಪರಿಷ್ಕರಣೆ ನಡೆದಿದೆ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಯಾವುದೇ ಅರ್ಹತೆ ಇಲ್ಲದ ರೋಹಿತ್ ಚಕ್ರತೀರ್ಥ ಎಂಬ ಬಲಪಂಥೀಯ ಟ್ರೋಲರ್‌ ಒಬ್ಬರ ಅಧ್ಯಕ್ಷತೆಯಲ್ಲಿ ಸಮಾಜ ವಿರೋಧಿ ಪಠ್ಯಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ಪ್ರತಿಭಟನೆಗಳು ಜರುಗಿದ್ದವು. ಆಗ ನಾವು ಅಧಿಕಾರಕ್ಕೆ ಬಂದರೆ ಆ ಪಠ್ಯಗಳನ್ನು ಕೈಬಿಡುತ್ತೇವೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!