Friday, September 20, 2024

ಪ್ರಾಯೋಗಿಕ ಆವೃತ್ತಿ

ರಾಜ್ಯದಲ್ಲಿ ಶೇ.24.7 ರಷ್ಟು ಬಾಲ್ಯವಿವಾಹ ಪ್ರಮಾಣ: ಮಧು ಮಾದೇಗೌಡ ಪ್ರಶ್ನೆಗೆ ಹೆಬ್ಬಾಳ್ಕರ್ ಮಾಹಿತಿ

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (NFHS-5) ಅನ್ವಯ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ ಪ್ರಮಾಣ ಬಾಲಕಿಯರದು ಶೇ 24.7 ರಷ್ಟಿದ್ದರೆ, ಬಾಲಕರದು ಶೇ 7.2ರಷ್ಟಿದೆ. ಹಾಗೇ, ಪಟ್ಟಣ, ನಗರ ಪ್ರದೇಶದಲ್ಲಿ ಬಾಲ್ಯವಿವಾಹ ಪ್ರಮಾಣ ಬಾಲಕಿಯರದು ಶೇ 16.1 ರಷ್ಟಿದ್ದರೆ, ಬಾಲಕರದು ಶೇ 4.5 ರಷ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾರಿಕರ ಸಬಲೀಕರಣ ಸಚಿವೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು 2019-20ನೇ ಸಾಲಿನಲ್ಲಿ ನಡೆಸಿದ NFHS-5 ಅನ್ವಯ ಈ ಮಾಹಿತಿ ಬೆಳಕಿಗೆ ಬಂದಿದೆ. ಬಡತನ, ಅಜ್ಞಾನ, ಮೂಢನಂಬಿಕೆ, ಅರಿವಿನ ಕೊರತೆ, ಅನಕ್ಷರತೆ ಸೇರಿದಂತೆ ಹೆಚ್ಚಿನ ಕಾರಣಗಳಿಗಾಗಿ ಬಾಲ್ಯವಿವಾಹಗಳು ಗೌಪ್ಯವಾಗಿ ನಡೆಯುತ್ತಿದ್ದು ಪ್ರಕರಣಗಳು ನಂತರ ಬೆಳಕಿಗೆ ಬರುತ್ತಿವೆ. ಬಾಲ್ಯವಿವಾಹಗಳನ್ನು ಸಂಪೂರ್ಣ ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

₹ 32,250 ಕೋಟಿ ಮೌಲ್ಯದ ಬೆಳೆ ನಷ್ಟ

ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ಬಿದ್ದಂತಹ ಹೆಚ್ಚಿನ ಮಳೆಯಿಂದಾಗಿ ರೂ. 6,342.07 ಕೋಟಿಗಳಷ್ಟು ಹಾಗೂ 2023-24ನೇ ಸಾಲಿನಲ್ಲಿ ಮಳೆ ಕೊರತೆಯಿಂದಾಗಿ ರೂ. 32,250.48 ಕೋಟಿಗಳಷ್ಟು ಮೌಲ್ಯದ ವಿವಿಧ ಬೆಳೆಗಳ ನಷ್ಟವನ್ನು ಅಂದಾಜಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ 25.38 ಲಕ್ಷ ಹೆಕ್ಟೇರ್ ಗುರಿಗೆ ಅನುಗುಣವಾಗಿ 18.43 ಲಕ್ಷ ಹೆಕ್ಟೇರ್ (ಡಿಸೆಂಬರ್ 2ರವರೆಗೆ) ಪ್ರದೇಶದಲ್ಲಿ ಬಿತ್ತನೆಯಾಗಿದೆ. 2023-24ನೇ ಸಾಲಿನ ಬೇಸಿಗೆ ಹಂಗಾಮಿಗೆ ವಿವಿಧ ನೀರಾವರಿ ಮೂಲಗಳ ಮೂಲಕ 6.54 ಲಕ್ಷ ಹೆಕ್ಟೇರ್ ಬಿತ್ತನೆ ಕ್ಷೇತ್ರದ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಪ್ರಸ್ತಕ ಸಾಲಿನ್ಲಲಿ ಈಶಾನ್ಯ ಮಾರುತ ಮಳೆಯು (ಅಕ್ಟೋಬರ್ ಮಾಹೆಯಿಂದ ಡಿಸೆಂಬರ್ 5ರ ವರೆಗೆ) ವಾಡಿಕೆ 175 ಮಿ.ಮೀಗೆ ಅನುಗುಣವಾಗಿ ವಾಸ್ತಾವಿಕ ಮಳೆ 109 ಮಿ.ಮೀ. ಆಗಿರುತ್ತದೆ. ಈ ಅವಧಿಯಲ್ಲಿ 14 ಜಿಲ್ಲೆಗಳ 98 ತಾಲ್ಲೂಕುಗಳಲ್ಲಿ ಕಡಿಮೆ ಹಾಗೂ 10 ಜಿಲ್ಲೆಗಳ 88 ತಾಲ್ಲೂಕುಗಳಲ್ಲಿ ಅತ್ಯಲ್ಪ ಮಳೆಯಾಗಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

ಮೂರು ವರ್ಷಗಳಲ್ಲಿ ಒಟ್ಟು 1,042 ಬಾಲ್ಯವಿವಾಹ

ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,042 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. 2020-21ರಲ್ಲಿ 296, 2021-22ರಲ್ಲಿ 418 ಹಾಗೂ 2022-23ರಲ್ಲಿ 328 ಪ್ರಕರಣಗಳು ಬೆಳಕಿಗೆ ಬಂದಿವೆ. ಮಂಡ್ಯ, ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಅಂದಾಜು ಸಂಖ್ಯೆ 59,000 ರಷ್ಟಿದೆ. ರಾಜ್ಯ, ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯವಿವಾಹ ನಿಷೇದಾಧಿಕಾರಿಗಳೆಂದು ಗುರುತಿಸಲಾಗಿದೆ ಎಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!