Thursday, September 19, 2024

ಪ್ರಾಯೋಗಿಕ ಆವೃತ್ತಿ

ಮೀನುಗಾರನಿಗೆ ₹5 ಲಕ್ಷ ವಂಚಿಸಿದ ಚೈತ್ರ ಕುಂದಾಪುರ ? ಮತ್ತೊಂದು ಪ್ರಕರಣ ದಾಖಲು

ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ 5ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸದ್ಯ ಸಿಸಿಬಿ ಬಂಧನದಲ್ಲಿರುವ ಚೈತ್ರಾ ಕುಂದಾಪುರ ವಿರುದ್ಧ ಕೋಟಾ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.

ಬಿಜೆಪಿ ಕಾರ್ಯಕರ್ತ ಸುದೀನ ಎಂಬುವರು ಉಡುಪಿಯ ಕೋಟಾ ಪೊಲೀಸ್‌ ಠಾಣೆಯಲ್ಲಿ ಚೈತ್ರಾ ಕುಂದಾಪುರ ವಿರುದ್ಧ 5 ಲಕ್ಷ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ವೃತ್ತಿಯಲ್ಲಿ ಮೀನುಗಾರನಾಗಿರುವ ಬ್ರಹ್ಮಾವರ ನಿವಾಸಿ ಸುದೀನ ಅವರಿಗೆ ಬಟ್ಟೆ ಅಂಗಡಿ ಹಾಕಿಸಿಕೊಡುತ್ತೇನೆ ಎಂದು ಚೈತ್ರಾ ಕುಂದಾಪುರ ಐದು ಲಕ್ಷ ರೂಪಾಯಿ ಪಡೆದುಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಸುದೀನ ಅವರಿಗೆ 2015ರಲ್ಲಿ ಚೈತ್ರಾ ಕುಂದಾಪುರ ಅವರ ಪರಿಚಯವಾಗಿತ್ತು. ಈ ವೇಳೆ ನನಗೆ ಬಿಜೆಪಿ ಪಕ್ಷದ ಸಚಿವರು, ಮಂತ್ರಿಗಳು, ಶಾಸಕರ ನಿಕಟ ಸಂಪರ್ಕವಿದೆ ಎಂದು ಚೈತ್ರಾ ಹೇಳಿದ್ದಾಳೆ. 2018-2023ರ ಅವಧಿಯಲ್ಲಿ ಐದು ಲಕ್ಷ ಹಂತ ಹಂತವಾಗಿ ಸುದೀನ್ ಅವರಿಂದ ಚೈತ್ರಾ ಪಡೆದಿದ್ದಾಳೆ.  ಈ ಪೈಕಿ ಮೂರು ಲಕ್ಷವನ್ನು ಚೈತ್ರಾ ಖಾತೆಗೆ ಸುದೀನ ವರ್ಗಾಯಿಸಿದ್ದರು. ಬಳಿಕ ಎರಡು ಲಕ್ಷ ಹಣವನ್ನು ನಗದು ರೂಪದಲ್ಲಿ ಸುದೀನ ನೀಡಿದ್ದಾರೆ.

ಹಣ ಕೊಟ್ಟ ಬಳಿಕ ಬಟ್ಟೆ ಅಂಗಡಿ  ಬಗ್ಗೆ ಕೇಳಿದಾಗ ಚೈತ್ರಾ ಇನ್ನಷ್ಟು ಹಣದ ಬೇಡಿಕೆ ಇಟ್ಟಿದ್ದಾರೆ. ಅಂಗಡಿ ನಿರ್ಮಣ ವಿಳಂಬವಾಗಿರುವುದಕ್ಕೆ ಸ್ಥಳೀಯ ಮುಖಂಡರಲ್ಲಿ ಮತುಕತೆ ನಡೆಸಿದ್ದೇನೆ, ಅಂತಿಮ ಹಂತದಲ್ಲಿದೆ ಎಂದು ಚೈತ್ರಾ ನಂಬಿಸಿದ್ದಾರೆ. ಇದಲ್ಲದೆ ಚುನಾವಣಾ ಪ್ರಚಾರ, ಭಾಷಣ, ಕಾರ್ಯ ಕಾರಿಣಿ ಸಭೆ, ಪಕ್ಷದ ಮುಖಂಡರ ಭೇಟಿ ನೆಪ ಹೇಳಿ ಸುದೀನನಿಂದ ಚೈತ್ರಾ ತಪ್ಪಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದಾರೆ.

ಚೈತ್ರಾ ನಡೆಯಿಂದ ಅನುಮಾನಗೊಂಡ ಸುದೀನ, ಕೂಡಲೇ ಬಟ್ಟೆ ಅಂಗಡಿ ಮಾಡಿಸಿಕೊಡಿ ಎಂದು ಆಗ್ರಹಿಸಿದ್ದಾರೆ. ಈ ವೇಳೆ ಚೈತ್ರಾ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುತ್ತೇನೆ, ಬಾಡಿಗೆ ಗೂಂಡಾಗಳಿಂದ ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಈ ಕುರಿತು ಸುದೀನ ನೀಡಿದ ದೂರಿನಂತೆ ಕೋಟಾ ಪೊಲೀಸ್‌ ಠಾಣೆಯಲ್ಲಿ ಚೈತ್ರಾ ವಿರುದ್ದ 506, 417, 420 ಐಪಿಸಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!