ಲೋಕಸಭಾ ಚುನಾವಣೆಯ ಫಲಿತಾಂಶಗಳು ಬಂದ ತಕ್ಷಣ ಎನ್ಡಿಎ ಮೈತ್ರಿಕೂಟದ ಜೊತೆಗೆ ಇಂಡಿಯಾ ಮೈತ್ರಿಕೂಟ ಸಹ ಸರ್ಕಾರ ರಚನೆಯ ಕಸರತ್ತು ಪ್ರಾರಂಭಿಸಿತ್ತು,ಆದರೆ ಒಂದೆರೆಡು ದಿನ ಕಳೆದು ಐದನೇ ತಾರೀಖು ಖರ್ಗೆಜೀ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಬಹಿರಂಗವಾಗಿ ಸರ್ಕಾರ ರಚಿಸುವ ಪ್ರಸ್ತಾವದಿಂದ ಹಿಂದೆ ಸರಿದಿದೆ.
ಇದರ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿತಲೆಗಳ ಲೆಕ್ಕಾಚಾರ ಬೇರೆಯದೆ ಇದೆ ಎಂದು ದೆಹಲಿಯ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅದರಲ್ಲಿ ಮೊದಲನೇ ವಿಚಾರ ಎನ್ಡಿಎ ಮೈತ್ರಿಕೂಟಕ್ಕೆ ಬಹುಮತವಿದ್ದು ಬಹುಮತವಿಲ್ಲದ ಇಂಡಿಯಾ ಮೈತ್ರಿಕೂಟ ಕಷ್ಟಪಟ್ಟು ಸರ್ಕಾರ ರಚನೆ ಮಾಡುವ ದುಸ್ಸಾಹಸ ಮಾಡಬಾರದು ಎಂಬುದು, ಎರಡನೇಯದಾಗಿ ಮೋದಿಜೀ ಸೀಟುಗಳನ್ನು ಕಡಿಮೆ ಪಡೆದಿರಬಹುದು ಆದರೆ ಗೋದಿ ಮೀಡಿಯಾದಿಂದ ಕಟ್ಟಿಕೊಂಡಿರುವ ವರ್ಚಸ್ಸು ಕಡಿಮೆಯಾಗಿಲ್ಲ, ಆ ವರ್ಚಸ್ಸನ್ನು ಮೈತ್ರಿ ಸರ್ಕಾರದಲ್ಲಿ ಮೋದಿಜೀ ಪ್ರಧಾನಮಂತ್ರಿ ಆಗಲು ಬಿಟ್ಟರೆ ಮಿತ್ರ ಪಕ್ಷಗಳು ಕೊಡುವ ಕಾಟದಿಂದ ಮೋದಿಜೀ ವರ್ಚಸ್ಸು ತನಷ್ಟಕ್ಕೆ ತಾನೇ ನಾಶವಾಗುತ್ತೆ ಆನಂತರ ಇಂಡಿಯಾ ಮೈತ್ರಿ ಕೂಟದ ರಸ್ತೆ ಸುಗಮವಾಗಿ ಸಾಗುತ್ತೆ ಎಂಬುದು, ಮೂರನೇ ಅಂಶ ಬಿಜೆಪಿ ಒಳಗಿರುವ ಅಂತರಿಕ ಬಂಡಾಯ ಮೈತ್ರಿ ಸರ್ಕಾರದಲ್ಲಿ ನಿಚ್ಚಳವಾಗಿ ಹೊರಬಂದು ನಿತಿನ್ ಗಾಡ್ಕರಿ, ಶಿವರಾಜ್ ಸಿಂಗ್ ಚೌಹನ್ ತರಹದವರು ಮೋದಿಜೀ ಮೇಲೆ ಮುಗಿಬೀಳಲಿದ್ದು ಆಗ ಮೋದಿಜೀ ತುಂಬಾ ದುರ್ಬಲವಾಗಿ ರಾಜಕೀಯವಾಗಿ ಮೆತ್ತಗಾದಾಗ ಬೇಕಾದರೆ ಸರ್ಕಾರ ರಚಿಸುವ ಅವಕಾಶಗಳನ್ನು ಹುಡುಕೋಣ ತಕ್ಷಣಕ್ಕೆ ಬೇಡ ಎನ್ನುವ ಯೋಜನೆ ಇದೆ ಎಂದು ತಿಳಿದುಬಂದಿದೆ.




