Thursday, September 19, 2024

ಪ್ರಾಯೋಗಿಕ ಆವೃತ್ತಿ

ಕ್ಯಾಂಟರ್-ಲಾರಿ ಡಿಕ್ಕಿ ಓರ್ವ ಸಾವು: ಮತ್ತಿಬ್ಬರಿಗೆ ಗಂಭೀರ ಗಾಯ

ವರದಿ: ವಿ.ಎಸ್. ಪ್ರಭು

ಮದ್ದೂರು ತಾಲೂಕಿನ ಹೆಮ್ಮನಹಳ್ಳಿಯ ಬಳಿ ಮದ್ದೂರು – ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಗೆ ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಕ್ಯಾಂಟರ್ ನಲ್ಲಿದ್ದ 15ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.

ಮದ್ದೂರು ಕಡೆಯಿಂದ ಬೆಲ್ಲವನ್ನು ಭರ್ತಿ ಮಾಡಿಕೊಂಡಿದ್ದ ಲಾರಿಯು ತುಮಕೂರು ಕಡೆಗೆ ಸಾಗುತ್ತಿತ್ತು.

ಕುರಿಗಳನ್ನು ತುಂಬಿಕೊಂಡು ತುಮಕೂರು ಕಡೆಯಿಂದ ಕ್ಯಾಂಟರ್ ಗಾಡಿ ಬರುತ್ತಿದ್ದ ವೇಳೆ ಕ್ಯಾಂಟರ್ ಗಾಡಿ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಡಿಕ್ಕಿಯಾಗಿದೆ.ಇದರಿಂದ ಕ್ಯಾಂಟರ್ ಗಾಡಿಯಲ್ಲಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸ್ಥಳೀಯರು ಮತ್ತು ಹೆದ್ದಾರಿ ವಾಹನ ಸವಾರರು ಕ್ಯಾಂಟರ್ ಗಾಡಿಯಲ್ಲಿ ಸಿಲುಕಿದವರನ್ನು ಹೊರ ತೆಗೆದು ಗಂಭೀರ ಗಾಯಗೊಂಡವರನ್ನು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತ ವ್ಯಕ್ತಿಯ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇಡಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!