Thursday, September 19, 2024

ಪ್ರಾಯೋಗಿಕ ಆವೃತ್ತಿ

ಬರಗಾಲದಲ್ಲಿ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ: ಚಲುವರಾಯಸ್ವಾಮಿ

ಬರಗಾಲದ ಸಮಸ್ಯೆಯಲ್ಲಿ ಕುಟುಂಬ ನಿರ್ವಹಣೆಗೆ ಗ್ಯಾರಂಟಿ ಯೋಜನೆಗಳು ಸಹಕಾರಿಯಾಗಿವೆ ಎಂದು ಕೃಷಿ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ಮಂಡ್ಯ ತಾಲೂಕಿನ ಕೊತ್ತತ್ತಿ ಎರಡನೇ ಹೋಬಳಿ ತಗ್ಗಹಳ್ಳಿ ಗ್ರಾಮದಲ್ಲಿ ನಾಡಕಚೇರಿ ಕಟ್ಟಡದ ಶಂಕುಸ್ಥಾಪನೆ ಹಾಗೂ ಬಿಎಂಸಿ ಕೇಂದ್ರ ಉದ್ಘಾಟನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

5 ಗ್ಯಾರಂಟಿ ಯೋಜನೆಗಳಿಗೆ ರಾಜ್ಯದಲ್ಲಿ 70 ಸಾವಿರ ಕೋಟಿ ಖರ್ಚು ಮಾಡುತ್ತಿದ್ದು, ಪ್ರತಿ ಮನೆಗೆ ಐದರಿಂದ ಏಳು ಸಾವಿರ ರೂಗಳು ಹಣ ಬರುತ್ತಿದೆ.ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಮಿತಿ ರಚನೆಯಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡದೇ ಇರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದಾಗ ರಾಷ್ಟ್ರವ್ಯಾಪಿ ಪ್ರಶಂಸೆ ಸಿಕ್ಕಿದೆ ಎಂದು ಹೇಳಿದರು.

ಜೆಡಿಎಸ್ ನಲ್ಲಿ ಮಂತ್ರಿಯಾಗುವುದಕ್ಕೂ ಕಾಂಗ್ರೆಸ್ ನಲ್ಲಿ ಮಂತ್ರಿಯಾಗಿರುವುದಕ್ಕೂ ವ್ಯತ್ಯಾಸವಿದೆ

ಜೆಡಿಎಸ್ ರಾಜಕೀಯ ನಾಯಕರ ಪಕ್ಷದ ಬದಲಾವಣೆ ನಡವಳಿಕೆಯಿಂದ ಜಿಲ್ಲೆಯಲ್ಲಿ ನಾವೇ ಕಟ್ಟಿದ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋದೆವು. ಅಲ್ಲಿಯೇ ಬಾಬು ಇದ್ದಿದ್ದರೆ ಚೆಸ್ಕಾಂ ಅಧ್ಯಕ್ಷರು ಆಗುತ್ತಿರಲಿಲ್ಲ. ಪ್ರಪ್ರಥಮವಾಗಿ 2006 -07 ರಲ್ಲಿ ಆರಂಭವಾದ ಚೆಸ್ಕಾಂಗೆ ಯಾರು ಅಧ್ಯಕ್ಷರು ಆಗಿರಲಿಲ್ಲ ರಮೇಶ್ ಬಾಬು ಅವರ ಕುಟುಂಬದ ಕ್ಷೇತ್ರದ ಸೇವೆಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಜೆಡಿಎಸ್ ಪಕ್ಷದಲ್ಲಿ ನಾನು ಮಂತ್ರಿಯಾಗಿದ್ದು ಬೇರೆ ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಯಾಗಿರುವ ವ್ಯತ್ಯಾಸವೇ ಬೇರೆ ಎಂದು ತಿಳಿಸಿದರು.

30 ರಿಂದ 40 ಲಕ್ಷ ಬೆಲೆಬಾಳುವ ಜಾಗವನ್ನು ನಾಡಕಚೇರಿಗೆ ಯಜಮಾನ್ ಗುರುಮಲ್ಲಪ್ಪ ರವರ ಕುಟುಂಬ ಕೊಡುಗೆಯಾಗಿ ಕೊಟ್ಟಿದೆ. ಅವರಿಗೆ ಯಾವುದೇ ಸಂದರ್ಭದಲ್ಲೂ ಗೌರವವಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದರು.

ಪೌತಿ ಖಾತೆ, ಆರ್ ಟಿ ಸಿ ಇನ್ನಿತರ ಸಮಸ್ಯೆಗಳಿಗೆ ಯಾರು ಸಹ ತಹಸೀಲ್ದಾರ್ ಕಚೇರಿಯಲ್ಲಿ ಒಂದು ರೂ.ಕೊಡಬೇಡಿ, ಅಂತಹ ವಿಚಾರಗಳು ಇದ್ದರೆ ನಮಗೆ ತಿಳಿಸಿ. ಒಂದು ವರ್ಷದಲ್ಲಿ ತಹಸಿಲ್ದಾರ್ ಕಚೇರಿಯಲ್ಲಿರುವ ಹಳೆಯ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಹೇಳಿದರು.

