Thursday, September 19, 2024

ಪ್ರಾಯೋಗಿಕ ಆವೃತ್ತಿ

44ನೇ ದಿನಕ್ಕೆ ಕಾವೇರಿ ಹೋರಾಟ| ಆಟೋ ಚಾಲಕರು, ರೈತ ಮಹಿಳೆಯರ ಬೆಂಬಲ

ಮಂಡ್ಯ ನಗರದದಲ್ಲಿ ನಿರಂತರವಾಗಿ ನಡೆಸುತ್ತಿರುವ ಹೋರಾಟ 44ನೇ ದಿನಕ್ಕೆ ಕಾಲಿಟ್ಟಿದ್ದು, ಆಟೋ ಚಾಲಕರು, ರೈತ ಮಹಿಳೆಯರು, ವಿವಿಧ ಸಂಘಟನೆಯ ಕಾರ್ಯಕರ್ತರು ಭಾಗಿಯಾಗಿ ಬೆಂಬಲಿಸಿದರು.

ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಹೋರಾಟಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿ ಧರಣಿ,ರಸ್ತೆತಡೆ ನಡೆಸಿದರು. ಆಟೋ ಚಾಲಕರು ಬೆಂಬಲ ಸೂಚಿಸಿ ಕೆಲಕಾಲ ಧರಣಿ ನಡೆಸಿದರು, ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಾವೇರಿ – ಹೇಮಾವತಿ ರೈತ ಹಿತ ರಕ್ಷಣಾ ಸಮಿತಿ ಆಶ್ರಯದಲ್ಲಿ ಕೆ ಆರ್ ಪೇಟೆಯ ಹೇಮಾವತಿ ರೈತ ಒಕ್ಕಲಿಗ ಹೋರಾಟ ಸಂಘ, ಅಖಿಲ ಕರ್ನಾಟಕ ಒಕ್ಕಲಿಗ ಮಹಿಳಾ ಸಂಘದ ಕಾರ್ಯಕರ್ತೆಯರು ನಿರಂತರ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಎನ್.ಎಸ್ ಗಂಗಾಧರ್, ಪಾರ್ವತಮ್ಮ,ಪಂಕಜ ಪ್ರಕಾಶ್, ಮಧುಶ್ರೀ, ಪ್ರೇಮಮ್ಮ, ನೇತ್ರಾವತಿ, ಭಾಗ್ಯಮ್ಮ,ಮಹಾದೇವಮ್ಮ, ಮಹೇಶ್ವರಿ, ವಿಮಲಾಕ್ಷಮ್ಮ, ಸುಜಾತ,ರೇಣುಕಮ್ಮ, ವಿಮಲಾ ಇತರರಿದ್ದರು.

ರಸ್ತೆತಡೆ

ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೇಂದ್ರ ರಾಜ್ಯ ಸರ್ಕಾರ, ಸಂಸದರು ಶಾಸಕರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ಮುಖಂಡರಾದ ಸುನಂದಾ ಜಯರಾಂ. ಕೆ ಬೋರಯ್ಯ, ರೈತ ಸಂಘದ ಇಂಡುವಾಳು ಚಂದ್ರಶೇಖರ್. ಮುದ್ದೇಗೌಡ, ಕೃಷ್ಣಪ್ರಕಾಶ್, ಪ್ರೊ. ಶಂಕರೇಗೌಡ, ಸುಜಾತ ಕೃಷ್ಣ, ಜ್ಯೋತಿ ನಾಗಣ್ಣ, ಶಿವ ರತ್ನ, ಕರಡಕೆರೆ ವಸಂತಮ್ಮ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!