Sunday, September 8, 2024

ಪ್ರಾಯೋಗಿಕ ಆವೃತ್ತಿ

ದುಬೈ ಒಕ್ಕಲಿಗರ ಸಂಘದಿಂದ ಕೆಂಪೇಗೌಡರ ಜಯಂತಿ ಸಂಭ್ರಮ

ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಡಾ.ರಶ್ಮಿ ನಂದಕಿಶೋರ್ ಇವರ ಸಾರಥ್ಯದಲ್ಲಿ ದುಬೈಯಲ್ಲಿ  ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ವಿಶೇಷ ಸಮಾರಂಭದಲ್ಲಿ ದುಬೈ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಮತ್ತು, ಸಂಯುಕ್ತ ಅರಬ್ ಸಂಸ್ಥಾನದ ನೆಲದಲ್ಲಿ ನೆಲೆಸಿರುವ ಹಲವಾರು ಕನ್ನಡ ಪರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಮರುಭೂಮಿಯ ದೇಶದಲ್ಲಿ ಹಲವಾರು ಕನ್ನಡಿಗರು ನಿಸ್ವಾರ್ಥ ಸೇವಲ್ಲಿ ತೊಡಗಸಿಕೊಂಡಿರವರನ್ನು ಗುರುತಿಸಿ, ” ದುಬೈ ಒಕ್ಕಲಿಗರ ಸಂಘದ” ವತಿಯಿಂದ ಸನ್ಮಾನಿಸಲಾಯಿತು.

ವಿಶೇಷ ಆಹ್ವಾನಿತರಲ್ಲಿ ಕರ್ನಾಟಕ ಸಂಘ ದುಬೈ ಅಧ್ಯಕ್ಷ ಶಶಿಧರ್ ನಾಗರಾಜಪ್ಪ ಅವರಿಗೆ ಕೆಂಪೇಗೌಡ “ನಾಯಕ ರತ್ನ” ಪ್ರಶಸ್ತಿ, ಛಾಯಾ ಮುಘಲ್ (ಮಾಜಿ ನಾಯಕಿ ಯುಎಇ ಕ್ರಿಕೆಟ್ ತಂಡ) ಅವರಿಗೆ ಕೆಂಪೇಗೌಡ ” ಕ್ರೀಡಾ ರತ್ನ” ಪ್ರಶಸ್ತಿ ಹಾಗೂ ಬಿ.ಕೆ ಗಣೇಶ್ ರಾಯ್ (ಸಮಾಜ ಸೇವಕರು ಹಾಗು ಕ್ರಿಯಾತ್ಮಕ ಕಲಾ ನಿರ್ದೇಶಕರು) ಇವರಿಗೆ- ಕೆಂಪೇಗೌಡ” ಸಾಂಸ್ಕೃತಿಕ ರತ್ನ” ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.

ಈ ಮೂವರು ವಿಶೇಷ ವ್ಯಕ್ತಿಗಳು ತಮ್ಮನ್ನು ತಾವು ನಿಸ್ವಾರ್ಥ ಸೇವೆಗಳೊಂದಿಗೆ ತೊಡಗಿಸಿಕೊಂಡು ತಮ್ಮದೇ ವ್ಯಾಪ್ತಿಯಲ್ಲಿ ನಿಸ್ವಾರ್ಥ ಸೇವೆ ನಡೆಸುತ್ತಿರುವುದನ್ನು ಸ್ಮರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಡಾ.ಸಂಜಯ್ ಗೌಡ (ರಾಜಕಾರಣಿ, ಚಲನಚಿತ್ರಗಳ ನಿರ್ಮಾಪಕ), ಪ್ರವೀಣ್ ಶೆಟ್ಟಿ, (ಅಧ್ಯಕ್ಷ ಕೆ.ಎನ್.ಆರ್.ಐ) ಶಶಿಧರ್ ನಾಗರಾಜಪ್ಪ ( ಅಧ್ಯಕ್ಷರು, ಕರ್ನಾಟಕ ಸಂಘ ದುಬೈ), ವಿಜ್ಜಯ್ ಗುಜ್ಜರ್, (ಅಧ್ಯಕ್ಷ ರಾಘವೇಂದ್ರ ಸೇವಾ ಸಮಿತಿ ಮತ್ತು ಅಧಾತ್ಮಿಕ ಯು.ಎ.ಇ), ಸೆಂಥಿಲ್ ಮತ್ತು ಮಮತಾ ಸೆಂಥಿಲ್ (OMG ಚಲನಚಿತ್ರಗಳು), ಮೇಘಾ ಸಾಗರ್ ಶೆಟ್ಟರ್ (ಗಲ್ಫ್ ಗೆಳಯ ಮತ್ತು ಗಲ್ಫ್ ಗೆಳತಿಯರು), ಮನೋಹರ ಹೆಗಡೆ (ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಸಂಘ ದುಬೈ), ನಾಗರಾಜ್ ರಾವ್ (ಕೋಶಾಧಿಕಾರಿ ಕರ್ನಾಟಕ ಸಂಘ ದುಬೈ), ಮಲ್ಲಿಕಾರ್ಜುನ ಗೌಡ (ಅಧ್ಯಕ್ಷ ವೀರಸೇವಾ ಲಿಂಗಾಯತ ಸಂಘ), ಅರುಣ್ (ಕನ್ನಡಿಗರ ಕನ್ನಡ ಕೂಟ), ದೀಪಕ್ (ಗಲ್ಫ್ ವಿ ಮೂವೀಸ್) ಪೀಟರ್ ಜೇಸನ್ (ಕರುನಾಡು ಕನ್ನಡಿಗರ ಬಳಗ, ಯು .ಎ .ಇ) ಹಾಗು  ಶಿವರಾಮ್ ಭಟ್ (ಉಪಾಧ್ಯಕ್ಷ, ಯು. ಎ. ಇ ಬ್ರಾಹ್ಮಣ ಸಮಾಜ) ಅವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!