ಶಾಸಕ ರಮೇಶ್ ಬಾಬು ಅವರು ಶ್ರೀರಂಗಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಎಂಟು ತಿಂಗಳಲ್ಲಿ 200 ಕೋಟಿ ರೂ ಅನುದಾನ ಲೋಕೋಪಯೋಗಿ ಇಲಾಖೆ ಹಾಗೂ ನೀರಾವರಿ ಇಲಾಖೆಯಿಂದ ಅಭಿವೃದ್ದಿಗೆ ಬಿಡುಗಡೆ ಮಾಡಿಸಿದ್ದಾರೆ, ಟೆಂಡರ್ ಕರೆಯಲಾಗಿದೆ. ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ .ಟಿಸಿ, ಲೈನ್ ಬದಲಾವಣೆ, ಕಂಬ ಬದಲಾವಣೆ ಇಂಧನ ಇಲಾಖೆಯ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ಮಾಡುತ್ತೇವೆ. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ
ಯಲ್ಲಿ ನೀವುಗಳು ಗಟ್ಟಿಯಾಗಿ ನಿಂತರೆ ನಮಗೆ ಶಕ್ತಿ ಬರುತ್ತದೆ ಎಂದು ಹೇಳಿದರು.

ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮಾತನಾಡಿ, ತಗ್ಗಹಳ್ಳಿ ಗ್ರಾಮದ ನಾಡಕಚೇರಿಗೆ 40 ಲಕ್ಷ ರು ಬೆಲೆಬಾಳುವ ಜಾಗವನ್ನು ದಾನದ ರೂಪದಲ್ಲಿ ಕೊಟ್ಟಿರುವ ದಾನಿಗಳಿಗೆ ಅಭಿನಂದನೆ ಸಲ್ಲಿಸಿದರು.
ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕನಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿಯವರ ಆಶೀರ್ವಾದದಿಂದ ಸೆಸ್ಕ್ ಪ್ರಥಮ ಅಧ್ಯಕ್ಷರಾಗಿ ನೇಮಕವಾಗಿದ್ದೇನೆ.

ಈ ಭಾಗದಲ್ಲಿ ಅವಶ್ಯಕವಾಗಿ ಬೇಕಾಗಿರುವ ಚೀರನಹಳ್ಳಿ ರಸ್ತೆಯ ಅಭಿವೃದ್ಧಿಗೆ ಟೆಂಡರ್ ಆಗಿದೆ ಕೆಲಸ ಪ್ರಾರಂಭಿಸುತ್ತೇವೆ .10 ಕೋಟಿ ರೂ ವೆಚ್ಚದಲ್ಲಿ ಈ ಭಾಗದ ಸುತ್ತಮುತ್ತಲ ಪಿಕಪ್ ನಾಲೆಗಳು ಅಭಿವೃದ್ಧಿ, ಶಾಲೆಗಳ ಮಂಜೂರಾತಿ, ಟಿಸಿ ಸಮಸ್ಯೆಯನ್ನು ಹಂತ ಹಂತವಾಗಿ ಬಗೆಹರಿಸುವ ಕೆಲಸ ಮಾಡುತ್ತೇವೆ. ನಿಮ್ಮ ನಂಬಿಕೆಗಳಿಗೆ ಎಳ್ಳಷ್ಟು ಕಪ್ಪು ಚುಕ್ಕೆ ಇಲ್ಲದ ರೀತಿ ಕೆಲಸ ಮಾಡುತ್ತೇವೆ ಸಮಯದ ಅವಕಾಶ ಕೊಡಿ ನಮ್ಮ ಮೇಲೆ ನಂಬಿಕೆ ಇಡಿ ವಿಶ್ವಾಸ ಇಟ್ಟು ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

ಬಿಎಂಸಿ ಕೇಂದ್ರ ಉದ್ಘಾಟನೆ

ಇದೇ ಸಂದರ್ಭದಲ್ಲಿ ತಗ್ಗಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಂಸಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು. ನಾಡಕಚೇರಿಗೆ ನಿವೇಶನ ನೀಡಿದ ದಾನಿ ತಗ್ಗಹಳ್ಳಿ ಗ್ರಾಮದ ಗುರು ಮಲ್ಲಪ್ಪ ರವರ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ತಹಸಿಲ್ದಾರ್ ಡಾ. ಶಿವಕುಮಾರ್ ಬಿರಾದಾರ, ಉಪ ತಹಸಿಲ್ದಾರ್ ಡಿ.ತಮ್ಮಣ್ಣಗೌಡ, ಮನಮುಲ್ ಅಧ್ಯಕ್ಷ ಬಿ. ಬೋರೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ತಗ್ಗಹಳ್ಳಿ ಕೃಷ್ಣ, ತಗ್ಗಹಳ್ಳಿ ಮಹೇಂದ್ರ, ಕೆ.ಎಚ್. ನಾಗರಾಜು, ಎಪಿಎಂಸಿ ಮಾಜಿ ಅಧ್ಯಕ್ಷೆ ಪಲ್ಲವಿ, ಜಯರಾಮ್, ರಾಜಣ್ಣ, ನಾಗಣ್ಣ, ಎಮ್.ಬಿ.ಕೃಷ್ಣ, ರುದ್ರಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!