Friday, September 20, 2024

ಪ್ರಾಯೋಗಿಕ ಆವೃತ್ತಿ

ಚಿಕ್ಕಮಗಳೂರು: ಗರ್ಭಿಣಿ ಮಹಿಳೆ ಸೇರಿದಂತೆ ದಲಿತ ಕಾರ್ಮಿಕರ ಮೇಲೆ ಹಲ್ಲೆ; ಎಫ್ ಐ ಆರ್ ದಾಖಲು

ಚಿಕ್ಕಮಗಳೂರಿನ ಹುಣಸೆಹಳ್ಳಿಪುರದಲ್ಲಿ ಸವರ್ಣೀಯ ಜಾತಿಯ ಭೂಮಾಲೀಕ, ಮಹಿಳೆಯರೂ ಸೇರಿದಂತೆ ಸುಮಾರು 14 ಮಂದಿ ದಲಿತ ಕಾರ್ಮಿಕರನ್ನು ಕೂಡಿ ಹಾಕಿ, ದೌರ್ಜನ್ಯ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.

ದೌರ್ಜನ್ಯ ಹೆಸಗಿರುವ ಎಸ್ಟೇಟ್ ಮಾಲೀಕ ಜಗದೀಶ್ ಗೌಡ ಭಾರತೀಯ ಜನತಾ ಪಕ್ಷದ ಸ್ಥಳೀಯ ಮುಖಂಡ ಎಂದು ತಿಳಿದು ಬಂದಿದೆ.

ಚಿಕ್ಕಮಗಳೂರು ತಾಲೂಕು ಠಾಣೆಯಿಂದ 20 ಕಿಲೋಮೀಟರ್ ದೂರದಲ್ಲಿರುವ ಹುಣಸೆಹಳ್ಳಿಪುರದಲ್ಲಿ ಈ ಘಟನೆ ನಡೆದಿದ್ದು, ದಲಿತ ಕಾರ್ಮಿಕರ ಮೇಲೆ ದೌರ್ಜನ್ಯ ಎಸಾಗಲಾಗಿದೆ ಎಂದು ಕಾರ್ಮಿಕ ಮಹಿಳೆ ಅರ್ಪಿತ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ಇಮ್ರಾನ್ ಖಾನ್ ತಮ್ಮ ಟ್ವಿಟರ್ ನಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡಿರುತ್ತಾರೆ.

ಸುಮಾರು ಮೂರು ತಿಂಗಳಿನಿಂದ ಜಗದೀಶ್ ಗೌಡರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡು ಲೈನ್ ಮನೆಗಳಲ್ಲಿ ವಾಸವಾಗಿದ್ದೆವು. ತನ್ನ ಗಂಡನ ಸಂಬಂಧಿಯಾದ ಸತೀಶ ಮಂಜು ಅವರಿಗೂ ಹಾಗೂ ಅಲ್ಲಿಯೇ ಪಕ್ಕದ ಮನೆಯವರಿಗೆ ಮಕ್ಕಳ ವಿಚಾರದಲ್ಲಿ ಗಲಾಟೆ ಆಗಿತ್ತು. ಆ ಸಮಯದಲ್ಲಿ ಎಸ್ಟೇಟ್ ಮಾಲೀಕರಾದ ಜಗದೀಶ್ ಗೌಡರಿಗೂ ಬೈದು ಹೊಡೆದಾಟ ನಡೆಸಿದ್ದರು. ಹೀಗಾಗಿ ಮಂಜು  ನಾವು ಇಲ್ಲಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಬೇರೆ ಕಡೆಗೆ ಕೆಲಸ ಹೋಗುವುದಾಗಿ ಹೇಳಿದ್ದೆವು.

“>

 

ಈ ವಿಚಾರವಾಗಿ ಸಿಟ್ಟಾದ ಸವರ್ಣೀಯ ಜಗದೀಶ್ ಗೌಡ ನಮ್ಮಿಂದ ಪಡೆದ ಸಾಲದ ಹಣವನ್ನು ಕೊಟ್ಟು ಹೋಗಲು ಹೇಳಿದ್ದರು. ಹಣವನ್ನು ಹೊಂದಿಸಿ ಬರಲು ಹೋಗಿದ್ದ ಮಂಜು ಮತ್ತು ಸತೀಶ ಮರುದಿನ ಬಂದಿಲ್ಲ ಎಂದು ಕೆಟ್ಟದಾಗಿ ಬೈದಿದ್ದು ಅಲ್ಲದೆ, ಸ್ಥಳದಲ್ಲಿದ್ದ ವಿಜಯ್ ಹಾಗು ತಿಲಕ್ ಎಂಬುವರ ಮೇಲೆ ಹಲ್ಲೆಯನ್ನು ನಡೆಸಿದ್ದಾರೆ.


ಇದನ್ನೂ ಓದಿ:ಅರಳುವ ಮುನ್ನವೇ ಬಾಡಿದ ಮುಗ್ಧ ಕಂದನ ಸಾವಿಗೆ ಹೊಣೆ ಯಾರು?


 

ಈ ಘಟನೆಯ ನಂತರವೂ ನಮ್ಮನ್ನು ಲೈನ್ ಮನೆಗಳಲ್ಲಿ ಕೂಡಿ ಹಾಕಿದ್ದರು. ನನಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ಅಲ್ಲಿಂದ ಬಿಡಿಸಿ ಆಸ್ಪತ್ರೆಗೆ ಕರೆದೋಯ್ಯಲಾಯಿತು.

ಹಲ್ಲೆಗೆ ಒಳಗಾದ ಗರ್ಭಿಣಿ ಅರ್ಪಿತ ಅವರಿಗೆ ಗರ್ಭಪಾತ ಆಗಿದೆ ಎಂದು ತಿಳಿದು ಬಂದಿದೆ. ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಎಸ್ಟೇಟ್ ಮಾಲಿಕ ಜಗದೀಶ್ ಮೇಲೆ ವಿವಿಧ ಆರೋಪಗಳು ಬರುತ್ತಿವೆ. ಕೂಲಿ ಕಾರ್ಮಿಕ ದಲಿತ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವನ್ನು ಜಗದೀಶ್ ಗೌಡ ಯತ್ನಿಸಿದ್ದ ಎಂದು ಮಹಿಳೆಯರು ಕಣ್ಣೀರು ಹಾಕಿ ದೂರನ್ನು ದಲಿತ ಮುಖಂಡರಿಗೆ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!